ಸೋಮವಾರ, ಆಗಸ್ಟ್ 26, 2019
21 °C

`ನಿವೃತ್ತಿಯ ನಂತರ ಪ್ರವೃತ್ತಿಯನ್ನು ಜಾಗೃತಗೊಳಿಸಿ'

Published:
Updated:

ಮಹಾಲಿಂಗಪುರ: ಸುದೀರ್ಘ ಕಾಲದ ಸರಕಾರಿ ಸೇವೆಯ ನಂತರ ಕೆಲಸಗಳನ್ನು ಮಾಡಿ ಏಕತಾನತೆಯಿಂದ ಕೆಲಸದೆಡೆಗಿನ ಗಮನವೇ ಹೆಚ್ಚಾಗಿ ಉದ್ಯೋಗಿಯ ಪ್ರವೃತ್ತಿಗಳು ಸುಪ್ತವಾಗಿರುತ್ತವೆ, ನಿವೃತ್ತಿಯ ನಂತರದ ಬದುಕನ್ನು ಚಲನಾತ್ಮಕವಾಗಿರಿಸಿಕೊಳ್ಳಬೇಕೆಂದರೆ ಸುಪ್ತವಾಗಿರುವ ಪ್ರವೃತ್ತಿಗಳನ್ನು ಜಾಗೃತಿಗೊಳಿಸಿಕೊಳ್ಳುವ ಅನಿವಾರ್ಯತೆ ಇದೆ. ವೃತ್ತಿಯಲ್ಲಿಯ ಅನುಭವಗಳ ಆಧಾರದ ಮೇಲೆ ಸಮಾಜಕ್ಕೆ ಪ್ರಯೋಜನ ಆಗುವ ಕಾರ್ಯಗಳಲ್ಲಿ ನಿವೃತ್ತರು ತೊಡಗಿಕೊಳ್ಳಬೇಕು ಎಂದು ವಿಶ್ರಾಂತ ಕೃಷಿ ಅಧಿಕಾರಿ `ಭಾರತ ಭೂಷಣ' ಪ್ರಶಸ್ತಿ ಪುರಸ್ಕೃತ ಎಫ್.ಟಿ.ಸಂಶಿ ಹೇಳಿದರು.ಮುಧೋಳ ತಾಲ್ಲೂಕು ಸರಕಾರಿ ಹಾಗೂ ಅರೆ ಸರಕಾರಿ ನಿವೃತ್ತ ನೌಕರರ ಸಂಘ ಏರ್ಪಡಿಸಿದ ಸತ್ಕಾರ ಸಮಾರಂಭದಲ್ಲಿ ಅವರು ತಮಗೆ ದೊರೆತ `ಭಾರತ ಭೂಷಣ' ಪ್ರಶಸ್ತಿಗಾಗಿ ಸತ್ಕಾರ ಸ್ವೀಕರಿಸಿ ಮಾತನಾಡಿದರು. ಅತಿಥಿಗಳಾಗಿದ್ದ ವಿಶ್ರಾಂತ ಪ್ರಾಧ್ಯಾಪಕ ಅಣ್ಣಾಜಿ ಫಡತಾರೆ, `ನಿವೃತ್ತರು ಮನೋಸ್ಥೈರ್ಯ ಬೆಳೆಸಿಕೊಳ್ಳಬೇಕು' ಎಂದರು.ಸಂಘದ ಅಧ್ಯಕ್ಷ ಜಿ.ಎಸ್. ಸೋರಗಾಂವಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಘಟನಾ ಕಾರ್ಯದರ್ಶಿ ಜಿ.ಜಿ.ಹುಬ್ಬಳ್ಳಿ, ಕಾರ್ಯದರ್ಶಿ ಜಿ.ಎಸ್. ತೇರದಾಳ, ಗೌರವಾಧ್ಯಕ್ಷ  ಸಿ.ವಿ. ಹೊಸಮಠ, ಎಂ.ಜಿ . ಬಂಡಿ, ಎನ್.ಜಿ. ಗೊಲಭಾವಿ ಹಾಗೂ ಸಂಘದ ಇತರ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Post Comments (+)