ನಿಷೇಧ ಸ್ಥಳದ್ಲ್ಲಲೇ ವಾಹನ ನಿಲುಗಡೆ

7

ನಿಷೇಧ ಸ್ಥಳದ್ಲ್ಲಲೇ ವಾಹನ ನಿಲುಗಡೆ

Published:
Updated:

ಹುಮನಾಬಾದ್: ನಗರದ ಬಸ್ ನಿಲ್ದಾಣದಲ್ಲಿ `ದ್ವಿಚಕ್ರ ವಾಹನ ನಿಲುಗಡೆ ನಿಷೇಧ~ ಎಂಬ ನಾಮಫಲಕ ಅಳವಡಿಸಲಾದ ಸ್ಥಳದಲ್ಲೆ ಸಾರ್ವಜನಿಕರು ನಿರ್ಭಯವಾಗಿ ವಾಹನ ನಿಲ್ಲಿಸುತ್ತಿರುವ ಕಾರಣ ಪ್ರಯಾಣಿಕರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಮಾದರಿ ಬಸ್ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾದ ಇಲ್ಲಿ ವಾಹನ ನಿಲುಗಡೆಗಾಗಿ ಎಂದು ಪ್ರತ್ಯೇಕ ಸ್ಥಳ ವ್ಯವಸ್ಥೆ ನಿಗದಿ ಮಾಡ್ದ್ದಿದಾರೆ. ಆದರೆ ವಾಹನ ತಂದು ನಿಲ್ಲಿಸುವುದಕ್ಕೆ ಅಗತ್ಯ ವ್ಯವಸ್ಥೆ ಇಲ್ಲದಿರುವುದು ವಾಹನ ಸವಾರರಿಗೆ ತಲೆನೋವಾಗಿದೆ. ಆದ್ದರಿಂದ ಬಸ್ ನಿಲ್ದಾಣಕ್ಕೆ ಬರುವ ವಾಹನ ಸವಾರರು ಅನಿವಾರ್ಯವಾಗಿ ನಿಷೇಧಿತ ಸ್ಥಳದ್ಲ್ಲಲೆ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ.ವಾಹನ ನಿಲುಗಡೆ ಸಂಬಂಧ ಪ್ರಾಂಗಣದಲ್ಲಿ ಪ್ರತ್ಯೇಕ ಸ್ಥಳ ವ್ಯವಸ್ಥೆ ಇದ್ದರೂ ಅದಕ್ಕೆ ಅಗತ್ಯ ರಸ್ತೆ ನಿರ್ಮಿಸದೇ ಇರುವುದು ಈ ಅವ್ಯವಸ್ಥೆಗೆ ಕಾರಣವಾಗಿದೆ. ಬಸ್ ನಿಲ್ದಾಣದಲ್ಲಿ ವಾಹನ ಆಗಮನ ಮತ್ತು ನಿರ್ಗಮನ ಸಂಬಂಧ ಎರಡು ಪ್ರತ್ಯೇಕ ರಸ್ತೆ ನಿರ್ಮಿಸಲಾಗಿದೆ. ನಿಲ್ದಾಣ ಎದುರಿಗಿನ ವಾಣಿಜ್ಯ ಮಳಿಗೆಗಳ ಪೈಕಿ ಅಡಚಣೆ ಉಂಟು ಮಾಡುತ್ತಿರುವ ಕೆಲವು ಮಳಿಗೆ ನೆಲಸಮಗೊಳಿಸಿ, ಪಾದಚಾರಿ ಪ್ರಯಾಣಿಕರಿಗಾಗಿ ಪ್ರತ್ಯೆಕ ಮಾರ್ಗ ನಿರ್ಮಿಸಿದಲ್ಲಿ ಬರುವ ವಾಹನಗಳು ನಿಲುಗಡೆ ಸ್ಥಳದ್ಲ್ಲಲಿ ವಾಹನ ನಿಲ್ಲಿಸುವುದಕ್ಕೆ ಅನುಕೂಲ ಆಗುತ್ತದೆ.

 

ಆದರೆ ಮಳಿಗೆ ನೆಲಸಮ ಮಾಡುವುದಕ್ಕಾಗಿ ತಾಂತ್ರಿಕ ಅಡಚಣೆ ಇದೆ ಎಂದು ಹೇಳಲಾಗುತ್ತಿದೆ. ಕಾರಣ ಕ್ಷೇತ್ರದ ಶಾಸಕ ರಾಜಶೇಖರ ಪಾಟೀಲ ಅವರು ಸಂಬಂಧಪಟ್ಟ ಸಚಿವರ ಜೊತೆ ಚರ್ಚಿಸಿ, ನಿಯಮ ಸಡಿಲಿಸಿಕೊಂಡು, ಅಗತ್ಯ ಸೌಕರ್ಯ ಕಲ್ಪಿಸುವುದಕ್ಕೆ ಮುಂದಾಗುವ ಮೂಲಕ ಪ್ರಯಾಣಿಕರು ಮತ್ತು ವಾಹನ ಸವಾರರಿಗೆ ಸೌಲಭ್ಯ  ಕಲ್ಪಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry