ಭಾನುವಾರ, ಜೂನ್ 20, 2021
25 °C

ನೀರಾವರಿ ತಜ್ಞ ಜಿ.ಎಸ್‌.ಪರಮಶಿವಯ್ಯ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ರಾಜ್ಯದ ಉನ್ನತ ಮಟ್ಟದ ನೀರಾ­­ವರಿ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಜಿ.ಎಸ್‌.­ಪರಮ­­ಶಿವಯ್ಯ(95) ಮಂಗಳ­ವಾರ ಇಲ್ಲಿ ಖಾಸಗಿ ಆಸ್ಪತ್ರೆ­ಯಲ್ಲಿ ನಿಧನ­ರಾ­ದರು.ಮೂರು ದಿನಗಳಿಂದ ಜ್ವರ ಮತ್ತು ಶೀತದಿಂದ ಅಸ್ವಸ್ಥರಾಗಿದ್ದ ಅವರನ್ನು ಮಂಗಳ­ವಾರ ಬೆಳಿಗ್ಗೆ ಆಸ್ಪತ್ರೆಗೆ ದಾಖಲು ಮಾಡ­ಲಾಗಿತ್ತು. ಬೆಳಿಗ್ಗೆ 11.30ಕ್ಕೆ ಅವರು ಕೊನೆಯು­ಸಿರೆಳೆ­ದರು. ಅವರಿಗೆ ಮೂವರು ಪುತ್ರರು, ಪುತ್ರಿ ಇದ್ದಾರೆ. ಬುಧ­ವಾರ ಮಧ್ಯಾಹ್ನ 2 ಗಂಟೆಗೆ ಸಿದ್ದ­ಗಂಗಾ ಮಠದ ಸಮೀಪದ ಮರಿಯಪ್ಪ ಗಾರ್ಡನ್‌­­­ನಲ್ಲಿ ಅಂತ್ಯ ಸಂಸ್ಕಾರ ನಡೆ­ಯ­­ಲಿದೆ ಎಂದು ಕುಟುಂಬ ಮೂಲ ತಿಳಿಸಿವೆ.1942ರಲ್ಲಿ ಕ್ವಿಟ್‌ ಇಂಡಿಯಾ ಚಳವಳಿ­­ಯಲ್ಲಿ ಭಾಗವಹಿಸಿದ್ದರು. ಬಿ.ಇ ಸಿವಿಲ್‌ ಎಂಜಿನಿಯರಿಂಗ್‌ ಪದವಿ ಪಡೆ­ದಿದ್ದ ಅವರು, ನೀರಾವರಿ ಇಲಾಖೆ­ಯಲ್ಲಿ ಕಾರ್ಯ­­ಪಾಲಕ ಎಂಜಿನಿ­ಯರ್‌ ಆಗಿ ಸೇವೆ ಆರಂಭಿ­ಸಿದ್ದರು. ಅಧೀಕ್ಷಕ ಎಂಜಿನಿ­­ಯರ್‌ ಆಗಿ 1974ರಲ್ಲಿ ನಿವೃತ್ತ­­­ರಾ­ಗಿ­ದ್ದರು. ತುಮಕೂರು ಸರ್ಕಾರಿ ಪಾಲಿ­ಟೆಕ್ನಿಕ್‌ ಕಾಲೇಜಿನ ಪ್ರಾಚಾರ್ಯ­­­ರಾಗಿ­ಯೂ ಸೇವೆ ಸಲ್ಲಿಸಿದ್ದರು.ಎಸ್‌.ಎಂ.ಕೃಷ್ಣ ಮುಖ್ಯ­ಮಂತ್ರಿ­­ಯಾ­ಗಿದ್ದ ಅವಧಿಯಲ್ಲಿ ರಚನೆ­ಯಾಗಿದ್ದ ನೀರಾವರಿ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷರಾಗಿದ್ದ ಪರಮ­ಶಿವಯ್ಯ ಅವರನ್ನು ಇದುವರೆಗಿನ ಎಲ್ಲ ಸರ್ಕಾರ­ಗಳು ಅಧ್ಯಕ್ಷರಾಗಿ ಮುಂದು­ವರಿ­ಸಿ­ದ್ದವು.ಬಯಲು ಸೀಮೆಯ 9 ಜಿಲ್ಲೆಗಳಿಗೆ ನೀರು ತರುವಲ್ಲಿ ಅವರು ನೀಡಿದ್ದ ತಾಂತ್ರಿಕ ವರದಿ ‘ಪರಮ­ಶಿವಯ್ಯ ವರದಿ’ ಎಂದೇ ಹೆಸರಾಗಿತ್ತು. ‘ಪರಮ­ಶಿವಯ್ಯ ವರದಿ’ ಜಾರಿಗಾಗಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನಿರಂತರ ಪ್ರತಿಭಟನೆಗಳು ನಡೆದಿದ್ದವು. ಎತ್ತಿನಹೊಳೆ ಯೋಜನೆ ಜಾರಿಗೆ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಈಚೆಗೆ ಸರ್ಕಾರಕ್ಕೆ ಎಚ್ಚರಿಕೆಯನ್ನೂ ನೀಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.