ನಿವೇಶನ ಹಂಚಿಕೆಗೆ ಒತ್ತಾಯಿಸಿ ಮನವಿ

7

ನಿವೇಶನ ಹಂಚಿಕೆಗೆ ಒತ್ತಾಯಿಸಿ ಮನವಿ

Published:
Updated:

ಗುಲ್ಬರ್ಗ:  ಮಹಾನಗರದ ನಾಗರಿಕರ ಅರ್ಥ ವ್ಯವಸ್ಥೆಗೆ ಪೂರಕವಾಗಿ ಕಲ್ಯಾಣಕಾರಿ ಜನಪರ ದೃಷ್ಟಿಕೋನದ ದರದಂತೆ ಪ್ರಾಧಿಕಾರದ ನಿವೇಶನಗಳು ಹಂಚಿಕೆ ಮಾಡುವಂತೆ ಒತ್ತಾಯಿಸಿ ಹೈದರಾಬಾದ್ ಕರ್ನಾಟಕ ಜನಪರ ಸಂಘರ್ಷ ಸಮಿತಿ ವತಿಯಿಂದ ಮಂಗಳವಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.ಜನಪರ ದೃಷ್ಟಿಕೋನ ಇಟ್ಟುಕೊಂಡು ಆಯಾ ನಗರಗಳ ನಾಗರಿಕರಿಗೆ ಖಾಸಗಿ ನಿವೇಶನಗಳ ಮಾರಾಟದ ಪ್ರಭಾವ ತಪ್ಪಿಸಲು ಪ್ರಾಧಿಕಾರ ಎಲ್ಲ ರೀತಿಯ ಸವಲತ್ತು ಮತ್ತು ವ್ಯವಸ್ಥೆಗಳನ್ನು ಮಾಡಿ ನಾಗರಿಕರಿಗೆ ನಿವೇಶನಗಳು ಹಂಚಬೇಕು ಎನ್ನುವುದು ಉದ್ದೇಶ ಹೊಂದಿದೆ. ಆದರೆ ಗುಲ್ಬರ್ಗ ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನಗಳ ಹಂಚಿಕೆಯಲ್ಲಿ ಕಲ್ಯಾಣಕಾರಿ ಮತ್ತು ಜನಪರ ದೃಷ್ಟಿಕೋನವನ್ನು ಅನುಸರಿದೇ ಕೇವಲ ಲಾಭದ ದೃಷ್ಟಿಕೋನದಂತೆ ವರ್ತಿಸುವುದರ ಮೂಲಕ ಜನಪರ ಸಂಸ್ಥೆಯಾಗದೇ ವ್ಯಾಪಾರ ಮಾಡುವ ಸಂಸ್ಥೆಗಳಂತಾಗಿವೆ ಎಂದು ದೂರಿದ್ದಾರೆ.ಈಗ ನಿಗದಿ ಮಾಡಿರುವ ಮತ್ತು ಮಾಡಬಹುದಾದ ಆಯಾ ಪ್ರದೇಶದ ನಿವೇಶನಗಳ ದರಗಳನ್ನು ಕಡಿಮೆ ಬೆಲೆಯಲ್ಲಿ ನಿಗದಿ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಆಗ್ರಹಿಸಿದ್ದಾರೆ.ಎಸ್.ಎನ್. ಮೋದಿ, ನಾಗಲಿಂಗಯ್ಯ ಮಠಪತಿ, ಶಾಂತಪ್ಪ ಕಾರಭಾಸಗಿ, ವೀರೇಶ ಪುರಾಣಿಕ, ಚಂದ್ರಕಾಂತ, ಮನೀಷ್ ಜಾಜು, ಗೋಪಾಲರಾವ ಜಾಧವ, ಸಿದ್ರಾಮಪ್ಪ, ಜಮೀರ ಅಹಮದ್, ರಮೇಶ ರಾವೂರ, ವೀರಭದ್ರಪ್ಪ, ಮಿರಾಜೊದ್ದೀನ್, ಬಿ.ಬಿ. ಪಾಟೀಲ, ಸುಭಾಷ ಭಜಂತ್ರಿ, ರಮೇಶ, ಕೃಷ್ಣಾ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry