ನಿವೇಶನ ದಾನ: ಅಧಿಕೃತ ದಾಖಲೆ ಇಲ್ಲ

7

ನಿವೇಶನ ದಾನ: ಅಧಿಕೃತ ದಾಖಲೆ ಇಲ್ಲ

Published:
Updated:

ಕೆ.ಆರ್.ನಗರ: ‘ಗ್ರಂಥಾಲಯ ನಿರ್ಮಾಣಕ್ಕಾಗಿ ಪಟ್ಟಣದಲ್ಲಿ ನಿವೇಶನ ದಾನ ಮಾಡಿರುವ ಬಗ್ಗೆ ಪುರಸಭೆ ಯಲ್ಲಿ  ಯಾವುದೇ ಅಧಿಕೃತ ದಾಖಲಾತಿಗಳಿಲ್ಲ’ ಎಂದು ಪುರಸಭೆ ಅಧ್ಯಕ್ಷ ತಮ್ಮನಾಯಕ ಶುಕ್ರವಾರ ಹೇಳಿದರು.ಪುರಸಭೆಯ ತುರ್ತುಸಭೆಯಲ್ಲಿ ಮಾತನಾಡಿದ ಅವರು, ಪುರಸಭೆ ಮುಂಭಾಗದಲ್ಲಿ ಈಗಿರುವ ಲೋಕ ಶಿಕ್ಷಣ  ಸಂಸ್ಥೆ ಮತ್ತು ವಾಣಿಜ್ಯ ಮಳಿಗೆಗಳ ಸ್ಥಳದಲ್ಲಿ ಗ್ರಂಥಾಲಯ ನಿರ್ಮಾಣಕ್ಕಾಗಿ ಸ್ಥಳ ಬಿಟ್ಟುಕೊಡು ವಂತೆ  ಜಿಲ್ಲಾಧಿಕಾರಿಯಿಂದ ಪತ್ರ ಬಂದಿದೆ.ಆದರೆ ಪುರಸಭೆ ಸ್ಥಳದಲ್ಲಿ ದಾನಿಗಳು ಕಟ್ಟಡ ಕಟ್ಟಿರಬಹುದೇ ಹೊರತು, ದಾನ  ಮಾಡಿರುವ ಬಗ್ಗೆ ಯಾವುದೇ ಅಧಿಕೃತ ದಾಖಲಾತಿಗಳು ಲಭ್ಯವಿಲ್ಲ ಎಂದರು. ಈಗಿರುವ ಲೋಕ ಶಿಕ್ಷಣ ಸಂಸ್ಥೆ ಮತ್ತು ವಾಣಿಜ್ಯ ಮಳಿಗೆಗಳ ಸ್ಥಳ ಪುರಸಭೆಯ ಆಸ್ತಿಯಾಗಿದೆ. ಅದು ಯಾರೂ ದಾನ ಮಾಡಿದ ಸ್ಥಳವಲ್ಲ. ಗ್ರಂಥಾಲಯ ಉದ್ದೇಶಕ್ಕಾಗಿ ಪುರಸಭೆ ಸ್ಥಳದಲ್ಲಿ ದಾನಿಗಳು ಕಟ್ಟಡ ಕಟ್ಟಿರಬಹುದೇ ಹೊರತು ನಿವೇಶನ ದಾನಿಗಳದಲ್ಲ. ಅಲ್ಲಿನ ನಿವೇಶನ ಪುರಸಭೆ ಆಸ್ತಿಯಾಗಿ ರುವುದರಿಂದ  ಗ್ರಂಥಾಲಯಕ್ಕೆ ಬಿಟ್ಟು ಕೊಡುವ ವಿಚಾರ ಬರುವುದೇ ಇಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗೆ ತಪ್ಪು ಮಾಹಿತಿ ನೀಡಲಾಗಿದೆ ಎಂದು ಬಹುತೇಕ ಸದಸ್ಯರು ಆರೋಪಿಸಿದರು.ವಾಜಪೇಯಿ ವಸತಿ ಯೋಜನೆ ಯಡಿ ನಿಗದಿ ಪಡಿಸಿರುವ ಗುರಿಯಂತೆ ಫಲಾನುಭವಿಗಳಿಗೆ ನಿವೇಶನ ಹಂಚಲು ಅಗತ್ಯವಿರುವ ಭೂಮಿಯನ್ನು ಖರೀದಿ ಸಲು ಹಾಗೂ ನಗರಕ್ಕೆ ಹೊಂದಿ ಕೊಂಡಂತೆ ಇರುವ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಯಿತು. ಪುರಸಭೆಗೆ ಸೇರಿದ ನಿವೇಶನ ಗುರುತಿಸುವುದು. ಮತ್ತು ಮಾರಾಟಕ್ಕೆ ಲಭ್ಯವಿರುವ ಜಮೀನು ಗುರುತಿಸಿ ಖರೀದಿಸಲು ಒಪ್ಪಿಗೆ ಪಡೆಯಲಾಯಿತು.ಉಪಾಧ್ಯಕ್ಷ ಸುಬ್ರಹ್ಮಣ್ಯ, ಮುಖ್ಯಾ ಧಿಕಾರಿ ನಾಗ ರಾಜು, ವ್ಯವಸ್ಥಾಪಕ ನಾಗಶೆಟ್ಟಿ, ಡಿ.ಕಾಂತರಾಜು, ಸ್ಥಾಯಿ  ಸಮಿತಿ ಅಧ್ಯಕ್ಷ ಕೆ.ಎಲ್.ಕುಮಾರ್, ಸದಸ್ಯ ರಾದ ಗೀತಾ ಮಹೇಶ್, ಪಿ.ಶಂಕರ್, ಮೀರಾಬಾಯಿ, ಕೆ.ಎಲ್. ಜಗದೀಶ್, ಯೋಗಾನಂದ, ರತ್ನಮ್ಮ ಜಯರಾಮು, ಪಾರ್ವತಿ, ಕೆ.ಎಸ್. ರೇವಣ್ಣ, ಎನ್.ರವಿ, ಮಹಮದ್ ಸಿರಾಜ್ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry