ಶುಕ್ರವಾರ, ನವೆಂಬರ್ 22, 2019
23 °C

ನಿವೃತ್ತ ಮುಖ್ಯ ನ್ಯಾಯಮೂರ್ತಿ ವರ್ಮಾ ನಿಧನ

Published:
Updated:

ನವದೆಹಲಿ  (ಪಿಟಿಐ):  ಸುಪ್ರೀಂ  ಕೋರ್ಟ್‌ನ  ನಿವೃತ್ತ ಮುಖ್ಯ ನ್ಯಾಯಮೂರ್ತಿ ಜೆ.ಎಸ್.  ವರ್ಮಾ ಅವರು (80) ಸೋಮವಾರ ರಾತ್ರಿ ನಿಧನರಾದರು.ಗುಡಗಾಂವ್‌ನ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದ ಅವರು, ವಿವಿಧ ಅಂಗಾಂಗಗಳ ವೈಫಲ್ಯದಿಂದ ಕೊನೆಯುಸಿರೆಳೆದರು ಎಂದು ವರ್ಮಾ ಅವರು ಕುಟುಂಬದ ಮೂಲಗಳು ತಿಳಿಸಿವೆ. ಡಿಸೆಂಬರ್ 16ರಂದು ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಅತ್ಯಾಚಾರ ತಡೆ ಕಾನೂನಿಗೆ ಸುಧಾರಣೆ ತರಲು ಕೇಂದ್ರ ರಚಿಸಿದ್ದ ಆಯೋಗಕ್ಕೆ ವರ್ಮಾ ಅಧ್ಯಕ್ಷರೂ ಆಗಿದ್ದರು.

ಪ್ರತಿಕ್ರಿಯಿಸಿ (+)