ನೀನಾಸಂ ರಂಗ ತರಬೇತಿ ಶಿಬಿರ

7

ನೀನಾಸಂ ರಂಗ ತರಬೇತಿ ಶಿಬಿರ

Published:
Updated:

ಬೆಂಗಳೂರು: ಹೆಗ್ಗೋಡಿನ ನೀನಾಸಂ ರಂಗಶಿಕ್ಷಣ ಕೇಂದ್ರ ಮೇ 11ರಿಂದ ನಡೆಸಲಿರುವ ಮೂರು ವಾರಗಳ ರಂಗತರಬೇತಿ ಶಿಬಿರಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ. 18ರಿಂದ 35 ವರ್ಷದೊಳಗಿನ, ಎಸ್.ಎಸ್.ಎಲ್.ಸಿ. ವರೆಗೆ ಓದಿದವರು ಶಿಬಿರದಲ್ಲಿ ಪಾಲ್ಗೊಳ್ಳಬಹುದು.ರಂಗಶಿಕ್ಷಣ ಕೇಂದ್ರದ ಅಧ್ಯಾಪಕರಲ್ಲದೆ ಆಹ್ವಾನಿತ ಗಣ್ಯರು ಶಿಬಿರದಲ್ಲಿ ತರಬೇತಿ ನಡೆಸಿಕೊಡುತ್ತಾರೆ. ರಂಗಮಾಧ್ಯಮದ ಬಗ್ಗೆ ಮಾಹಿತಿಗಳನ್ನು ನೀಡುವ ಜತೆಗೆ ಶಿಬಿರಾರ್ಥಿಗಳಿಗೆ ನುರಿತ ನಿರ್ದೇಶಕರಿಂದ ರಂಗನಾಟಕ ಪ್ರಯೋಗಗಳನ್ನೂ ಮಾಡಿಸಲಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆ ದಿನ ಏಪ್ರಿಲ್ 20.  ಮಾಹಿತಿಗೆ : ಸಂಚಾಲಕರು, ನೀನಾಸಂ ರಂಗಶಿಕ್ಷಣ ಕೇಂದ್ರ, ಹೆಗ್ಗೋಡು, ಸಾಗರ, ಶಿವಮೊಗ್ಗ ಜಿಲ್ಲೆ. ದೂರವಾಣಿ: 08183 - 265646.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry