ಭಾನುವಾರ, ಜೂನ್ 13, 2021
22 °C

ನಿವೃತ್ತಿ ಯೋಚನೆ ಸದ್ಯಕ್ಕಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): `ಸದ್ಯಕ್ಕೆ ನಿವೃತ್ತಿ ಹೇಳುವ ಯೋಚನೆ ಮಾಡಿಲ್ಲ. ಏಕೆಂದರೆ ಚೆನ್ನಾಗಿ ಆಡುತ್ತಿದ್ದಾಗ ನಿವೃತ್ತರಾಗುವುದು ಸ್ವಾರ್ಥ ಚಿಂತನೆ. 2015ರ ವಿಶ್ವಕಪ್‌ನಲ್ಲಿ ಆಡುವ ಬಗ್ಗೆ ಯೋಚನೆ ಮಾಡಿಲ್ಲ. ಆದರೆ ಪ್ರಯತ್ನಿಸುವುದನ್ನು ನಿಲ್ಲಿಸುವುದಿಲ್ಲ~ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.`ಯಾವಾಗ ವಿದಾಯ ಹೇಳಬೇಕು ಎಂಬ ವಿಷಯ ನನಗೆ ಗೊತ್ತಿದೆ. ಏಕೆಂದರೆ ಯಾರದ್ದೋ ಮಾತನ್ನು ಕೇಳಿ ನಾನು ಆಡಲು ಶುರು ಮಾಡಲಿಲ್ಲ. ವಿದಾಯ ಹೇಳಬೇಕು ಎಂದು ಸಲಹೆ ನೀಡುತ್ತಿರುವವರು ನನಗೆ ಭಾರತ ತಂಡದಲ್ಲಿ ಸ್ಥಾನ ದೊರಕಿಸಿಕೊಡಲಿಲ್ಲ~ ಎಂದಿದ್ದಾರೆ.`2015ರ ವಿಶ್ವಕಪ್ ಬಗ್ಗೆ ಏನು ಹೇಳಬೇಕೆಂದು ನನಗೆ ಗೊತ್ತಿಲ್ಲ. ಆದರೆ ನಾನು ಪ್ರಯತ್ನಿಸುತ್ತಲೇ ಇರುತ್ತೇನೆ. ಉಳಿದಿದ್ದು ದೇವರಿಗೆ ಬಿಟ್ಟಿದ್ದು. 2011ರ ವಿಶ್ವಕಪ್‌ನಲ್ಲಿ ಆಡುತ್ತೀರಾ ಎಂದು 2007ರ ವಿಶ್ವಕಪ್ ಮುಗಿದಾಗ ಕೇಳಿದ್ದರೆ ಉತ್ತರಿಸಲು ಕಷ್ಟವಾಗುತಿತ್ತು. ಈಗ ಕೂಡ ಅದೇ ಪರಿಸ್ಥಿತಿಯಲ್ಲಿದ್ದೇನೆ~ ಎಂದು ಲಿಟಲ್ ಚಾಂಪಿಯನ್ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.