ನೀರಗಂಟಿ, ಜಾಡಮಾಲಿಗಳಿಂದ ಅರೆಬೆತ್ತಲೆ ಮೆರವಣಿಗೆ

7
ಹೊಸದುರ್ಗ: ಗ್ರಾಮ ಪಂಚಾಯ್ತಿ ಸಿಬ್ಬಂದಿ ನೇಮಕ ಅವ್ಯವಹಾರ ಆರೋಪ

ನೀರಗಂಟಿ, ಜಾಡಮಾಲಿಗಳಿಂದ ಅರೆಬೆತ್ತಲೆ ಮೆರವಣಿಗೆ

Published:
Updated:

ಹೊಸದುರ್ಗ: ಗ್ರಾಮ ಪಂಚಾಯ್ತಿ ಸಿಬ್ಬಂದಿಯ ನೇಮಕಾತಿಯಲ್ಲಿ ನಡೆದಿರುವ ಅಕ್ರಮ ಖಂಡಿಸಿ ಹಾಗೂ ಸಿಬ್ಬಂದಿ ವಿವಿಧ ಬೇಡಿಕೆಯು ಈಡೇರಿಕೆಗೆ ಆಗ್ರಹಿಸಿ ಬುಧವಾರ ನೀರಗಂಟಿ, ಜಾಡಮಾಲಿಗಳು ಮತ್ತು ಕರವಸೂಲಿಗಾರರು ಅರೆಬೆತ್ತಲೆ  ಮೆರವಣಿಗೆ ನಡೆಸಿದರು.ಪಟ್ಟಣದ ಹುಳಿಯಾರು ವತ್ತದಿಂದ ಹಿಡಿದು ಟಿ.ಬಿ. ವೃತ್ತದವರೆಗೆ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ   ತಾಲ್ಲೂಕು ಎಐಟಿಯುಸಿ ಸಂಘದ ಅಧ್ಯಕ್ಷ ಕೆ.ಎನ್ ರಮೇಶ್,  ತಾಲ್ಲೂಕಿನ ಗ್ರಾಮ ಪಂಚಾಯ್ತಿ ಕರ ವಸೂಲಿಗಾರ, ನೀರಗಂಟಿ, ಜವಾನ, ಜಾಡಮಾಲಿಗಳಿಗೆ ಸುಮಾರು 20-30 ತಿಂಗಳಿನಿಂದಲೂ ನೀಡಿಲ್ಲ. ಸರ್ಕಾರದ ಆದೇಶವಿದ್ದರೂ ಅಧಿಕಾರಿಗಳು ವೇತನ ನೀಡದೆ, ನಿರ್ಲಕ್ಷ್ಯ ಮಾಡುತ್ತಿದ್ದಾರೆ.

ಉದ್ಯೋಗ ಖಾತ್ರಿ ಯೋಜನೆಯ ಸರ್ಕಾರಿ ಆದೇಶದಂತೆ ಹೊರಗುತ್ತಿಗೆ ಆಧಾರದ ಮೇಲೆ ಗ್ರಾಮ ಪಂಚಾುಯ್ತಿಗಳಲ್ಲಿ ಕಂಪ್ಯೂಟರ್ ಅಪರೇಟರ್‌ಗಳನ್ನು 11 ತಿಂಗಳ ಅವಧಿಗಾಗಿ ನೇಮಿಸಲಾಗಿದೆ. ಆದರೆ,  ಇತ್ತೀಚೆಗೆ ಸಭಾ ನಡವಳಿಕೆ ಪುಸ್ತಕವನ್ನು ತಿದ್ದಿ ಅವರನ್ನು ಗುಮಾಸ್ತ-ಕಂ ಲೆಕ್ಕಿಗ-ಕಂ ಬೆರಳಚ್ಚುಗಾರ ಎಂದು ಅಕ್ರಮವಾಗಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನುಮೋದನೆ ನೀಡಿದ್ದಾರೆ ಎಂದು ಆರೋಪಿಸಿದರು.ಈ ರೀತಿಯಲ್ಲಿ ಅಕ್ರಮವಾಗಿ ನೇಮಿಸಿಕೊಂಡಿರುವ ಪ್ರಕರಣವು ತಾಲ್ಲೂಕಿನ ಬಲ್ಲಾಳಸಮುದ್ರ, ದೊಡ್ಡಕಿಟ್ಟದಹಳ್ಳಿ, ಶ್ರೀರಾಂಪುರ, ಕಂಗವಳ್ಳಿ ಗ್ರಾಮ ಪಂಚಾಯ್ತಿಗಳಲ್ಲಿ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಬೆಳಕಿಗೆ ಬಂದಿದೆ ಎಂದರು.

ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪಂಚಾಯ್ತಿ  ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿ ಅವ್ಯವಹಾರವನ್ನು ಖಂಡಿಸಿ ವಿವಿಧ ಗ್ರಾಮ ಪಂಚಾಯ್ತಿಗಳ ಕರ ವಸೂಲಿಗಾರರು, ನೀರಗಂಟಿ, ಜವಾನ, ಜಾಡಮಾಲಿಗಳು ಅರೆಬೆತ್ತಲೆ ನಡೆಸಿ ಪ್ರತಿಭಟಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry