ಶನಿವಾರ, ಮೇ 8, 2021
20 °C

`ನಿಸರ್ಗ ಜಲವರ್ಣ ಚಿತ್ರಕ್ಕೆ ಮಹತ್ವ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಗಾವತಿ: ಚಿತ್ರಕಲೆಯಲ್ಲಿ ಎಷ್ಟೇ ಪ್ರಕಾರಗಳಿದ್ದರೂ, ಜಲವರ್ಣ ಮತ್ತು ನಿಸರ್ಗ ಚಿತ್ರಗಳಿಗೆ ತನ್ನದೇ ಆದ ಮಹತ್ವ ಇದೆ ಎಂದು ಕಲಾವಿದ ಹಾಗೂ ವಿರೂಪಾಕ್ಷೇಶ್ವರ ವಿಶ್ವಕಲಾ ಕ್ಷೇತ್ರ ಸಂಸ್ಥೆಯ ಅಧ್ಯಕ್ಷ ಭೀಮರಾಯ ದೇವಿಕೇರಿ ಹೇಳಿದರು.ತಾಲ್ಲೂಕಿನ ವಿರುಪಾಪುರಗಡ್ಡಿಯ ಸಾಯಿ ಪ್ಲಾಜಾದಲ್ಲಿ ಬೆಂಗಳೂರಿನ ಫ್ಲೆನ್ ಏರ್ ಪೈಂಟರ್ಸ್‌ ಗ್ರೂಪ್ ಮತ್ತು ವಿರೂಪಾಕ್ಷೇಶ್ವರ ವಿಶ್ವಕಲಾ ಕ್ಷೇತ್ರ ಸಂಸ್ಥೆಯ ಆಶ್ರಯದಲ್ಲಿ ಹಮ್ಮಿಕೊಂಡ ಮೂರು ದಿನಗಳ ಜಲವರ್ಣ ಚಿತ್ರ ಕಲಾವಿದರ ಸಮಾವೇಶವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.ಪ್ರಕೃತಿಯ ಸೌಂದರ್ಯ ಕುಂಚದಲ್ಲಿ ಸೆರೆ ಹಿಡಿಯುವುದು ಕಲಾವಿದನಿಗೆ ಅಷ್ಟು ಸುಲಭದ ಕೆಲಸವಲ್ಲ. ಆದರೆ ಇಂದಿನ ಅಧುನಿಕ ಯುಗದಲ್ಲೂ ಚಿತ್ರಕಲೆ ತನ್ನ ಶಕ್ತಿ ಉಳಿಸಿಕೊಂಡಿದೆ. ಇದರ ಹಿಂದೆ ಕಲಾವಿದರ ಸಾಮರ್ಥ್ಯ ಮರೆಯುವಂತಿಲ್ಲ ಎಂದರು.ಮಾನವನ ಮನಸ್ಸಿನಲ್ಲಿರುವ ಅವ್ಯಕ್ತ ಭಾವನೆಗಳನ್ನು ಚಿತ್ರಕಲೆ ಮಾಧ್ಯಮದ ಮೂಲಕ ಹೊರ ಹಾಕಬಹುದು. ಬದುಕಿನ ಜಂಜಾಟದಿಂದ ಮುಕ್ತಿ ಪಡೆದ ಪರಿಶುದ್ಧ ಮನಸು ಮಾತ್ರ ಪ್ರಕೃತಿಯ ಸೌಂದರ್ಯ ಚಿತ್ರದ ರೂಪದಲ್ಲಿ ಹೊರಹೊಮ್ಮಿಸುತ್ತದೆ ಎಂದು ಅಭಿಪ್ರಾಯಪಟ್ಟರು.ಹಂಪಿ ಹಾಗೂ ಸುತ್ತಲಿನ ಪರಿಸರದಲ್ಲಿನ ರಮಣೀಯ ಪ್ರಕೃತಿ ಸೌಂದರ್ಯದ ಜೊತೆಗೆ ಪಾರಂಪರಿಕ ಚಿತ್ರಗಳನ್ನು ಉಳಿಸಿ ಅವುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಇಂತಹ ಶಿಬಿರ ಆಯೋಜಿಸಲಾಗುತ್ತಿದೆ ಎಂದು ದೇವಿಕೇರಿ ಹೇಳಿದರು.ಜಲವರ್ಣ ಚಿತ್ರ ಪ್ರದರ್ಶಶನ ಉದ್ಘಾಟಿಸಿದ ರಾಯಚೂರಿನ ದೃಶ್ಯ ಕಲಾ ಅಕಾಡೆಮಿಯ ಖಜಾಂಚಿ ಕೆ.ಎಚ್. ವೆಂಕಟೇಶ ಕುಮಾರ ಮಾತನಾಡಿ, ಕಲಾವಿದರ ಕಲಾ ನೈಪುಣ್ಯಕ್ಕೆ ವೇದಿಕೆಯಾಗಬಲ್ಲ ಇಂಥ ಶಿಬಿರಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸುವ ಅಗತ್ಯವಿದೆ ಎಂದರು.ನಿಸರ್ಗದ ಮಡಿಲಲ್ಲಿ ಕುಳಿತ ಹಲವು ಕಲಾವಿದರು ಐತಿಹಾಸಿಕ ಹಂಪಿಯ ವಿರೂಪಾಕ್ಷ ದೇವಾಲಯ ಗೋಪುರ,  ತುಂಗಭದ್ರಾ ನದಿ, ಪಂಪಾಕ್ಷೇತ್ರಕ್ಕೆ ಭೇಟಿ ನೀಡಿದ ಜನರನ್ನು ಕುಂಚದಲ್ಲಿ ಸೆರೆ ಹಿಡಿಯುವ ಕಾಯಕದಲ್ಲಿ ನಿರತರಾಗಿದ್ದರು. ಸಂಘಟಕರಾದ ಕಾಂತರಾಜ, ಲಕ್ಷ್ಮಣ ಕಬಾಡಿಯಾ, ಶಿವಕುಮಾರ ಜಕ್ಕನಹಳ್ಳಿ, ಮಹಾಂತೇಶ, ಸುರೇಶ, ನವೀನ್, ನಾರಾಯಣ, ರೂಪ, ನೀಲೇಶ್, ಸಂತೋಷ್ ಪಾಂಚಾಲ್, ವಿರೇಶ, ಕಿರಣ್, ರಾಜಶೇಖರ, ಗಿರಿಜಾ, ರವೀಂದ್ರ, ಆಶಾ ಶೈಣೈ ಮೊದಲಾದವರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.