ಶನಿವಾರ, ಏಪ್ರಿಲ್ 17, 2021
31 °C

ನಿರ್ವಹಣೆ ಇಲ್ಲದೆ ಬಸದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಾಚೀನ ಜೈನ ಬಸದಿಗಳನ್ನು ಸುರಕ್ಷತೆ ದೃಷ್ಟಿಯಿಟ್ಟುಕೊಂಡೇ ನಿರ್ಮಿಸಲಾಗಿದ್ದರೂ, ನೂರಾರು ವರ್ಷಗಳ ಬಳಿಕ ಅಡಿಗಲ್ಲು ಶಿಥಿಲವಾಗುತ್ತಾ ಹೋಗುತ್ತದೆ. ದಿನನಿತ್ಯ ನಿರ್ವಹಣೆ ಅತೀ ಅವಶ್ಯವಾಗಿದೆ. ಅರ್ಧ ಇಂಚು ಬಿರುಕುಬಿಟ್ಟರೂ ಇಡೀ ಕಟ್ಟಡವೇ  ನೆಲಕ್ಕುರುಳಬಹುದು. ಈಗ ಮೂಡುಬಿದಿರೆಯ ಸಾವಿರ ಕಂಬದ ಬಸದಿ ಸ್ಥಿತಿಯೂ ಹಾಗೆಯೇ ಆಗಿದೆ ಎನಿಸಿದೆ. ವಿಪರೀತ ಮಳೆ ಬೀಳುವ ಮೂಡುಬಿದಿರೆಯಲ್ಲಿ ಮಳೆಗಾಲದಲ್ಲಿ ಕನಿಷ್ಠ 4,500 ಮಿ.ಮೀ. ಮಳೆ ನಿರೀಕ್ಷಿಸಬಹುದಾಗಿದೆ.

 

ನೀರು ಹರಿಯಲು ಸರಿಯಾದ ಕಿಂಡಿ, ಚರಂಡಿ, ಕಾಲುವೆ ಇಲ್ಲದಿದ್ದಾಗ ಆವರಣದೊಳಗೆ ಕೊಳವನ್ನು ನಿರ್ಮಿಸಿದಂತಾಗುತ್ತದೆ. ಮಳೆ ನೀರು ಭೂಮಿಗೆ ಇಂಗುವುದಕ್ಕಿಂತಲೂ, ಕಟ್ಟಡದ (ಸಾವಿರ ಕಂಬದ ಬಸದಿ) ಅಡಿಪಾಯದೊಳಗೆ ತೂರಿ ಹೋಗುವುದು ಸಾಮಾನ್ಯ. ಹೀಗಾಗಿ ಪ್ರತಿವರ್ಷವೂ ಯಾವುದಾದರೂ ಒಂದು ಭಾಗದಲ್ಲಿ ಬಿರುಕು ಕಂಡುಬರುವುದು ಸಹಜ.

 

ಅಂದರೆ ಇಡೀ ಬಸದಿಯ ಅಡಿಪಾಯ(ಬುನಾದಿ) ಶಿಥಿಲಗೊಂಡಿರುವ ಕುರಿತು ದೇವಾಲಯ ವಾಸ್ತುಶಿಲ್ಪ ತಜ್ಞರಿಂದ ಪರಿಶೀಲಿಸಿ, ತಕ್ಕ ಪರಿಹಾರ ಕಂಡುಕೊಳ್ಳಬೇಕು. 700 ವರ್ಷಗಳ ಹಳೆಯ ಈ ಜಿನಾಲಯದ ಸಂರಕ್ಷಣೆ, ನಿರ್ವಹಣೆ ವ್ಯವಸ್ಥಿತವಾಗಿಲ್ಲದ ಕಾರಣ ಆಗೊಮ್ಮೆ, ಈಗೊಮ್ಮೆ ಕಲ್ಲುಪಡಿ, ಹಾಸುಗಲ್ಲು, ಸ್ತಂಭಗಳು, ಜಾರುತ್ತಿರುತ್ತವೆ, ಇಲ್ಲವೇ ಬಿರುಕು ಕಂಡು ವಾಲಿರುತ್ತವೆ.ಕರ್ನಾಟಕ ಪ್ರಾಚ್ಯ ಸಂರಕ್ಷಣಾ ನಿರ್ದೇಶನಾಲಯ ಮತ್ತು ಭಾರತೀಯ ಪುರಾತತ್ವ ಇಲಾಖೆಯ ವಿಶೇಷ ಪರಿಣಿತರನ್ನೂ ಕರೆಯಿಸಿ ಸಾವಿರ ಕಂಬದ ಬಸದಿಯ ಸಂರಕ್ಷಣೆಗೆ ಯಥಾಸ್ಥಿತಿ ಕಾಪಾಡಲು ಸ್ಥಳೀಯ ಜೈನಮಠ ಆಡಳಿತವು ಸರ್ಕಾರವನ್ನು ಕೋರುವುದಕ್ಕೆ ಇದು ಸಕಾಲವಾಗಿದೆ. ಅಳಿಸುವುದಕ್ಕಿಂತ ಉಳಿಸುವುದು ಮುಖ್ಯ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.