ನೀತೂ `ಪ್ರಾದೇಶಿಕ' ಪ್ರೇಮ

7

ನೀತೂ `ಪ್ರಾದೇಶಿಕ' ಪ್ರೇಮ

Published:
Updated:

ಪ್ರಾದೇಶಿಕ ಭಾಷೆಗಳಲ್ಲಿ ನಟಿಸುವಾಗ ಸಿಕ್ಕುವ ನೆಮ್ಮದಿ ಬಾಲಿವುಡ್ ಚಿತ್ರಗಳಲ್ಲಿ ನಟಿಸುವಾಗ ಸಿಕ್ಕುವುದಿಲ್ಲ ಎನ್ನುತ್ತಿದ್ದಾರೆ ನಟಿ ನೀತೂ ಚಂದ್ರ.

ಕಳೆದ ಒಂದು ವರ್ಷದಿಂದ ಹಿಂದಿ ಸಿನಿಮಾಗಳಿಗೆ ಬೆನ್ನುಹಾಕಿದಂತೆ ತೋರುವ ನೀತೂಗೆ ಉತ್ತಮ ಕಥೆಯುಳ್ಳ, ಉತ್ತಮ ಪಾತ್ರವುಳ್ಳ ಪ್ರಾದೇಶಿಕ ಸಿನಿಮಾಗಳಲ್ಲೇ ನಟಿಸುವುದೇ ಹೆಚ್ಚು ಖುಷಿ ಕೊಟ್ಟಿದೆಯಂತೆ. ನೀತೂ ಈ ಹಿಂದೆ `ಗರಂ ಮಸಾಲಾ', `ಓಯೆ ಲಕ್ಕಿ ಲಕ್ಕಿ ಓಯೆ' ಮತ್ತು `ಟ್ರಾಫಿಕ್ ಸಿಗ್ನಲ್' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇವರ ಬಹು ನಿರೀಕ್ಷಿತ `ಕುಚ್ ಲವ್ ಜೈಸಾ' ಚಿತ್ರ ಬಾಕ್ಸ್‌ಆಫೀಸ್‌ನಲ್ಲಿ ಮಕಾಡೆ ಮಲಗಿಕೊಂಡಿತ್ತು. ಅಲ್ಲಿಂದ ಅವರು ಬಾಲಿವುಡ್‌ಗೆ ಬೆನ್ನುಹಾಕಲು ಆರಂಭಿಸಿದರು. ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ಬ್ಯುಸಿಯಾಗಿರುವ ನೀತೂ ಕೈಯಲ್ಲಿ ಈಗ `ಹೋಂ ಸ್ವೀಟ್ ಹೋಂ' ಎಂಬ ಗ್ರೀಕ್ ಚಿತ್ರ ಕೂಡ ಇದೆ. `ಕಳೆದ ಆರು ವರ್ಷಗಳಿಂದ ನಾನು ಉತ್ತಮ ಚಿತ್ರಕಥೆಯುಳ್ಳ, ಪ್ರೇಕ್ಷಕರ ಮನಸ್ಸಿಗೆ ಇಷ್ಟವಾಗುವಂಥ ಸಿನಿಮಾಗಳಲ್ಲಿ ನಟಿಸಿದ್ದೇನೆ. ಅದು ಎಷ್ಟು ಜನರನ್ನು ತಲುಪಿತು ಎಂದು ಸಮೀಕ್ಷೆ ಮಾಡಲು ಹೋಗುವುದಿಲ್ಲ.

ಯಾವುದೇ ಸಿನಿಮಾ ಕುಟುಂಬದ ಹಿನ್ನೆಲೆಯಿಂದ ಬಂದಿರದ ನಾನು ಯಾರ ಬಳಿಯೂ ಹೋಗಿ ಒಂದು ಛಾನ್ಸ್ ಕೊಡಿ ಎಂದು ಕೇಳಲು ಇಷ್ಟಪಡುವುದಿಲ್ಲ. ಹಾಗಾಗಿ ಇಂಡಸ್ಟ್ರಿ ಕೂಡ ನನ್ನನ್ನು ಪದೇಪದೇ ಕರೆದು ಚಾನ್ಸ್ ಕೊಡುವುದೂ ಇಲ್ಲ. ಸದ್ಯಕ್ಕೆ ನಾನೀಗ ನಟಿಸುವ ಸಿನಿಮಾಗಳ ಆಯ್ಕೆಯಲ್ಲಿ ತುಂಬಾ ಚೂಸಿ ಆಗಿದ್ದೇನೆ. ಪ್ರಾದೇಶಿಕ ಭಾಷೆಯ ಸಿನಿಮಾಗಳು ಗುಣಮಟ್ಟದಲ್ಲಿ ತುಂಬಾ ಮುಂದಿವೆ, ಹಾಗಾಗಿ ನಾನು ಈ ಚಿತ್ರಗಳಲ್ಲಿ ನಟಿಸಲು ಹೆಚ್ಚು ಇಷ್ಟಪಡುತ್ತೇನೆ' ಎನ್ನುತ್ತಾರೆ ನೀತು.ಅಂದಹಾಗೆ, ನೀತೂ ನಟನೆಯಿಂದ ನಿರ್ಮಾಪಕಿಯಾಗಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಭೋಜ್‌ಪುರಿಯಲ್ಲಿ ತಯಾರಾದ `ದೇಸ್ವಾ' ಚಿತ್ರವನ್ನು ಅವರ ಸೋದರ ನಿರ್ದೇಶಿಸಿದ್ದಾರೆ. ಆ ಚಿತ್ರಕ್ಕೆ ನೀತೂ ಅವರೇ ನಿರ್ಮಾಪಕಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry