ಬುಧವಾರ, ನವೆಂಬರ್ 13, 2019
28 °C

ನೀತಿ ಸಂಹಿತೆ: ಜಿಲ್ಲೆಯಾದ್ಯಂತ 29 ಲಕ್ಷ ಜಪ್ತಿ

Published:
Updated:

ಯಾದಗಿರಿ: ವಿಧಾನಸಭೆ ಚುನಾವಣೆ ಘೋಷಣೆಯಾದ ನಂತರ ಇಲ್ಲಿಯವರೆಗೆ ಜಿಲ್ಲೆಯಾದ್ಯಂತ ಒಟ್ಟು ರೂ.29 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ ಈ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ತಿಂಥಣಿ ಬಳಿಯ ಚೆಕ್‌ಪೋಸ್ಟ್‌ನಲ್ಲಿ ರೂ.7.5 ಲಕ್ಷ, ಕಡೇಚೂರು ಬಳಿಯ ಚೆಕ್‌ಪೋಸ್ಟ್‌ನಲ್ಲಿ ರೂ.15 ಲಕ್ಷ ಹಾಗೂ ರೂ.5 ಲಕ್ಷ, ಗುರುಮಠಕಲ್‌ನಲ್ಲಿ ರೂ.1.5 ಲಕ್ಷ ಹಣವನ್ನು ಚುನಾವಣಾ ನೀತಿ ಸಂಹಿತೆ ತಂಡ ವಶಕ್ಕೆ ತೆಗೆದುಕೊಂಡಿದೆ. ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿರುವ ಪೊಲೀಸರು ಹಾಗೂ ಅಬಕಾರಿ ಸಿಬ್ಬಂದಿ ಸುಮಾರು 1123 ಲೀಟರ್ ಮದ್ಯ ಮತ್ತು 52 ಕಿ.ಗ್ರಾಂ. ಗಾಂಜಾ ವಶಪಡಿಸಿಕೊಂಡಿದ್ದಾರೆ.ಅಕ್ರಮ ಮದ್ಯ ವಶ

ಗುರುಮಠಕಲ್: ಮತಕ್ಷೇತ್ರದ ಕೊಂಕಲ ವಲಯದ ಎಂಸಿಸಿ ತಂಡವು ಮಿನಸಪೂರ ಗ್ರಾಮದಲ್ಲಿ ಶುಕ್ರವಾರ ಸಂಜೆ ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದೆ.ಓಟಿ ಹಾಗೂ ವಿಸ್ಕಿಯ 23 ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಂಸಿಸಿ ತಂಡ ಅಧಿಕಾರಿ ಜೆ.ಎಸ್.ಪಾಟೀಲ ತಿಳಿಸಿದ್ದಾರೆ.

ಗ್ರಾಮದ ರಾಘುನಾಥರೆಡ್ಡಿ ಭೀಮರೆಡ್ಡಿ ಎಂಬುವರು ಕಿರಾಣಿ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇಲೆ ದಾಳಿ ಮಾಡಿದಾಗ, ಮದ್ಯದ ಬಾಟಲಿಗಳನ್ನು ಸಂಗ್ರಹಿಸಿದ್ದು ಪತ್ತೆಯಾಗಿದೆ. ಗುರುಮಠಕಲ್ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)