ಶುಕ್ರವಾರ, ಮೇ 7, 2021
21 °C

ನಿವೇಶನ ರಹಿತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡಿಗೆರೆ: ಭಾರತ ಕಮ್ಯೂನಿಸ್ಟ್ ಪಕ್ಷದ ನೇತೃತ್ವದಲ್ಲಿ ಮೂಡಿಗೆರೆ ತಾಲ್ಲೂಕಿನ ನಿವೇಶನ ರಹಿತರು, ನಿವೇಶನ ಮತ್ತು ಮನೆ ನೀಡುವಂತೆ ಆಗ್ರಹಿಸಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನೆ ಎಂ.ಜಿ. ರಸ್ತೆಯ ಮೂಲಕ ಸಾಗಿ ತಾಲ್ಲೂಕು ಪಂಚಾಯತಿ ಆವರಣದಲ್ಲಿ ಸಮಾವೇಶಗೊಂಡಿತು. ಶಾಸಕ ಎಂಪಿ. ಕುಮಾರಸ್ವಾಮಿ ಹಾಗೂ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಂಜನ್ ಅಜಿತ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.ಮನವಿ ನೀಡಿ ಮಾತನಾಡಿದ ಸಿಪಿಐ ರಾಜ್ಯ ಸಹ ಕಾರ್ಯದರ್ಶಿ ಸಾತಿ ಸುಂದರೇಶ್, ತಾಲ್ಲೂಕಿನ ಸಾವಿರಾರು ಬಡ ಕುಟುಂಬಗಳು ಸ್ವಂತ ಮನೆ ನಿರ್ಮಿಸಿಕೊಳ್ಳಲಾಗದೇ, ಬಾಡಿಗೆ ಮನೆಯಲ್ಲಿ ವಾಸಿಸುತ್ತಿವೆ. ಇದರಲ್ಲಿ ಹೆಚ್ಚಿನವರು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರು. ನಿವೇಶನ ರಹಿತರಿಗೆ ಸರ್ಕಾರದ ಯಾವುದೇ ವಸತಿ ಯೋಜನೆಯಲ್ಲೂ ಕೂಡ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತಕ್ಷಣವೇ ಸರ್ಕಾರ  ನಿವೇಶನ ನೀಡಬೇಕೆಂದು ಆಗ್ರಹಿಸಿದರು.ನಂತರ ಪ್ರತಿಭಟನಾ ಸ್ಥಳಕ್ಕೆ ಬಂದು ಶಾಸಕ ಎಂಪಿ. ಕುಮಾರಸ್ವಾಮಿ ಮನವಿ ಪಡೆದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಂಜನ್ ಅಜಿತ್ ಕುಮಾರ್ ಮಾತನಾಡಿ, ತಾಲ್ಲೂಕಿಗೆ ವಸತಿ ರಹಿತರಿಗೆ 83 ಎಕರೆ ಭೂಮಿ ಬೇಕಾಗಿದೆ. ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಜಾವಳಿ ಗ್ರಾಮ ಪಂಚಾಯತಿಯಲ್ಲಿ 3 ಎಕರೆ ಭೂಮಿ ಮಂಜೂರಾಗಿದೆ. ಇನ್ನಷ್ಟು ಭೂಮಿ ಮಂಜೂರಾತಿಗಾಗಿ ಮನವಿ ಮಾಡಲಾಗುವುದು ಎಂದು ಹೇಳಿದರು.ಸಿಪಿಐ ಪದಾಧಿಕಾರಿಗಳಾದ ಗೋಪಾಲ ಶೆಟ್ಟಿ, ಎಚ್‌ಟಿ. ರವಿಕುಮಾರ್ ಎಂಎಸ್.ಹರೀಶ್, ಪೆರಿಯಾಸ್ವಾಮಿ, ಬಾಳೂರು ರಮೇಶ, ಅಣ್ಣಪ್ಪ, ಸುಬ್ರಮಣ್ಯ, ಸುಂಕಸಾಲೆ ರವಿ,ರಾಜು, ಮೋನಪ್ಪ, ಸುಂದರ್ ಸೇರಿದಂತೆ ಸಾವಿರಾರು ನಿವೇಶನ ರಹಿತರು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.