ಸೋಮವಾರ, ನವೆಂಬರ್ 18, 2019
21 °C

ನೀತಿಸಂಹಿತೆ ಪಾಲಿಸಲು ಕರೆ

Published:
Updated:

ಕೃಷ್ಣರಾಜಪುರ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಅಧಿಕಾರಿಗಳು, ರಾಜಕೀಯ ಪಕ್ಷಗಳ ಮುಖಂಡರು ಮತ್ತು ನಾಗರಿಕರ ಸಹಕಾರ ಅಗತ್ಯ ಎಂದು ಚುನಾವಣಾಧಿಕಾರಿ ಬಿ.ಶಿವಸ್ವಾಮಿ ವಿನಂತಿಸಿದರು.ಐಟಿಐ ಚಿತ್ರಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಮಹದೇವಪುರ ಕ್ಷೇತ್ರ ವ್ಯಾಪ್ತಿಯಲ್ಲಿ 299 ಮತಗಟ್ಟೆಗಳಿವೆ. 15 ಮತಗಟ್ಟೆಗಳಿಗೆ ಒಬ್ಬ ಅಧಿಕಾರಿ ಮತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ನೀತಿಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಲು   ಎಲ್ಲೆಡೆ ಹದ್ದಿನಕಣ್ಣು ಇಡಲಾಗಿದೆ ಎಂದರು.

ಪ್ರತಿಕ್ರಿಯಿಸಿ (+)