ನಿಸ್ವಾರ್ಥ ಕಾರ್ಯಕರ್ತರನ್ನು ಗುರುತಿಸಿ

7

ನಿಸ್ವಾರ್ಥ ಕಾರ್ಯಕರ್ತರನ್ನು ಗುರುತಿಸಿ

Published:
Updated:

ದೊಡ್ಡಬಳ್ಳಾಪುರ: ಸಮಾಜ ಸೇವೆ, ರಾಜಕೀಯ ಕ್ಷೇತ್ರಗಳಲ್ಲಿ  ಸ್ವಾರ್ಥ, ಸ್ವಹಿತಾಸಕ್ತಿಗಳು ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ನಿಸ್ವಾರ್ಥ ಮನೋಭಾವದಿಂದ ಸೇವೆ ಸಲ್ಲಿಸುವ ಕಾರ್ಯಕರ್ತರನ್ನು  ಗುರುತಿಸುವ ಕಾರ್ಯ ಆಗಬೇಕಿದೆ ಎಂದು ನಗರಸಭೆ ಮಾಜಿ ಉಪಾಧ್ಯಕ್ಷ ಹಾಗೂ ವಾಜಪೇಯಿ ಪ್ರಶಸ್ತಿ ಪ್ರದಾನ ಸಮಿತಿ ಅಧ್ಯಕ್ಷ ನಾರಾಯಣಶರ್ಮ ಹೇಳಿದರು.ನಗರದ ಲಯನ್ಸ್ ಭವನದಲ್ಲಿ ಶನಿವಾರ ನಡೆದ ವಿಶ್ವಮಾನ್ಯ ಶ್ರೀಅಟಲ್‌ಬಿಹಾರಿ ವಾಜಪೇಯಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.`ದೇಶ ಕಂಡ ಉತ್ತಮ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಅವರ ಬದುಕು ಎಲ್ಲರಿಗೂ ಅನುಕರಣೀಯ. ಇವರ ಹೆಸರಿನಲ್ಲಿ ಬಿಜೆಪಿ ಪಕ್ಷ, ಸಂಘ ಪರಿವಾರ, ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕಾರ್ಯರ್ತರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಇದಕ್ಕಾಗಿ ಸಮಿತಿಯನ್ನು ರಚಿಸಲಾಗಿದೆ. ಯಾವುದೇ ಕಾರ್ಯಕ್ರಮ ಚಟುವಟಿಕೆಗಳಿದ್ದರೂ ಸಹ ಕಾರ್ಯಕರ್ತರ ಪಾತ್ರ ಹೆಚ್ಚಾಗಿದೆ.ಇಂದು ಹಲವಾರು ಹಿರಿಯ ಕಾರ್ಯಕರ್ತರು ಆರ್ಥಿಕವಾಗಿ ದುರ್ಬಲರಾಗಿದ್ದರೂ ತಮ್ಮ ಸೇವೆ ಮುಂದುವೆರೆಸಿದ್ದಾರೆ. ಸೇವೆ ಸಲ್ಲಿಸಿ ಮರಣ ಹೊಂದಿರುವ ಕಾರ್ಯಕರ್ತರನ್ನು ಸ್ಮರಿಸುವುದರೊಂದಿಗೆ ಅವರ ಕುಟುಂಬ ಸದಸ್ಯರೊಂದಿಗೆ ನಾವು ಸಹ ಒಂದಾಗುವ ದಿಸೆಯಲ್ಲಿ ಮರಣೋತ್ತರವಾಗಿಯೂ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ~ ಎಂದು ತಿಳಿಸಿದರು.ಸಮಾರಂಭದಲ್ಲಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿರುವ ನಂಜುಂಡಾಚಾರ್, ದರ್ಗಾಜೋಗಿಹಳ್ಳಿ ಸೋಮಲಿಂಗಪ್ಪ ಹಾಗೂ ಮರಣೋತ್ತರವಾಗಿ ಡಿ.ವಿ. ನೀಲಕಂಠಪ್ಪ ಅವರ ಪ್ರಶಸ್ತಿಯನ್ನು ಪತ್ನಿ ಗೌರಮ್ಮ, ಶೇಷಣ್ಣ ಅವರ ಪ್ರಶಸ್ತಿಯನ್ನು ಪತ್ನಿ , ಮಾಜಿ ನಗರಸಭಾ ಸದಸ್ಯೆ ರಾಜಮ್ಮ ಅವರಿಗೆ ಹತ್ತು ಸಾವಿರ ರೂ ನಗದು ನೀಡಿ ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು.ಸಮಾರಂಭದಲ್ಲಿ ಪ್ರಶಸ್ತಿಯ ಪ್ರಾಯೋಜಕ ಹಾಗೂ ಕರ್ನಾಟಕ ರೇಷ್ಮೆ ಮಾರಾಟ ಮಂಡಲಿಯ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಸಮಿತಿಯ ಕಾರ್ಯದರ್ಶಿ ಎಂ.ಪಿ.ನಾಗರಾಜ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ಎಸ್.ಅಶ್ವತ್ಥನಾರಾಯಣಕುಮಾರ್,ಉಪಾಧ್ಯಕ್ಷೆ ಎಸ್.ಸುಮಾಮಂಜುನಾಥ್, ನಗರಸಭಾ ಸದಸ್ಯ ಡಿ.ಎಂ.ಚಂದ್ರಶೇಖರ್, ಮಾಜಿ ನಗರಸಭಾ ಸದಸ್ಯ ನಂಜಪ್ಪ, ಬಿಜೆಪಿ ಮುಖಂಡರಾದ ಉಮಾಶಂಕರ್, ಆವಲಕೊಂಡಪ್ಪ ಮುಂತಾದವರು ಭಾಗವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry