ಶುಕ್ರವಾರ, ನವೆಂಬರ್ 22, 2019
27 °C

ನೀತಿಸಂಹಿತೆ ಉಲ್ಲಂಘನೆ: ಕೇಸ್ ದಾಖಲು

Published:
Updated:

ಸಿಂಧನೂರು: ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿ ಸಿದ ಹಿನ್ನಲೆಯಲ್ಲಿ ಈವರೆಗೆ 15 ಪ್ರಕರಣ ದಾಖಲಿಸಲಾಗಿದೆ ಎಂದು ತಹಸೀಲ್ದಾರ ಬಿ.ಟಿ.ಕುಮಾರಸ್ವಾಮಿ ತಿಳಿಸಿದ್ದಾರೆ.ಗುರುವಾರ ಹೇಳಿಕೆ ನೀಡಿರು ಅವರು, ಏ.6ರಂದು ಜೆಡಿಎಸ್ ಕಾರ್ಯಕರ್ತ ಜಿಲಾನಿಪಾಷ ಪರವಾನಗಿ ಇಲ್ಲದೆ ಜೆಡಿಎಸ್ ಪರ ಪ್ರಚಾರ ಮಾಡಿರುವುದು, ಏ.7ರಂದು ಜೆಡಿಯು ಜಿಲ್ಲಾಧ್ಯಕ್ಷ ಶಾಂತಗೌಡ ಜಾಗೀರದಾರ ಪರವಾನಿಗೆ ಇಲ್ಲದೆ ತಮ್ಮ ವಾಹನದ ಮೇಲೆ ಪಕ್ಷದ ಬಾವುಟ ಅಳವಡಿಸಿಕೊಂಡಿದ್ದು, ಏ.15ರಂದು ಎಪಿಎಂಸಿ ಸದಸ್ಯ ರಾಮರಾವ್, ಜೆಡಿಎಸ್ ಅಭ್ಯರ್ಥಿ ವೆಂಕಟರಾವ್ ನಾಡಗೌಡ, ಜೆಡಿಎಸ್ ಅಧ್ಯಕ್ಷ ಲಿಂಗಪ್ಪ ಅನುಮತಿ ಪಡೆಯದೆ ವಾಹನಕ್ಕೆ ಬಾವುಟ ಬಳಸಿ ಪ್ರಚಾರ ಮಾಡಿದ್ದು, ಏ.17ರಂದು ನಜೀರ್‌ಬೇಗ್, ಇ.ಗೋವಿಂದಗೌಡ ವಲಗುಂಡಿ ಅವರು ದಾಖಲೆ ಇಲ್ಲದೆ 3.80ಲಕ್ಷ ಹಣ ಜೀಪ್‌ನಲ್ಲಿ ಸಾಗಿಸಿದ್ದು, ಏ.20ರಂದು ಬಿಜೆಪಿ ಅಭ್ಯರ್ಥಿ ಕೆ.ಶೇಷಗಿರಿರಾವ್, ಜೆಡಿಎಸ್ ಅಭ್ಯರ್ಥಿ ವೆಂಕಟರಾವ್ ನಾಡಗೌಡ, ಎಂ. ಲಿಂಗಪ್ಪ, ಸಿಪಿಐ(ಎಂಎಲ್) ರಮೇಶ, ಬಿಎಸ್‌ಆರ್ ಕೆ.ಕರಿಯಪ್ಪ, ಕೆಜೆಪಿ ರಾಜಶೇಖರ ಪಾಟೀಲ ನಾಮಪತ್ರ ಸಲ್ಲಿಸುವ ವೇಳೆ ಪಟಾಕಿ ಹಚ್ಚಿದ್ದಲ್ಲದೆ ವಾಹನಗಳಿಗೆ ಧ್ವನಿವರ್ಧಕಗಳನ್ನು ಬಳಸಿ ನೀತಿ ಸಂಹಿತೆ ಉಲ್ಲಂಘಿಸಿದ್ದರಿಂದ ಅವರ ವಿರುದ್ಧ ಪ್ರಕರಣ ದಾಖಲಾಗಿವೆ.ಬಿಜೆಪಿ ಕೊಲ್ಲಾ ಶೇಷಗಿರಿರಾವ್ ಅನುಮತಿ ಇಲ್ಲದೆ ವಾಹನ ಬಳಸಿ ಫುಡ್‌ಪ್ಯಾಕೆಟ್, ನೀರಿನ ಪ್ಯಾಕೆಟ್‌ಗಳನ್ನು ವಿತರಿಸಿದ್ದಕ್ಕೆ, ಪೂರ್ವಾನುಮತಿ ಪಡೆಯದೆ ಬಹಿರಂಗ ಪ್ರಚಾರ, 500 ಜನರಿಗೆ ಊಟದ ಪ್ಯಾಕೆಟ್ ಹಂಚಿರುವುದಕ್ಕೆ ಎರಡು ಪ್ರತ್ಯೇಕ ಕೇಸ್ ದಾಖಲಾಗಿವೆ. ಏ.23ರಂದು ಕಾಂಗ್ರೆಸ್‌ನ ಹಂಪನಗೌಡ ಬಾದರ್ಲಿ ಬಾದರ್ಲಿ ಅವರು ರಾಹುಲ್‌ಗಾಂಧಿಗೆ ಬೆಳ್ಳಿ ಗದೆ ಮತ್ತು ಕಿರೀಟ್ ನೀಡಿದ್ದಕ್ಕೆ ಹಾಗೂ ಹೆಚ್ಚಿನ ವಾಹನಗಳು, ಬಂಟಿಂಗ್ಸ್ ಬಳಸಿದ್ದಕ್ಕೆ ಪ್ರತ್ಯೇಕ ಮೂರು ಪ್ರಕರಣಗಳು ದಾಖಲಾಗಿವೆ. ನೀರಿನ ಸಂಹಿತೆ ಉಲ್ಲಂಘಿಸಿದ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.ಮದ್ಯ ವಶ: ತಾಲ್ಲೂಕಿನ 26ಕಡೆ ದಾಳಿ ನಡೆಸಿ 29,035ರೂ. ಮೌಲ್ಯದ 138.78ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದ್ದು 10ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)