ಗುರುವಾರ , ಮೇ 26, 2022
23 °C

ನಿರ್ಲಕ್ಷ್ಯ: ಮಾದರಿ ಸೇತುವೆಗೆ ಈಗ ಅಪಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವದುರ್ಗ: ಏಷ್ಯಾ ಖಂಡದಲ್ಲಿಯೇ ಮಾದರಿ ಯಾಗಿರುವ ತಾಲ್ಲೂಕಿನ ಹೂವಿನಹೆಡ್ಗಿ ಗ್ರಾಮದ ಮುಂದೆ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸ ಲಾಗಿರುವ ಸೇತುವೆ ಒಂದು ವಿಶಿಷ್ಟ ಮತ್ತು ವಿಶೇಷವಾಗಿದ್ದು, ಸಂಬಂಧಿಸಿದ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾ ಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈಗ ಅಪಾಯದಲ್ಲಿ ಇದೆ.ರಾಯಚೂರು-ಗುಲ್ಬರ್ಗ ಸೇರಿದಂತೆ ಮಹಾ ರಾಷ್ಟ ಮತ್ತು ಇತರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸಲು ಕಳೆದ 38 ವರ್ಷಗಳ ಹಿಂದೆ ರಾಜ್ಯ ಸರ್ಕಾರ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಈ ಸೇತುವೆಗೆ ಒಂದು ವಿಶೇಷ ತಂತ್ರಜ್ಞಾನವನ್ನು ಬಳಸಲಾಗಿದೆ ಎನ್ನಲಾಗಿದೆ.ಏಷ್ಯಾ ಖಂಡದ ವಿವಿಧ ಕಡೆ ವಿಶೇಷ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾದ ಸೇತುವೆಗಳ ಪೈಕಿ ಹೂವಿನಹೆಡ್ಗಿ ಸೇತುವೆ ಸಹ ಒಂದಾಗಿದೆ. ಮಳೆಗಾಲದಲ್ಲಿ ನಾರಾಯಣಪೂರ ಆಣೆಕಟ್ಟೆಯಿಂದ ಕೃಷ್ಣಾ ನದಿಗೆ ಹೊರ ಬಿಡುವ ಹೆಚ್ಚುವರಿ ನೀರಿಗೆ ಈ ಸೇತುವೆ ಪ್ರತಿ ವರ್ಷ ಮುಳುಗಡೆಯಾಗುವುದು ಮಾತ್ರ ತಪ್ಪಿಲ್ಲ. ಕನಿಷ್ಠ ಒಂದು ವಾರ ನೀರಿನಲ್ಲಿ ಮುಳುಗಡೆಯಾಗುತ್ತಿರುವ ಸೇತುವೆ 2005ರಲ್ಲಿ ಮಾತ್ರ 27 ದಿನಗಳ ಕಾಲ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಡೆಯಾಗಿರುವ ಕುರಿತು ದಾಖಲೆ ಇದೆ. ಇದೆ ಸಂದರ್ಭದಲ್ಲಿ ಸೇತುವೆಯ ಕೆಲವು ಭಾಗ ಹಾನಿ ಸಂಭವಿಸಿ ಪ್ರಯಾಣಿಕರಿಗೆ ಇನ್ನಿಲ್ಲದ ಭಯ ಉಂಟು ಮಾಡಿದ ನಂತರ ಅಲ್ಲಿಂದ ಇಲ್ಲಿವರಿಗೂ ಅದರ ದುರಸ್ತಿಗೆ ಮಾತ್ರ ಇಲಾಖೆ ಮುಂದಾಗಿಲ್ಲ.ದಟ್ಟ ಸಂಚಾರ: ಕಳೆದ 30 ವರ್ಷದ ಹಿಂದಿನ ವಾಹನ ಸಂಚಾರಕ್ಕೆ ಮತ್ತು ಇತ್ತೀಚಿನ ವಾಹನ ಸಂಚಾರಕ್ಕೆ ಭಾರೀ ಬದಲಾವಣೆ ಕಾಣಲಾಗಿದೆ. ಈಗಾಗಲೇ ಈ ಹೆದ್ದಾರಿಯನ್ನು ಇಲಾಖೆ ರಾಜ್ಯ ಹೆದ್ದಾರಿ ಎಂದು ಸಹ ಘೋಷಣೆ ಸಹ ಮಾಡಿದೆ. ಕಳೆದ ಎರಡು ವರ್ಷಗಳಿಂದ ತಾಲ್ಲೂಕಿನ ಹಲವೆಡೆ ಮರುಳು ಲಾರಿಗಳ ಹಾವಳಿ ಮೀತಿಮೀರಿದರೆ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ರಾಜ್ಯಗಳಿಗೆ ಸಂಪರ್ಕ ಕಲ್ಪಿಸಲು ಇದೇ ಸೇತುವೆ ಈಗ ಮುಖ್ಯವಾಗಿರುವುದರಿಂದ ಸೇತುವೆಗೆ ಸಂಚಾರದ ಭಾರ ಹೆಚ್ಚಾದ ಕಾರಣ ಇನ್ನೊಂದು ಬಾರಿ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುವುದು ಒಳ್ಳೆಯದು ಎಂಬುವುದು ಸಾರ್ವಜನಿಕರ ಆಭಿಪ್ರಾಯವಾಗಿದೆ.ಆದರೆ ಸೇತುವೆಯ ಪಕ್ಕದ ಕಬ್ಬಿಣದ ಕಂಬಗಳು ಮಾತ್ರ ಕಳೆದ ಐದು ವರ್ಷದ ಹಿಂದೆ ಮುರಿದು ಬಿದ್ದಿವೆ. ಸೇತುವೆ ಮೇಲಿನ ಸಿಮೆಂಟ್ ಕಿತ್ತಿ ಹೋಗಿರುವುದರಿಂದ  ಭಾರಿ ಗಾತ್ರದ ಬಿರುಕು ಬಿಟ್ಟದೆ. ಇದರಿಂದ ದನಕರುಗಳ ಕಾಲುಗಳು ಸಿಕ್ಕಿಹಾಕಿಕೊಂಡು ಕೆಲವು ಬಾರಿ ತೊಂದರೆ ಪಟ್ಟರೆ ಇನ್ನೂ ದ್ವಿಚಕ್ರ ವಾಹನಗಳ ಚಕ್ರಗಳು ಸಹ ಸಿಕ್ಕಿಹಾಕಿಕೊಳ್ಳುವುದು ಸಾಮಾನ್ಯವಾಗಿದೆ. ಕಬ್ಬಣದ ಕಂಬಗಳು ಕಿತ್ತಿರುವುದರಿಂದ ಎದುರಿನಿಂದ ಬರುವ ವಹನಗಳು ಸ್ವಲ್ಪ ಅಯ ತಪ್ಪಿದರೇ ಅಪಾಯ ಸಂಭವಿಸುವದಂತೂ ಗ್ಯಾರಂಟಿ. ಇದರಿಂದ ಪ್ರತಿನಿತ್ಯ ವಾಹನ ಸವಾರರಿಗೆ ಭೀತಿ ಉಂಟಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.