ಗುರುವಾರ , ಮೇ 19, 2022
21 °C

ನಿವೇಶನ ಸ್ವಾಧೀನ ವಿರೋಧಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳೆನರಸೀಪುರ: ಇಲ್ಲಿನ ಬಸ್ ನಿಲ್ದಾಣ ಸಮೀಪ ನಿವೇಶನಗಳನ್ನು ಸರ್ಕಾರ ಸ್ವಾಧೀನಪಡಿಸಿ ಕೊಂಡಿರುವುದನ್ನು ವಿರೋಧಿಸಿ ನಿವೇಶನಗಳ ಮಾಲೀಕರು ಕಾಂಗ್ರೆಸ್ ನಾಯಕಿ ಅನುಪಮಾ ನೇತೃತ್ವದಲ್ಲಿ ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.1985ರಲ್ಲಿ ಪುರಸಭೆ ನಡೆಸಿದ್ದ ಹರಾಜಿನಲ್ಲಿ ಈ ನಿವೇಶನಗಳನ್ನು ಖರೀದಿಸಿದ್ದೆವು. ಆಗ ಚದುರ ಅಡಿ ಬೆಲೆ  150 ರೂಪಾಯಿ ಇತ್ತು.  ಈಗ ಸರ್ಕಾರ ಇಲ್ಲಿ ಮಿನಿವಿಧಾನ ಸೌಧ ಹಾಗೂ ಮಾರುಕಟ್ಟೆ ನಿರ್ಮಾಣಕ್ಕೆ ನಮಗೆ ಯಾವುದೇ ನೋಟಿಸ್ ನೀಡದೆ ಉಪವಿಭಾಗಾಧಿಕಾರಿ ಪುರಸಭೆಗೆ ಜಾಗವನ್ನು ಹಸ್ತಾಂತರಿಸಿದ್ದಾರೆ ಎಂದು ನಿವೇಶನಗಳ ಮಾಲೀಕರು ದೂರಿದರು.  ಹೈಕೋರ್ಟ್‌ನಲ್ಲಿ ನಮಗೆ ಸೋಲಾಗಿತ್ತು. ಸುಪ್ರಿಂ ಕೋರ್ಟ್‌ನಲ್ಲಿ ಈಗ ಪ್ರಕರಣದ ವಿಚಾರಣೆ ನಡೆಯುತ್ತಿದೆ.  ಈ ವಿಷಯವನ್ನು ಉಪವಿಭಾಗಾಧಿಕಾರಿಗೆ ಲಿಖಿತವಾಗಿ ತಿಳಿಸಿದ್ದರೂ ನಿವೇಶನಗಳನ್ನು ವರ್ಗಾಯಿಸಿದ್ದಾರೆ ಎಂದು ಅವರು ದೂರಿದರು.ಕಾಂಗ್ರೆಸ್ ನಾಯಕಿ ಅನುಪಮಾ ಮಾತನಾಡಿ ಪಟ್ಟಣದಲ್ಲಿ ಈಗಾಗಲೇ ಮಿನಿ ವಿಧಾನಸೌಧ ಇದೆ. ಈಗ ಈ ನಿವೇಶನಗಳನ್ನು ವಶಪಡಿಸಿಕೊಳ್ಳಲು ಹೊರಟಿರುವುದು ಸರಿಯಲ್ಲ. ಈ ನಿವೇಶನಗಳನ್ನು ಸರ್ಕಾರದಿಂದಲೇ ಡಿ ನೋಟಿಫೈ ಮಾಡಿಸುವ ಪ್ರಯತ್ನ ನಡೆದಿದೆ ಎಂದು ತಿಳಿಸಿದರು.ರಾಜ್ಯಸಭೆಯ ಮಾಜಿ ಸದಸ್ಯ  ಎಚ್.ಕೆ. ಜವರೇಗೌಡ ಮಾತನಾಡಿ ನ್ಯಾಯಾಲಯಕ್ಕೆ ಅಧಿಕಾರಿಗಳು ಸುಳ್ಳು ದಾಖಲೆ ಒದಗಿಸುವ ಸಾಧ್ಯತೆ ಇದೆ. ಇಂಥ ಸಂದರ್ಭದಲ್ಲಿ ನ್ಯಾಯಾಧೀಶರನ್ನೇ ಸ್ಥಳ ಪರಿಶೀಲನೆಗೆ ಕರೆಸಲು ಅವಕಾಶ ಇದೆ. ಸುಳ್ಳು ದಾಖಲೆ ನೀಡಿದ ಅಧಿಕಾರಿಗಳು ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ತಿಳಿಸಿದರು. ನಿವೇಶನಗಳ ಮಾಲೀಕರಾದ ಬಾಂಬೆ ಡೈಯಿಂಗ್ ಅನಂತು, ಮೋಹನ್‌ಬಾಬು, ಸತೀಶ್, ಸೂರನಹಳ್ಳಿ ಸುರೇಶ್, ಪ್ರದೀಪ್(ಬಾಬು) ಎನ್. ಹನುಮಂತಕುಮಾರ್, ಅಶೋಕ್ ಕುಮಾರ್, ಶಬ್ಬೀರ್, ಮುಜೀಬುಲ್ಲಾ, ನಾರಾಯಣ್‌ರಾವ್, ಇದ್ದರು. ಪ್ರತಿಭಟನಾಕಾರರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.