ಶುಕ್ರವಾರ, ಮೇ 27, 2022
21 °C

ನಿಲ್ಲದ ಪೈಲಟ್‌ಗಳ ಮುಷ್ಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಏರ್ ಇಂಡಿಯಾ ಪೈಲಟ್‌ಗಳ ಹಾಗೂ ಸರ್ಕಾರದ ನಡುವಿನ ಸಂಘರ್ಷ ಮತ್ತಷ್ಟು ಬಿಗಡಾಯಿಸಿದೆ.ಬಿಕ್ಕಟ್ಟನ್ನು ಬಗೆಹರಿಸಲು ಪ್ರಧಾನಿ ಮಧ್ಯಪ್ರವೇಶಿಸಬೇಕು ಎಂದು 49 ದಿನಗಳಿಂದ ಮುಷ್ಕರ ನಡೆಸುತ್ತಿರುವ ಪೈಲಟ್‌ಗಳು ಆಗ್ರಹಿಸಿದ್ದಾರೆ.ಈ ಮಧ್ಯೆ,  ಪೈಲಟ್‌ಗಳು ಮುಂದಿಟ್ಟಿರುವ ಬೇಡಿಕೆಗೆಗಳಿಗೆ ಮಣಿಯದಿರುವ ಕೇಂದ್ರ ಸರ್ಕಾರ, ಮುಷ್ಕರ ನಿರತ ಪೈಲಟ್‌ಗಳು ಯಾವುದೇ `ಷರತ್ತು~ ಹಾಕದೆ ಕೆಲಸಕ್ಕೆ ಮರಳಬೇಕು ಎಂದು ಸ್ಪಷ್ಟಪಡಿಸಿದೆ. `ಅವರು ಮತ್ತೆ ಕೆಲಸಕ್ಕೆ ಹಾಜರಾಗಬೇಕು ಎಂದು ನಾವು ಬಯಸುತ್ತೇವೆ.ಯಾವುದೇ ಷರತ್ತು ಒಡ್ಡದೇ ಕೆಲಸಕ್ಕೆ ಹಿಂದಿರುಗಬೇಕು.  ಮುಷ್ಕರ ನಡೆಸುತ್ತೇವೆ ಎಂದು ಅವರು ನಮಗೆ ನೋಟಿಸ್ ನೀಡಿಲ್ಲ. ನಡೆಸುತ್ತಿರುವ ಮುಷ್ಕರ ಕಾನೂನು ಉಲ್ಲಂಘನೆಯಾಗಿದೆ ಎಂದು ಹೈಕೋರ್ಟ್ ಹೇಳಿದೆ. ಯಾವ ವಿಚಾರಗಳ ಬಗ್ಗೆ   ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬುದೇ ಗೊತ್ತಿಲ್ಲ. ಅವರಿಗೂ ಇದು ತಿಳಿದಿಲ್ಲ.ಹೀಗಿರುವಾಗ ನಾವೇನು ಮಾಡಲು ಸಾಧ್ಯ~ ಎಂದು ನಾಗರಿಕ ವಿಮಾನಯಾನ ಸಚಿವ  ಅಜಿತ್ ಸಿಂಗ್ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.