ಮಂಗಳವಾರ, ನವೆಂಬರ್ 12, 2019
28 °C

ನೀತಿ ಸಂಹಿತೆ: ವರದಿ ನೀಡಲು ಸೂಚನೆ

Published:
Updated:

ಬೆಳಗಾವಿ: ಮೇ 5ರಂದು ನಡೆಯ ಲಿರುವ ವಿಧಾನಸಭೆ ಚುನಾವಣೆಗೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಈ ಕುರಿತು ದಿನಾಲೂ ತಾಲ್ಲೂಕುವಾರು ವರದಿ ಗಳನ್ನು ಸಲ್ಲಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಮೌನಿಷ್ ಮೌದ್ಗಿಲ್ ಸೂಚಿಸಿದರು.ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲೆಯ 18 ವಿಧಾನಸಭೆ ಕ್ಷೇತ್ರಗಳ ಚುನಾವಣಾ ಅಧಿಕಾರಿಗಳ ಸಭೆಯಲ್ಲಿ ಅವರು ಚುನಾ ವಣಾ ನೀತಿ ಸಂಹಿತೆ ಕುರಿತು ಪರಿಶೀಲನೆ ನಡೆಸಿದರು.  ಚುನಾವಣೆ ಪ್ರಕ್ರಿಯೆ ಅಚ್ಚುಕಟ್ಟಾಗಿ ನಡೆಯಬೇಕು. ಮೂರು ಹಂತಗಳಲ್ಲಿ ಚುನಾವಣೆ ಕುರಿತು ಅಧಿಕಾರಿಗಳಿಗೆ ತರಬೇತಿ ನೀಡಲಾ ಗುವುದು ಎಂದು ಮೌನಿಷ್ ತಿಳಿಸಿದರು.ಈಗಾಗಲೇ ಆರಂಭಿಸಲಾಗಿರುವ ಸಹಾಯವಾಣಿ ಕೇಂದ್ರಗಳಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ದೂರುಗಳ ಸ್ವೀಕಾರ ಮತ್ತು ಕ್ರಮ ಸಂಖ್ಯೆ ನೋಂದಣಿ ಕಾರ್ಯ ನಡೆಯುತ್ತಿದೆ. ಚುನಾವಣಾ ನೀತಿ ಸಂಹಿತೆ ಜಾರಿಗಾಗಿ ಜಿಲ್ಲೆಯಲ್ಲಿ ಸಂಚಾರಿ ವಿಚಕ್ಷಣ ದಳ, ಪೊಲೀಸ್ ಅಬಕಾರಿ ಇಲಾಖೆ ಅಧಿಕಾರಿ ಗಳ ಮತ್ತು ವಿಡಿಯೊ ವಿಚಕ್ಷಣ ದಳ ಸ್ಥಾಪಿಸಲಾಗಿದೆ. ಈ ಎಲ್ಲ ತಂಡದ ಸಹಾಯವಾಣಿ ದೂರವಾಣಿ ಸಂಖ್ಯೆಗಳು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಾಪಿಸಿದ ನಿಯಂತ್ರಣ ಕೊಠಡಿಯೊಂದಿಗೆ ಸಂಪರ್ಕದಲ್ಲಿರುತ್ತವೆ. ಅದೇ ರೀತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ತನಿಖಾ ಕೇಂದ್ರಗಳಲ್ಲಿಯೂ ದಿನದ 24 ಗಂಟೆಗಳವರೆಗೆ ಸರದಿ ಮೇಲೆ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.ಅಭ್ಯರ್ಥಿಗಳು ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ನಾಮಪತ್ರದೊಂದಿಗೆ ನಿಗದಿಪಡಿಸಿದ ದಾಖಲಾತಿಗಳನ್ನು ಲಗತ್ತಿಸಿದ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಸ್ವೀಕರಿಸಬೇಕು. ನಾಮಪತ್ರ ಪರಿಶೀಲನೆ (ಸ್ಕೂಟನಿ) ಸಂದರ್ಭದಲ್ಲಿ ಸೂಕ್ತ ದಾಖಲೆ ಇಲ್ಲದಿದ್ದರೆ ಅಭ್ಯರ್ಥಿಗಳಿಗೆ ಅದೇ ಸಂದರ್ಭ ಅಥವಾ ಆ ಬಳಿಕ ನೋಟಿಸ್ ನೀಡಬೇಕು ಎಂದು ಅವರು ತಿಳಿಸಿದರು.ಸಭೆಯಲ್ಲಿ ಜಿಲ್ಲೆಯ ಎಲ್ಲ ವಿಧಾನ ಸಭಾ ಕ್ಷೇತ್ರ ಚುನಾವಣಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಹಾಜ ರಿದ್ದರು.

ಪ್ರತಿಕ್ರಿಯಿಸಿ (+)