ಶನಿವಾರ, ನವೆಂಬರ್ 23, 2019
17 °C

`ನಿಷ್ಠೆ, ಸಮಯಪ್ರಜ್ಞೆಯಿಂದ ಕಾರ್ಯನಿರ್ವಹಿಸಿ'

Published:
Updated:

ಕಂಪ್ಲಿ: ಪ್ರಸ್ತುತ ವಿಧಾನಸಭಾ ಚುನಾವಣೆ ನ್ಯಾಯ ಸಮ್ಮತ ಮತ್ತು ನಿಷ್ಪಕ್ಷಪಾತವಾಗಿ ನಡೆಯಲು ಚುನಾ ವಣಾ ತಂಡದ ಎಲ್ಲ ಅಧಿಕಾರಿಗಳು, ಎಂ.ಸಿ.ಸಿ ತಂಡದ ಸದಸ್ಯರು ನಿಷ್ಠೆ, ಸಮಯಪ್ರಜ್ಞೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಕಂಪ್ಲಿ ವಿಧಾನಸಭಾಕ್ಷೇತ್ರ ಚುನಾವಣಾಧಿಕಾರಿ ಟಿ. ವೆಂಕಟೇಶ್ ಮನವಿ ಮಾಡಿದರು.ಕಂಪ್ಲಿ ವಿಧಾನಸಭಾಕ್ಷೇತ್ರ ಚುನಾ ವಣಾ ಕಚೇರಿಯಲ್ಲಿ ಮಂಗಳವಾರ ಜರುಗಿದ ಹೋಬಳಿ ಮಟ್ಟದ ಎಂಸಿಸಿ ತಂಡಗಳ ಸದಸ್ಯರ, ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.ಚುನಾವಣಾ ನೀತಿ ಸಂಹಿತೆಗಳನ್ನು ಉಲ್ಲಂಘನೆಯಾಗದಂತೆ ಎಲ್ಲರೂ ಮುಂಜಾಗ್ರತೆ ವಹಿಸಬೇಕು ಎಂದು ಸೂಚಿಸಿದರು.

ಚುನಾವಣಾ ಮಾದರಿ ನೀತಿ ಸಂಹಿತೆ (ಎಂಸಿಸಿ) ತಂಡದವರು ಮಾನಸಿಕ ಹಾಗೂ ದೈಹಿಕವಾಗಿ ಸದಾ ಸಿದ್ಧರಿ ರಬೇಕು. ತಮ್ಮ ಕೇಂದ್ರ ಸ್ಥಾನ ಬಿಟ್ಟು ತೆರಳದಂತೆ, ಮೊಬೈಲ್ ಸ್ವಿಚ್ ಆಫ್ ಮಾಡದಂತೆ ದಿನದ 24 ಗಂಟೆ ಲಭ್ಯವಾಗುವಂತೆ ಕಾರ್ಯ ನಿರ್ವಹಿಸಬೇಕು ಎಂದರು.ಮತಗಟ್ಟೆ ಮಟ್ಟದ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ನಿತ್ಯ ಜರುಗುವ ಚುನಾವಣಾ ನಡೆಗಳನ್ನು ತಪ್ಪದೆ ದಾಖಲಿಸಿ ಸಂಜೆ 6ರೊಳಗಾಗಿ ಮಾಹಿತಿ ಸಲ್ಲಿಸಬೇಕು. ನೀತಿ ಸಂಹಿತೆ ಉಲ್ಲಂಘನೆ ಯಾಗಿರುವುದು ಕಂಡುಬಂದಲ್ಲಿ ಕೂಡಲೆ ಪಿಡಿಒ ಅವರ ಗಮನಕ್ಕೆ ತರಬೇಕು ಎಂದರು. ಬಿಎಲ್‌ಓಗಳು ಮತದಾರರ ಗುರುತಿನ ಚೀಟಿಗಳನ್ನು ಸಕಾಲದಲ್ಲಿ ಮತದಾರರಿಗೆ ತಲುಪಿಸಬೇಕು ಎಂದು ಹೇಳಿದರು. ಪುರಸಭೆ ಮುಖ್ಯಾಧಿಕಾರಿ ಕೆ.ಬಿ. ಬೀರಣಗಿ ಮಾತನಾಡಿ, ಬೂತ್ ಮಟ್ಟದ ಅಧಿಕಾರಿಗಳು ಮತದಾರರ ಸೇರ್ಪಡೆ, ವರ್ಗಾವಣೆ, ತಿದ್ದುಪಡಿಗೆ ಸಂಬಂಧಪಟ್ಟ ಅರ್ಜಿಗಳನ್ನು ಕೂಲಂಕ ಷವಾಗಿ ಪರಿಶೀಲಿಸಿ ಅಂಗೀಕರಿಸಬೇಕು ಎಂದು ಹೇಳಿದರು.ಉಪ ತಹಶೀಲ್ದಾರ್ ಕೆ. ಬಾಲಪ್ಪ ಮಾತನಾಡಿ, 19 ವಿವಿಧ ಎಂಸಿಸಿ ತಂಡ ಗಳನ್ನು ರಚಿಸಲಾಗಿದ್ದು, ಮೆಟ್ರಿ ಗ್ರಾಮ ಪಂಚಾಯ್ತಿ ಪಿಡಿಓ ಕೆ.ಆರ್. ದೇವೇಶ್, ದೇವಲಾಪುರ ಗ್ರಾ.ಪಂ ಪಿಡಿಓ ಶಿಲ್ಪರಾಣಿ, ಸುಗ್ಗೇನಹಳ್ಳಿ ಗ್ರಾ.ಪಂ ಪಿಡಿಓ ಆಂಜನೇಯಲು, ನಂ.10 ಮುದ್ದಾಪುರ ಗ್ರಾ.ಪಂ ಪಿಡಿಓ ಸಾವಿತ್ರಿ ಕೆ. ಗೌರೋಜಿ, ಹಂಪಾದೇವನಹಳ್ಳಿ ಗ್ರಾ.ಪಂ ಕಾರ್ಯದರ್ಶಿ ರಾಮರಾವ್, ರಾಮಸಾಗರ ಗ್ರಾ.ಪಂ ಕಾರ್ಯದರ್ಶಿ ವೀರಯ್ಯಸ್ವಾಮಿ, ದೇವಸಮುದ್ರ ಪಿಡಿಓ ಬೀರಲಿಂಗಪ್ಪ, ಸಣಾಪುರ ಗ್ರಾ.ಪಂ ಕಾರ್ಯದರ್ಶಿ ಹನುಮಂತಪ್ಪ ನೇತೃತ್ವದಲ್ಲಿ ಗ್ರಾಮೀಣ ಭಾಗದಲ್ಲಿ ಎಂಸಿಸಿ ತಂಡಗಳನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.ಗ್ರಾಮೀಣ ಭಾಗದ ನಿಯಂತ್ರಣ ಕಚೇರಿ ಸಂಖ್ಯೆ: 08394-250005 ಹಾಗೂ 9986028166, ಪಟ್ಟಣ ಪುರಸಭೆ ವ್ಯಾಪ್ತಿಯ ನಿಯಂತ್ರಣ ಸಂಖ್ಯೆಯಾಗಿ 08394-250221ನ್ನು ಸಂಪರ್ಕಿಸುವಂತೆ ಕೋರಿದರು.ಮಧ್ಯ ಸಂಗ್ರಹ: ಅಬ್ಕಾರಿ ಪಿಎಸ್‌ಐ ಮಾರೆಪ್ಪ ಮಾತನಾಡಿ, ಮನೆಗಳಲ್ಲಿ 180 ಎಂ.ಎಲ್ 24 ಬಾಟಲ್‌ಗಳಿಗಿಂತ ಹೆಚ್ಚಿನ ಸಂಖ್ಯೆಯ ಬಾಟಲ್‌ಗಳನ್ನು  ಸಂಗ್ರಹಿಸುವುದು ಅಪರಾಧ. ಸಂಗ್ರಹಿಸಿದ ಗರಿಷ್ಟ 24 ಬಾಟಲ್‌ಗಳ ಅಧಿಕೃತ ಪಾವತಿ ಹೊಂದಿರುವುದು ಕಡ್ಡಾಯ. ಹೆಚ್ಚಿನ ಮಧ್ಯ ಸಂಗ್ರಹಿಸಿದಲ್ಲಿ ತಮ್ಮ ಗಮನಕ್ಕೆ ತರುವಂತೆ ವಿನಂತಿಸಿದರು.ಸಹಾಯಕ ಚುನಾವಣಾಧಿಕಾರಿ ಜಿ. ನಂಜಪ್ಪ, ಉಪ ತಹಶೀಲ್ದಾರ ವಿಶ್ವನಾಥ್, ಆರ್.ಐ ವೆಂಕಟೇಶ್, ಪುರಸಭೆ ವ್ಯವಸ್ಥಾಪಕ ಎಚ್. ಎನ್. ಗುರುಪ್ರಸಾದ್, ಕಂದಾಯ ಅಧಿಕಾರಿ ಎಸ್.ಆರ್. ಫಣಿರಾಜ್, ಕಂಪ್ಲಿ ಹೋಬಳಿ 8 ಗ್ರಾಮ ಪಂಚಾಯ್ತಿಯ ಪಿಡಿಓ, ಕಾರ್ಯದರ್ಶಿಗಳು, ಗ್ರಾಮ ಲೆಕ್ಕಾಧಿಕಾರಿ, ಬಿಎಲ್‌ಓ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.

ಪ್ರತಿಕ್ರಿಯಿಸಿ (+)