ಮಂಗಳವಾರ, ಜನವರಿ 28, 2020
21 °C

ನಿವೃತ್ತ ಅಧಿಕಾರಿ ಪುತ್ರ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜರಾಜೇಶ್ವರಿನಗರ ಸಮೀಪದ ಬಿಎಚ್‌ಇಎಲ್‌ ಲೇಔಟ್‌­ನಲ್ಲಿ ವಿಜಯ್‌ ಜನಾರ್ದನ­ರಾವ್‌ (34) ಎಂಬುವರು ಗುರುವಾರ ಆತ್ಮ­ಹತ್ಯೆ ಮಾಡಿಕೊಂಡಿ­ದ್ದಾರೆ.ಬಿಎಚ್‌ಇಎಲ್‌ ಲೇಔಟ್ ಎರಡನೇ ಅಡ್ಡರಸ್ತೆ ನಿವಾಸಿ ಜಗನ್ನಾಥರಾವ್‌ ಎಂಬುವರ ಮಗನಾದ ವಿಜಯ್‌ ಅವರು ಚಾಮರಾಜಪೇಟೆಯಲ್ಲಿ ಜಿಮ್‌ ಸೆಂಟರ್‌ ನಡೆಸುತ್ತಿದ್ದರು.ಕುಟುಂಬ ಸದಸ್ಯರೆಲ್ಲಾ ಬೆಳಿಗ್ಗೆ ಸಂಬಂಧಿಕರ ಮದುವೆ ಸಮಾರಂಭಕ್ಕೆ ಹೋಗಿದ್ದ ಸಂದರ್ಭದಲ್ಲಿ ಅವರು ಮನೆಯಲ್ಲೇ ನೇಣು ಹಾಕಿಕೊಂಡಿ­ದ್ದಾರೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.ಮಾಗಡಿ ರಸ್ತೆಯ ಯುವತಿ­ಯೊಬ್ಬರ ಜತೆ 2014ರ ಜ.18ಕ್ಕೆ ಅವರ ಮದುವೆ ನಿಶ್ಚಯ­ವಾಗಿತ್ತು. ಜಗನ್ನಾಥರಾವ್‌ ಅವರು ಹೆಡ್‌ ಕಾನ್‌ಸ್ಟೆಬಲ್‌ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ರಾಜರಾಜೇಶ್ವರಿನಗರ ಠಾಣೆಯಲ್ಲಿ ದೂರು ದಾಖಲಾಗಿದೆ.ಅಪಘಾತ: ವೃದ್ಧೆ ಸಾವು

ಕೊತ್ತನೂರು ಮುಖ್ಯರಸ್ತೆಯಲ್ಲಿ ಗುರುವಾರ ನಸುಕಿನಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ.ಮೃತರ ವಯಸ್ಸು ಸುಮಾರು 70 ವರ್ಷ. ಆದರೆ, ಅವರ ಗುರುತು ಪತ್ತೆ­ಯಾಗಿಲ್ಲ.

ಅವರು ರಸ್ತೆ ದಾಟುತ್ತಿದ್ದ ಸಂದರ್ಭ­ದಲ್ಲಿ ವಾಹನ ಡಿಕ್ಕಿ ಹೊಡೆದಿ­ರುವುದರಿಂದ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ನಂತರ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)