ನಿವೇಶನಕ್ಕಾಗಿ ಅರೆಬೆತ್ತಲೆ ಮೆರವಣಿಗೆ

7

ನಿವೇಶನಕ್ಕಾಗಿ ಅರೆಬೆತ್ತಲೆ ಮೆರವಣಿಗೆ

Published:
Updated:
ನಿವೇಶನಕ್ಕಾಗಿ ಅರೆಬೆತ್ತಲೆ ಮೆರವಣಿಗೆ

ಸಿರುಗುಪ್ಪ: ಪಟ್ಟಣದ ನಿರಾಶ್ರಿತ ಬಡವರಿಗೆ ನಿವೇಶನಗಳನ್ನು ಹಂಚಿಕೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ಜನಶಕ್ತಿ ಸಂಘದ ಮುಖಂಡರು, ಕಾರ್ಯಕರ್ತರು ಸೋಮವಾರ ಪಟ್ಟಣಲ್ಲಿ ಅರೆಬೆತ್ತಲೆ ಮೆರವಣಿಗೆ ನಡೆಸಿ ಪುರಸಭೆ ಮತ್ತು ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಿದರು.ಬಡವರಿಗೆ ಸೂರು ಕಲ್ಪಿಸಲು ಪುರಸಭೆಯವರು 22 ಎಕರೆ ಜಮೀನನ್ನು ಖರೀದಿಸಿದ್ದು, ಅಲ್ಲಿ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಹಂಚಿಕೆ ಮಾಡುವಲ್ಲಿ ಸುಮಾರು 10 ವರ್ಷಗಳಿಂದ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.ಆಶ್ರಯ ನಿವೇಶನ ಹಂಚಿಕೆ ಸಮಿತಿಯಲ್ಲಿ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಅವಕಾಶ ಇರಬೇಕು, ನಿವೇಶನ ಹಂಚಿಕೆ ವ್ಯವಹಾರದಲ್ಲಿ ಕೇವಲ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಇರಬೇಕು, ನಿವೇಶನಗಳನ್ನು ಪರಿಶೀಲನೆ ಮಾಡಿ ಬಡತನ ರೇಖೆಗಿಂತ ಕೆಳಮಟ್ಟದಲ್ಲಿ ಜೀವನ ನಡೆಸುತ್ತಿರುವ ಆರ್ಹ ಫಲಾನುಭವಿಗಳಿಗೆ ಹಂಚಬೇಕು.

 

ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕೆಂಬ ಮನವಿಪತ್ರವನ್ನು ಮುಖ್ಯಾಧಿಕಾರಿಗಳಿಗೆ ಮತ್ತು ತಹಸೀಲ್ದಾರರಿಗೆ ಸಂಘದ ಮುಖಂಡರು ಸಲ್ಲಿಸಿದರು.ಸಂಘದ ರಾಜ್ಯ ಘಟಕದ ಅಧ್ಯಕ್ಷ ವೈ.ಪ್ರತಾಪರೆಡ್ಡಿ, ಜಿಲ್ಲಾಧ್ಯಕ್ಷ ಯಾಳ್ಪಿ ವಲಿಬಾಷಾ, ರಾಜ್ಯ ಸಂಚಾಲಕ ಗೋವಿಂದ.ಬಿ, ಸಿರುಗುಪ್ಪ ಸಂಚಾಲಕ ದೇವೇಂದ್ರ, ಆರ್.ಬಸವರೆಡ್ಡಿ, ಅಲ್ಲಾಸಾಬ್, ಜಿ.ಅಂಜಿನೇಯ, ಎಸ್. ನಾಗರಾಜ, ಎಸ್. ವೆಂಕಟೇಶ, ಕೆ. ಮಲ್ಲಿಕಾರ್ಜುನ, ಟಿ.ಭಾಸ್ಕರ ಧರಣಿಯ ನೇತೃತ್ವವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry