ಬುಧವಾರ, ಮೇ 12, 2021
20 °C

`ನಿವೃತ್ತ ಸೈನಿಕ ಸಮಾಜಕ್ಕೆ ಮಾರ್ಗದರ್ಶಕ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ನಿವೃತ್ತ ಸೈನಿಕ ಸಮಾಜಕ್ಕೆ ಮಾರ್ಗದರ್ಶಕ'

ಬಾಗಲಕೋಟೆ: `ಸೇನೆಯಲ್ಲಿದ್ದಾಗ ಮೈಗೂಡಿಸಿಕೊಂಡ ಶಿಸ್ತಿನ ಜೀವನವನ್ನು ಸೇವೆಯಿಂದ ನಿವೃತ್ತಿಯಾದ ಬಳಿಕ ಬದಲಾಯಿಸಿಕೊಳ್ಳಬೇಡಿ. ನಿವೃತ್ತ ಸೈನಿಕರು ಸಮಾಜಕ್ಕೆ ಮಾರ್ಗದರ್ಶಕರಿದ್ದಂತೆ' ಎಂದು ಲೆಫ್ಟಿನೆಂಟ್ ಜನರಲ್ ವಿ.ಕೆ. ಪಿಲ್ಲೆ ಹೇಳಿದರು.ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯು ಭಾನುವಾರ ನವನಗರದ ಕಲಾಭವನದಲ್ಲಿ ಆಯೋಜಿಸಿದ್ದ ಮಾಜಿ ಸೈನಿಕರ ಜಿಲ್ಲಾ ಸಮಾವೇಶದಲ್ಲಿ ಅವರು ಮಾತನಾಡಿದರು.`ಜಗತ್ತಿನ ಅತಿ ದೊಡ್ಡ ಭೂಸೇನೆ ಹೊಂದಿದ ದೇಶ ಭಾರತ. ದೇಶದ ಭದ್ರತೆಗೆ ಶ್ರಮಿಸುವ ಸೈನಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕು' ಎಂದು ಹೇಳಿದರು.`ನಿವೃತ್ತಿಯಾದ ಸೈನಿಕರು ತಿಂಗಳಿಗೊಮ್ಮೆ  ತಪ್ಪದೇ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು, ನಿವೃತ್ತ ಸೈನಿಕರ ಆರೋಗ್ಯ ತಪಾಸಣೆ ಮಾಡುವ ಜವಾಬ್ದಾರಿ ಆಯಾ ಸ್ಥಳೀಯ ಸರ್ಕಾರದ್ದಾಗಿರುತ್ತದೆ. ಸೇವೆಯಿಂದ ನಿವೃತ್ತರಾದ ಸೈನಿಕರನ್ನು ಸಮಾಜ ರಕ್ಷಿಸಬೇಕು' ಎಂದು ಹೇಳಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಶಿವಾಜಿ ಟಕ್ಕರ್, `ಸೈನಿಕರ ಮಕ್ಕಳಿಗೆ ನೀಡುವ ಶಿಷ್ಯವೇತನವನ್ನು ಹೆಚ್ಚಿಸಲಾಗಿದೆ. ಜಿಲ್ಲೆಯ ಮಾಜಿ ಸೈನಿಕರಿಗೆ ಆರೋಗ್ಯ ತಪಾಸಣೆ ಮಾಡಿಕೊಳ್ಳಲು ಇಸಿಎಚ್ ಜಾರಿ ಮಾಡಲಾಗಿದೆ. ಸೈನ್ಯಪೂರ್ವ ತರಬೇತಿಯನ್ನು ನಾಲ್ಕು ತಿಂಗಳಿಗೊಮ್ಮೆ ನಡೆಸಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು' ಎಂದು ಹೇಳಿದರು.ಅಪರ ಜಿಲ್ಲಾಧಿಕಾರಿ ಪಿ.ಟಿ. ರುದ್ರಗೌಡ, `ನಿವೃತ್ತ ಸೈನಿಕರಿಗೆ ಜಿಲ್ಲಾಡಳಿತದಿಂದ ಸಹಾಯ ನೆರವು ನೀಡುವುದಾಗಿ' ಭರವಸೆ ನೀಡಿದರು.ಬೆಳಗಾವಿಯ ಮರಾಠಾ ಲೈಟ್ ಇನ್‌ಫೆಂಟ್ರಿ ಕಮಾಂಡರ್ ಸಂತೋಷ ಕುರುಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈಶ್ವರಚಂದ್ರ ವಿದ್ಯಾಸಾಗರ, ಮೇಜರ್ ಎ.ಕೆ. ಸಿಂಗ್, ಎಚ್.ಕೆ. ಬೀಳಗಿ,ಉಷಾ ಪಿಲ್ಲೆ ಉಪಸ್ಥಿತರಿದ್ದರು.ನಿವೃತ್ತಿಯಾದ ಸೈನಿಕ ರಂಗಪ್ಪ ಆಲೂರ, ಎಚ್.ಆರ್. ಮಲಗನ್ನ, ಗಂಗಪ್ಪ ಕಾಂಬಳೆ, ನಿವೃತ್ತ ಸೈನಿಕರ ಕುಟುಂಬದವರಾದ ಸಾವಿತ್ರಿಬಾಯಿ ಪಾಟೀಲ, ನೂರಜಾನ್ ಪಿಂಜಾರ, ನಿರ್ಮಲಾ ಶಿವಬಸಯ್ಯ ಕುಲಕರ್ಣಿ, ಮಾಯಾದೇವಿ ಪೋತರಾಜ, ಉಮಾ ಎಸ್. ಕೋಟಿ, ಲಕ್ಷ್ಮೀಬಾಯಿ ಜಾಧವ, ರುಕ್ಮಿಣಿ ಮಿರ್ಜಿ, ಕಾಶಿರಬಾನು ಕೊಣ್ಣೂರ ಗೌರವಿಸಲಾಯಿತು.ಆರೋಗ್ಯ ತಪಾಸಣೆ: ಮಾಜಿ ಸೈನಿಕರಿಗೆ ಮತ್ತು ಅವರ ಅವಲಂಬಿತರಿಗೆ ಉಚಿತ ವೈದ್ಯಕೀಯ ತಪಾಸಣೆ ನಡೆಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.