ಮಂಗಳವಾರ, ಮೇ 11, 2021
22 °C

ನಿವೃತ್ತ ರಸ್ತೆ ಸಾರಿಗೆ ಕಾರ್ಮಿಕರಿಂದ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿವೃತ್ತ ರಸ್ತೆ ಸಾರಿಗೆ ಕಾರ್ಮಿಕರಿಂದ ಧರಣಿ

ಬಾಗಲಕೋಟೆ: ಎರಡು ವರ್ಷದಿಂದ ತಡೆಹಿಡಿಯಲಾಗಿರುವ ಗ್ರ್ಯಾಚುಟಿ ಹಣ ಮತ್ತು ಇತರೆ ಸೌಲಭ್ಯಗಳನ್ನು ನೀಡುವಂತೆ ಆಗ್ರಹಿಸಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿವೃತ್ತ ಕಾರ್ಮಿಕರು ಬುಧವಾರ ನವನಗರದ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದರು.`ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 30 ರಿಂದ 34 ವರ್ಷ ವಿವಿಧ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಕಾರ್ಮಿಕರಿಗೆ ಬರಬೇಕಿರುವ ಉಪದಾನ ಮತ್ತು ಸುಮಾರುರೂ 7.25 ಕೋಟಿ  ರಜೆ ನಗದೀಕರಣ ಹಣ ಎರಡು ವರ್ಷಗಳಿಂದ ನೀಡಿರುವುದಿಲ್ಲ' ಎಂದು ಧರಣಿ ನಿರತರು ಆಪಾದಿಸಿದರು.`ನಿವೃತ್ತಿ ನಂತರ ನೀಡಬೇಕಾದ ಸೌಲಭ್ಯಗಳನ್ನು ನೀಡದೇ ಇರುವುದರಿಂದ ನಿವೃತ್ತ ನೌಕರರಿಗೆ ಕುಟುಂಬ ನಿರ್ವಹಣೆ ತೊಂದರೆಯಾಗಿದೆ. ನಿವೃತ್ತ ನೌಕರರು ಬೀದಿ ಪಾಲಾಗಬೇಕಾದ ಸ್ಥಿತಿ ಬಂದಿದೆ' ಎಂದು ನೋವು ತೋಡಿಕೊಂಡರು.`ನಿವೃತ್ತ ರಸ್ತೆ ಸಾರಿಗೆ ನೌಕರರ ಬೇಡಿಕೆ ಈಡೇರಿಕೆ ಸಂಬಂಧ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಹಲವಾರು ಬಾರಿ ಮೌಖಿಕ, ಲಿಖಿತವಾಗಿ ತಿಳಿಸಿದ್ದರೂ ಪ್ರಯೋಜನವಾಗಿಲ್ಲ. 10 ದಿನಗಳೊಳಗಾಗಿ ಬೇಡಿಕೆ ಈಡೇರಿಸದಿದ್ದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ಎದುರು ಕುಟುಂಬ ಸಮೇತ ಉಪವಾಸ ಧರಣಿ ನಡೆಸುವುದಾಗಿ' ಅವರು ಎಚ್ಚರಿಕೆ ನೀಡಿದರು.ಬಿ.ವಿ. ಕುಲಕರ್ಣಿ, ಪಿ.ಎಸ್. ಮಾಸ್ತಿ, ಎನ್.ಟಿ. ಜೋಶಿ, ಪತಂಗೆ, ಪಟೇಲ, ಮಂಟೂರ, ಎಚ್. ಬಿ. ಪಾಟೀಲ, ಗೌಡರ, ತಾವರಗೇರಿ, ಮುಚಖಂಡಿ,  ಹುಂಡೇಕರ, ಗೋರಿ,  ಮುದಕವಿ, ಗಣಾಚಾರಿ, ಕೆ.ಎಂ. ಕುಲಕರ್ಣಿ, ಹಿರೇಮಠ, ನಾಗರಾಳ, ಎ.ಎಂ. ಮುಲ್ಲಾ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.