ನಿವೇಶನ ರಹಿತರ ಸಮಾವೇಶ

7

ನಿವೇಶನ ರಹಿತರ ಸಮಾವೇಶ

Published:
Updated:

ಕುಂದಾಪುರ: ಕರ್ನಾಟಕ ಕೃಷಿಕೂಲಿಕಾರರ ಸಂಘದ ತಾಲ್ಲೂಕು ಸಮಿತಿ ಹಾಗೂ ತ್ರಾಸಿ ಗ್ರಾ.ಪಂ. ವ್ಯಾಪ್ತಿಯ ಬಡ ನಿವೇಶನ ರಹಿತರ ಹೋರಾಟ ಸಮಿತಿ ನೇತೃತ್ವದಲ್ಲಿ ಬಡ ನಿವೇಶನ ರಹಿತರಿಂದ ಸ್ವೀಕರಿಸಿದ ಒಟ್ಟು 564 ಅರ್ಜಿಗಳಿಗೆ ಕೂಡಲೇ ನಿವೇಶನ ಸ್ಥಳ ಗುರುತಿಸಿ ಹಕ್ಕು ಪತ್ರ ಮಂಜೂರು ಮಾಡಲು ಒತ್ತಾಯಿಸಿ ಸೋಮವಾರ ತ್ರಾಸಿಯ ಅಣ್ಣಪ್ಪಯ್ಯ ಸಭಾಭವನದಲ್ಲಿ  ನಿವೇಶನ ರಹಿತ ಅರ್ಜಿದಾರರ ಬೃಹತ್ ಸಮಾವೇಶ ನಡೆಯಿತು.ಸಮಾವೇಶ ಉದ್ಘಾಟಿಸಿ ಮಾತನಾಡಿದ ಕೂಲಿಕಾರರ ಸಂಘದ ತಾಲ್ಲೂಕು ಸಮಿತಿಯ ಅಧ್ಯಕ್ಷ ರಾಜೀವ ಪಡುಕೋಣಿ, ತ್ರಾಸಿ ಗ್ರಾಮ ಪಂಚಾ­ಯಿತಿಯಿಂದ ಬಡ ನಿವೇಶನ ರಹಿತರು ನಿವೇಶನ ಸ್ಥಳ ಕೋರಿ ಸಲ್ಲಿಸಿದ ಅರ್ಜಿಗಳು ಕುಂದಾಪುರ ತಾಲ್ಲೂಕು ಪಂಚಾಯಿತಿ ಮೂಲಕ ತಹಸೀಲ್ದಾರರ ಕಚೇರಿಗೆ ಕಳೆದ ಜ.18 ರಂದೇ ರವಾನಿಸಲಾಗಿದ್ದರೂ, ಈ ವರೆ ಗೂನಿವೇಶನ ಹಂಚಿಕೆಯ ಕುರಿತು ಕ್ರಮ ಕೈಗೊಳ್ಳ­ದಿರುವ ಅಧಿಕಾರಿಗಳ ಅಸಡ್ಡೆ ವರ್ತನೆ0ುನ್ನು ಖಂಡಿಸಿ­ದರು. ಅಧಿಕಾರಿಗಳ ಈ ನಿರ್ಲಕ್ಷ್ಯ ಧೋರಣೆ ಖಂಡಿಸಿ ತಾಲ್ಲೂಕಿನಾದ್ಯಂತ ನಿವೇಶನ ರಹಿತ ಅರ್ಜಿದಾರರನ್ನು ಸಂಘಟಿಸಿ ಸೆ.30ರಂದು ಕುಂದಾಪುರ ತಹಸೀಲ್ದಾರರ ಕಚೇರಿಯ ಎದುರು ಭೂಮಿ ಹಕ್ಕಿಗಾಗಿ ಅನಿರ್ಧಿಷ್ಟಾ­ವಧಿ ಹಗಲು–ರಾತ್ರಿ ಧರಣಿ ಮುಷ್ಕರ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ತಾಲ್ಲೂಕು ಸಂಘಟನೆಯ ಕಾರ್ಯದರ್ಶಿವೆಂಕಟೇಶ ಕೋಣಿ ಅವರು ಬಡವರು ಭೂಮಿ ಹಕ್ಕಿಗಾಗಿ ಹೋರಾಡು­ತ್ತದ್ದರೇ, ನಮ್ಮ ಸರ್ಕಾರದ ಮಂತ್ರಿಗಳು, ಶಾಸಕರು  ಭೂ ಕಬಳಿಕೆಯಲ್ಲಿ ತೊಡಗಿದ್ದಾರೆ. ಸರ್ಕಾರದ  ಒತ್ತುವರಿಯಾದ ಎಲ್ಲಾ ಭೂಮಿಗಳನ್ನು ಕೂಡಲೇ ವಶಕ್ಕೆ ತೆಗೆದುಕೊಂಡು ಅದನ್ನು ಬಡವರಿಗೆ ಹಂಚಲು ಸರ್ಕಾರ ಕ್ರಮ ಕೈಗೊಳ್ಳುವಂತೆ ಅವರು ಇದೆ ಸಂದರ್ಭದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.ತ್ರಾಸಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಗೂ ನಿವೇಶನ ರಹಿತರ ಹೋರಾಟ ಸಮಿತಿ ಸಂಚಾಲಕ ರೆನ್ಸಮ್ ಪಿರೇರಾ ಸಮಾವೇಶದ ಅಧ್ಯಕ್ಷತೆ ವಹಿಸಿ­ದ್ದರು. ನಿವೇಶನ ರಹಿತರ ಹೋರಾಟ ಸಮಿತಿ ಸಂಚಾಲಕರು­ಗಳಾದ ಕೋಟೇಶ್ವರ ಕರಿಯ ದೇವಾಡಿಗ, ಗುಜ್ಜಾಡಿ  ಶ್ರೀನಿವಾಸ ಪೂಜಾರಿ , ಮೊವಾಡಿ ಪ್ರಭಾಕರ, ನಾಗ­ರತ್ನ ನಾಡ, ಸಂತೋಷ ಹೆಮ್ಮಾಡಿ ಹಾಗೂ ಪಂಚಾ­ಯಿತಿ ಸದಸ್ಯೆ ಪ್ರೇಮಾ ಬಳೆಗಾರ ಉಪಸ್ಥಿತ­ರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry