ಬುಧವಾರ, ಏಪ್ರಿಲ್ 14, 2021
24 °C

ನೀನಿಲ್ಲದೇ...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫರ‌್ಹಾನ್ ಅಖ್ತರ್, ಶಾಹಿದ್ ಕಪೂರ್, ಅರ್ಜುನ್ ರಾಂಪಾಲ್ ಹಾಗೂ ರಣಬೀರ್ ಕಪೂರ್ ಎಲ್ಲರೂ ಒಂದಾಗಿ ಮಾತನಾಡಿದ್ದಾರೆ. ಇವರೆಲ್ಲರ ಬದುಕಿನಲ್ಲಿ `ಮಹಿಳೆ~ಯ ಪಾತ್ರ ಏನು ಎಂದು..? `ಅವಳಿಲ್ಲದ~ ಬದುಕು ಸಾಧ್ವೇ ಎಂದು..!ಹೀಗೆ ಮಾತನಾಡಲು ಹೇಳಿದ್ದು ಜೋಯಾ ಅಖ್ತರ್. ಸ್ತನ ಕ್ಯಾನ್ಸರ್ ಬಗೆಗಿನ ಪ್ರಚಾರಕ್ಕಾಗಿ ಕೈಗೊಂಡಿರುವ ಸಾರ್ವಜನಿಕ ಹಿತಾಸಕ್ತಿಯ ಘೋಷಣೆಗಾಗಿ ಜೋಯಾ ಈ ಕಿರುಚಿತ್ರವನ್ನು ಹೆಣೆದಿದ್ದಾರೆ. ಈ ಪ್ರಚಾರದ ತುಣುಕಿನಲ್ಲಿ ಹುಡುಗರೆಲ್ಲ ಮಾತನಾಡಲಿದ್ದಾರೆ.ಸ್ತನ ಕ್ಯಾನ್ಸರ್ ಎಂದರೆ ಕೇವಲ ಮಹಿಳೆಯರಿಗೆ ಸಂಬಂಧಿಸಿದ್ದಲ್ಲ. ಸ್ತನ ಕ್ಯಾನ್ಸರ್‌ಗೆ ಮಹಿಳೆ ಬಲಿಯಾದರೆ ಅದು ಇಡೀ ಕುಟುಂಬಕ್ಕೆ ಆಗುವ ನಷ್ಟ. ಅವಳನ್ನು ಪ್ರೀತಿಸುವ ವ್ಯಕ್ತಿಗೆ ಆಗುವ ನಷ್ಟ. ಈ ನಷ್ಟವನ್ನು ತುಂಬಿಸಲು ಸಾಧ್ಯವೇ ಇಲ್ಲ. ಕ್ಯಾನ್ಸರ್‌ಗೆ ಲಿಂಗಭೇದವಿಲ್ಲ. ಅದು ಎಲ್ಲರನ್ನೂ ಬಲಿ ತೆಗೆದುಕೊಳ್ಳುತ್ತದೆ.ಜೀವಬಲಿಯಲ್ಲದೇ ಇದ್ದರೂ ಜೀವಾಳವಾದವರನ್ನೂ ಬಲಿ ತೆಗೆದುಕೊಳ್ಳುತ್ತದೆ. ಇದೇ ನಿಟ್ಟಿನಲ್ಲಿ ಸ್ತನ ಕ್ಯಾನ್ಸರ್ ಬಗ್ಗೆ ಮುಕ್ತ ಚರ್ಚೆಯಾಗುವ ಅಗತ್ಯವಿದೆ. ಮಹಿಳೆಯ ವಿಶ್ವಾಸಕ್ಕಿಂತ ಹೆಚ್ಚಾಗಿ ಪುರುಷರ ವಿಶ್ವಾಸ ಗಳಿಸಬೇಕಿದೆ. ಈ ನಿಟ್ಟಿನಲ್ಲಿ ಪುರುಷರೂ ಮಾತನಾಡಬೇಕಿದೆ. ಮುಕ್ತ ಚರ್ಚೆಯಾಗಬೇಕಿದೆ. ಅವಳಿಲ್ಲದೇ ಅವನೂ ಇಲ್ಲ ಎಂಬುದನ್ನು ಒತ್ತಿ ಹೇಳಲು ಈ ಪ್ರಯೋಗಕ್ಕೆ ಇಳಿದಿದ್ದೇನೆ. ಎಂದು ಜೋಯಾ ಹೇಳಿದ್ದಾರೆ.ಸ್ತನ ಕ್ಯಾನ್ಸರ್‌ಗೆ ಬಲಿಯಾಗುವ ಬಹುತೇಕ ಮಹಿಳೆಯರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಲ್ಲಿ ದೊಡ್ಡ ತಡೆಯಾಗಿರುವುದು ಕೇವಲ ಭಯ ಮತ್ತು ಆತಂಕ ಎನ್ನುವುದು ಅಚ್ಚರಿಯ ಸಂಗತಿಯಾಗಿದೆ.

 

ಇದನ್ನು ಬದಲಿಸಬೇಕಿದ್ದರೆ ಜಾಗೃತಿ ಕೇವಲ ಮಹಿಳೆಯರಲ್ಲಿ ಅಲ್ಲ, ಅವರೊಂದಿಗಿರುವ ಪುರುಷರಿಗೂ ಬೇಕಿದೆ ಎಂದು ಜೋಯಾ ಹೇಳಿದ್ದಾರೆ. ಓಗಾನ್ ಕ್ಯಾನ್ಸರ್ ಫೌಂಡೇಶನ್‌ಗಾಗಿ ಈ ಜಾಹೀರಾತನ್ನು ಜೋಯಾ ತಯಾರಿಸುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.