ನಿಶಾ ಜಪ...

7

ನಿಶಾ ಜಪ...

Published:
Updated:
ನಿಶಾ ಜಪ...

ಹಾಲುಬಣ್ಣದ ಸೀರೆಯುಟ್ಟು ಮುಗ್ಧ ನಗೆ ಚೆಲ್ಲುತ್ತ ಕುಳಿತಿದ್ದರು ನಿಶಾ ಕೊಠಾರಿ. `ದಂಡುಪಾಳ್ಯ~ ಚಿತ್ರದಲ್ಲಿ ಅವರು ಬೀರಿರುವುದು ಕೂಡ ಅಂಥ ಮುಗ್ಧ ನಗೆಯೇ. ಅಲ್ಲಿ ಆಕೆಯದು ಆಗಷ್ಟೇ ಮದುವೆಯಾದ ಅಮಾಯಕ ಯುವತಿಯ ಪಾತ್ರ. ಆದರೆ ಮನುಷ್ಯ ರೂಪದ ದಾನವರು ಆಕೆಯ ಬದುಕಿಗೆ ಹೇಗೆ ಪೂರ್ಣ ವಿರಾಮ ಇಡುತ್ತಾರೆ ಎಂಬುದು ಚಿತ್ರದಲ್ಲಿ ಮೂಡಿ ಬಂದಿದೆಯಂತೆ.ಒಬ್ಬ ನಿರ್ದೇಶಕನಿಗೆ ಕಟು ವಾಸ್ತವದ ಚಿತ್ರ ನೀಡಲು, ವಿವಾದಗಳನ್ನು ಎದುರಿಸುವ, ಸವಾಲುಗಳನ್ನು ಸ್ವೀಕರಿಸುವ ದಿಟ್ಟತನ ಇರಬೇಕು. ಶ್ರೀನಿವಾಸ್ ರಾಜು ಅವರು ಅಂಥ ದಿಟ್ಟ ನಿರ್ದೇಶಕ ಎಂದು ಅವರು ಮೆಚ್ಚಿಕೊಂಡರು.ರಾಮಗೋಪಾಲ ವರ್ಮ ಅವರ ವಿಭಿನ್ನ ಚಿತ್ರಗಳಂತೆ ಇದೂ ಇದೆ ಎಂಬುದು ಅವರು ನೀಡಿರುವ ಶಹಬ್ಬಾಸ್‌ಗಿರಿ. ತೆಲುಗು ತಮಿಳು ಚಿತ್ರಗಳ ತಯಾರಿಕೆಗಾಗಿ `ಆ್ಯಪಲ್ ಬ್ಲಾಸಮ್ಸ~ ಚಿತ್ರ ನಿರ್ಮಾಣ ಸಂಸ್ಥೆಯೊಂದಿಗೆ ನಿಶಾ ಒಪ್ಪಂದ ಮಾಡಿಕೊಂಡಿದ್ದರು. ಆಗ ಪಾತ್ರಕ್ಕೆ ಸರಿ ಹೊಂದುವ ನಟಿಯರ ಹುಡುಕಾಟದಲ್ಲಿದ್ದ ಶ್ರೀನಿವಾಸ್ ದೆಹಲಿಯಲ್ಲಿದ್ದ ನಿಶಾರನ್ನು ಸಂಪರ್ಕಿಸಿದರು.

 

ಕತೆ ಕೇಳಿದ್ದೇ ತಡ ನಿಶಾ ಹಸಿರು ನಿಶಾನೆ ತೋರಿದರು. `ಪಾತ್ರ ಪುಟ್ಟದಾದರೂ ಪ್ರಭಾವಿಯಾಗಿದೆ, ನೋಡುಗರನ್ನು ತಕ್ಷಣ ಕಲಕುತ್ತದೆ~ ಎನ್ನುವುದು ನಿಶಾ ಮಾತು.

ಅಂದಹಾಗೆ ನಿಶಾ ನಾಯಕಿ ಪ್ರಧಾನ ಚಿತ್ರವೊಂದರ ಹುಡುಕಾಟದಲ್ಲಿದ್ದಾರೆ.ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರ ಗಾಳಿ ನಿಮಗೂ ಬೀಸಿತೆ ಎಂದು ಕೇಳಿದರೆ ಅವರು ಖಡಕ್ ಆಗುತ್ತಾರೆ. ಮೀನಾಕುಮಾರಿ, ಶ್ರೀದೇವಿ, ಜ್ಯೋತಿಕಾ ಮುಂತಾದವರೆಲ್ಲಾ ನಾಯಕಿ ಪ್ರಧಾನ ಚಿತ್ರಗಳಲ್ಲಿ ನಟಿಸಿದ್ದಾರೆ. ಅಂಥದ್ದೊಂದು ದೊಡ್ಡ ಪರಂಪರೆಯಲ್ಲಿ ವಿದ್ಯಾ ಹೊಸದೊಂದು ಫ್ಲೇವರ್ ಅಷ್ಟೇ ಎನ್ನುತ್ತಾರವರು.ರಾಮ್‌ಗೋಪಾಲ್ ವರ್ಮ ಅವರ ಬ್ಯಾನರ್‌ನಿಂದ ಹೊರಬಂದ ನಂತರವೂ ಅವಕಾಶಗಳು ಹೆಚ್ಚಾಗಿ ಅರಸಿ ಬರುತ್ತಿವೆಯಂತೆ. ಬಾಲಿವುಡ್‌ನಿಂದ ಚಂದನವನಕ್ಕೆ ನಿಶಾ ಕಾಲಿಡುತ್ತಿರುವುದು ಎರಡನೇ ಬಾರಿ. `ರಾಜ್~ ಚಿತ್ರದಲ್ಲಿ ಪುನೀತ್ ಜತೆ ಕಾಣಿಸಿಕೊಂಡಿದ್ದರು. ಮತ್ತಷ್ಟು ಕನ್ನಡ ಚಿತ್ರಗಳಲ್ಲಿ ನಟಿಸಲು `ರಾಜ್~ ಸೋಪಾನವಾಗಬೇಕಿತ್ತಲ್ಲಾ? ಎಂಬ ಪ್ರಶ್ನೆಗೆ `ಅದಕ್ಕೆ ನಾನೊಬ್ಬಳೇ ಕಾರಣವಲ್ಲ, ಚಿತ್ರತಂಡದ ಪಾತ್ರವೂ ಮಹತ್ವದ್ದು. ಮೇಲಾಗಿ ಕನ್ನಡದಲ್ಲಿ ಅವಕಾಶಗಳ ಬಾಗಿಲು ಮುಚ್ಚಿದೆ ಎಂದು ಯಾರೂ ಭಾವಿಸಬೇಕಿಲ್ಲ~ ಎನ್ನುತ್ತ `ದಂಡುಪಾಳ್ಯ~ದ ಅವಕಾಶವನ್ನು ಉದಾಹರಿಸಿದರು.ಗ್ಲಾಮರ್ ಕುರಿತು ಅವರು ನೀಡಿದ ಹೊಸ ವ್ಯಾಖ್ಯಾನವಿದು: ತುಂಡುಡುಗೆ ತೊಟ್ಟರೂ, ಸೀರೆಯುಟ್ಟರೂ ಯಾವುದೇ ನಟಿ ಗ್ಲಾಮರಸ್ ಆಗಿ ಕಾಣುತ್ತಾಳೆ. ಗ್ಲಾಮರ್ ಎನ್ನುವುದು ನೋಡುಗರ ಕಣ್ಣಲ್ಲಿ ಇರುತ್ತದೆ. ಆ ಪದದ ವ್ಯಾಖ್ಯಾನ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ...

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry