ನೀತಿ ಸಮಿತಿಗೆ ಅಡ್ವಾಣಿ ಅಧ್ಯಕ್ಷ

7

ನೀತಿ ಸಮಿತಿಗೆ ಅಡ್ವಾಣಿ ಅಧ್ಯಕ್ಷ

Published:
Updated:

ನವದೆಹಲಿ (ಪಿಟಿಐ): ಲೋಕ­­ಸಭೆಯ ಪ್ರತಿಷ್ಠಿತ ನೀತಿ ಸಂಹಿತೆ ಸಮಿ­ತಿಯ ಅಧ್ಯಕ್ಷ­ರಾಗಿ ಬಿಜೆಪಿಯ ಹಿರಿಯ ನಾಯಕ ಎಲ್‌. ಕೆ. ಅಡ್ವಾಣಿ ಅವರನ್ನು ನೇಮಿಸಲಾಗಿದೆ.ವಯಸ್ಸು 75 ದಾಟಿದವರನ್ನು ಸಂಪುಟಕ್ಕೆ ಸೇರಿಸುವುದಿಲ್ಲ ಎಂಬ ನಿರ್ಧಾರದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಹಿರಿಯ ಸಚಿವ­ರಾಗುವ ಅವಕಾಶ ಅಡ್ವಾಣಿ ಅವರಿಗೆ ಕೈ ತಪ್ಪಿತ್ತು. ಈಗ ಅವರನ್ನು ನೀತಿ ಸಂಹಿತೆ ಸಮಿತಿ ಅಧ್ಯಕ್ಷರಾಗಿ ಸ್ಪೀಕರ್‌ ಸುಮಿತ್ರಾ ಮಹಾಜನ್‌  ನೇಮಿಸಿದ್ದಾರೆ.ಈ ಸಮಿತಿಯಲ್ಲಿ ಹುಬ್ಬಳ್ಳಿ ಸಂಸದ ಪ್ರಹ್ಲಾದ ಜೋಶಿ ಅವರೂ ಸದಸ್ಯ­ರಾಗಿ­ದ್ದಾರೆ. ಸಾರ್ವಜನಿಕ ಉದ್ಯ­ಮ­ಗಳ ಬಗೆಗಿನ ಸಮಿತಿ, ಮಾಹಿತಿ ತಂತ್ರಜ್ಞಾನ ಬಗೆಗಿನ ಸಮಿತಿ­ಗಳಲ್ಲಿ ಅಡ್ವಾಣಿ ಅವರು ಸದಸ್ಯ­ರಾಗಿದ್ದಾರೆ.ಸಂಸದರು ಅನೈತಿಕವಾಗಿ ವರ್ತಿ­ಸಿದ ಬಗ್ಗೆ ನೀಡಲಾದ ದೂರು­ಗಳನ್ನು ನೀತಿ ಸಂಹಿತೆ ಸಮಿತಿಯು ಪರಿಶೀಲಿಸು­ತ್ತದೆ. ಸದಸ್ಯರ ಅನೈತಿಕ ನಡತೆ ಬಗ್ಗೆ ಸ್ವಯಂ ಪ್ರೇರಿತ ವಿಚಾರಣೆ ನಡೆಸುವ ಅಧಿಕಾರವೂ ಈ ಸಮಿತಿಗೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry