ನಿವೃತ್ತರ ಚಿಕಿತ್ಸೆ ವೆಚ್ಚ ಸರ್ಕಾರವೇ ಭರಿಸಲಿ

7

ನಿವೃತ್ತರ ಚಿಕಿತ್ಸೆ ವೆಚ್ಚ ಸರ್ಕಾರವೇ ಭರಿಸಲಿ

Published:
Updated:
ನಿವೃತ್ತರ ಚಿಕಿತ್ಸೆ ವೆಚ್ಚ ಸರ್ಕಾರವೇ ಭರಿಸಲಿ

ಉಡುಪಿ: ನಿವೃತ್ತರಾದ ಪೊಲೀಸರಿಗೆ ವೈದ್ಯಕೀಯ ಸೇವೆಗಳ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಸಶಸ್ತ್ರ ಪೊಲೀಸ್ ಪಡೆಯ ನಿವೃತ್ತ ಸಹಾಯಕ ಉಪನಿರೀಕ್ಷ ಡಿ.ಕುಂಞಕಣ್ಣ ಇಲ್ಲಿ ಸರ್ಕಾರವನ್ನು ಆಗ್ರಹಿಸಿದರು. ರಾಜ್ಯ ಪೊಲೀಸ್ ಧ್ವಜ ದಿನಾಚರಣೆ ಪ್ರಯುಕ್ತ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಧ್ವಜ ದಿನಾಚರಣೆಯಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.ಅಲ್ಲದೇ ನಿವೃತ್ತ ಪೊಲೀಸರಿಗೆ ರಾಜ್ಯದಲ್ಲಿ ಸರ್ಕಾರದಿಂದ ಪಡಿತರ ಸಿಗುವಂತೆ ರಾಜ್ಯ ಪೊಲೀಸ್ ಅಧೀಕ್ಷಕರು ಪ್ರಯತ್ನ ಮಾಡಬೇಕು. ಹಾಗೆಯೇ ಸೇವಾವಧಿಯಲ್ಲಿ ಹೆಚ್ಚಿನ ಸೇವೆ ಸಲ್ಲಿಸಿದವರಿಗೆ ಮುಂಬಡ್ತಿ ದೊರೆಯಬೇಕು ಎಂದರು. ಈ ಸಂದರ್ಭ ಅವರು ಧ್ವಜ ದಿನಾಚರಣೆ ನಿಮಿತ್ತ ಸ್ಟಿಕ್ಕರ್ ಬಿಡುಗಡೆ ಮಾಡಿ 16 ಮಂದಿಗೆ ಕ್ಷೇಮನಿಧಿ ಸೌಲಭ್ಯ ವಿತರಿಸಿದರು.ಕುಂದಾಪುರ ಎಎಸ್‌ಪಿ ರಾಮ್ ನಿವಾಸ್ ಸೆಪಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.  ಜಿಲ್ಲಾ ಎಸ್‌ಪಿ ಡಾ.ರವಿಕುಮಾರ್, ಡಿವೈಎಸ್‌ಪಿ ಜಯಂತ್ ಶೆಟ್ಟಿ, ಬಿ.ಮನಮೋಹನ್ ರಾವ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry