ಸೋಮವಾರ, ಜೂನ್ 14, 2021
21 °C

ನೀರಾವರಿ ಹೋರಾಟಗಾರನ ಈಡೇರದ ಆಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ‘ಬಯಲು ಸೀಮೆಯ 9 ಜಿಲ್ಲೆಗಳಿಗೆ ನೀರು ಹರಿಯುವುದನ್ನು ನೋಡುವುದು ನನ್ನ ಕೊನೆಯ ಆಸೆ. ನಾನು ಬದುಕಿರುವಾಗಲೇ ಇಲ್ಲಿ ಹಸಿರು ಬೆಳೆದು ನಳನಳಿಸುವುದುನ್ನು ನೋಡಬೇಕು’ ಎಂಬ ಕನಸು ನೀರಾವರಿ ತಜ್ಞ ಜಿ.ಎಸ್‌.ಪರಮ­ಶಿವಯ್ಯ ಅವರದ್ದು. ಆದರೆ ನೀರಾವರಿ ಹೋರಾಟ­ಗಾರನ ಈ ಆಸೆ ಈಡೇರಲಿಲ್ಲ.ತಾವು ಸರ್ಕಾರಕ್ಕೆ ಸಲ್ಲಿಸಿದ ವರದಿ (ಪರಮ­ಶಿವಯ್ಯ ವರದಿ) ಜಾರಿ ಮಾಡಿದರೆ ತುಮಕೂರು ಸೇರಿದಂತೆ 9 ಜಿಲ್ಲೆಗಳ 40 ತಾಲ್ಲೂಕುಗಳ ಎಲ್ಲ ಕೆರೆಗಳನ್ನು ವರ್ಷಕ್ಕೆ ಎರಡು ಬಾರಿ ತುಂಬಿಸಬಹುದು. ಇದರಿಂದ ಅಂತರ್ಜಲ ವೃದ್ಧಿಯಾಗುವುದಲ್ಲದೆ, 50 ಲಕ್ಷ ಎಕರೆ ಒಣ ಭೂಮಿ ನೀರಾವರಿಗೆ ಒಳಪಡಲಿದೆ. ಆದರೆ ಯೋಜನೆ ಜಾರಿಗೆ ರಾಜಕೀಯ ಇಚ್ಛಾಶಕ್ತಿ ಕೊರತೆ ಇದೆ. ಹೋರಾಟ ಮಾಡದಿದ್ದರೆ ಯೋಜನೆ ಜಾರಿ ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು.ಪ್ರತಿ ವರ್ಷ 2500 ಟಿಎಂಸಿ ನೀರು ಸಮುದ್ರದ ಪಾಲಾಗುತ್ತಿದೆ. ಇದರಲ್ಲಿ 450 ಟಿಎಂಸಿ ನೀರನ್ನು ಬಯಲು ಸೀಮೆಯ 9 ಜಿಲ್ಲೆಗಳಿಗೆ ಹರಿಸಿದರೆ ರಾಮ ರಾಜ್ಯ ಮಾಡಬಹುದು. ಎತ್ತಿನಹೊಳೆ ಯೋಜನೆ­ಯಿಂದ ಇಲ್ಲಿನ 9 ಜಿಲ್ಲೆಗಳಿಗೆ ಯಾವುದೇ ಪ್ರಯೋಜನ­ವಿಲ್ಲ. ಎತ್ತಿನಹೊಳೆ ಯೋಜನೆ ಜನರ ಕಣ್ಣೊರೆಸುವ ತಂತ್ರ ಎಂದಿದ್ದರಲ್ಲದೆ, ತಮ್ಮ ವರದಿ ಜಾರಿ ಮಾಡದಿದ್ದರೆ, ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದರು. ಈಚೆಗೆ ತುಮಕೂರು ಜಿಲ್ಲೆಯಲ್ಲಿಯೂ ನೀರಾವರಿ ಹೋರಾಟಕ್ಕೆ ಚಾಲನೆ ನೀಡಿದ್ದರು.ಅಂತಿಮ ನಮನ

ನಗರದ ಎಸ್‌.ಎಸ್‌.ಪುರಂ ನಿವಾಸದಲ್ಲಿ ಜಿ.ಎಸ್‌.ಪರಮಶಿವಯ್ಯ ಅವರ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಸಂಸದ ಜಿ.ಎಸ್‌್.ಬಸವರಾಜು, ಶಾಸಕ ಬಿ.ಸುರೇಶ್‌­ಗೌಡ, ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ.ಬಿ.­ನಂದೀಶ್‌, ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾ­ಯಣ­ಸ್ವಾಮಿ, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್‌.ಆಂಜನೇಯರೆಡ್ಡಿ, ಕುಪ್ಪೂರು ಗದ್ದಿಗೆ ಮಠದ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.ಸಂತಾಪ

ಜಿ.ಎಸ್‌.ಪರಮಶಿವಯ್ಯ ನಿಧನಕ್ಕೆ ಸಿದ್ದಗಂಗಾ ಮಠಾಧೀಶರಾದ ಡಾ.ಶಿವಕುಮಾರ ಸ್ವಾಮೀಜಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಸಾಗರನಹಳ್ಳಿ ಪ್ರಭು, ಕನ್ನಡ ಸೇನೆ ಅಧ್ಯಕ್ಷ ಧನಿಯಾ ಕುಮಾರ್‌ ಮುಂತಾದವರು ಸಂತಾಪ ಸೂಚಿಸಿದ್ದಾರೆ.ಡಿವೈಎಫ್‌ಐ ಜಿಲ್ಲಾ ಸಮಿತಿ ಅಧ್ಯಕ್ಷ ಎಸ್‌.ರಾಘ­ವೇಂದ್ರ, ಉಪಾಧ್ಯಕ್ಷ ಎಂ.ಜಿ.ಮಂಜುನಾಥ್‌, ಜಿಲ್ಲಾ ಕಾರ್ಯದರ್ಶಿ ಎಂ.ಆರ್‌.ನಾಗರಾಜು, ಸಿಪಿಐ ಜಿಲ್ಲಾಧ್ಯಕ್ಷ ಸೈಯದ್‌ ಮುಜೀಬ್‌, ನಗರ ಕಾರ್ಯದರ್ಶಿ ಎನ್‌.ಕೆ.ಸುಬ್ರಹ್ಮಣ್ಯ ಸಂತಾಪ ಸೂಚಿಸಿದ್ದಾರೆ.ತಿಪಟೂರು: ಪರಮಶಿವಯ್ಯ ನಿಧನಕ್ಕೆ ತಾಲ್ಲೂಕು ರೈತ ಸಂಘ ಸೇರಿದಂತೆ ನಗರದ ನಾನಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.ರೈತ ಕಿಸಾನ್ ಜಿಲ್ಲಾಧ್ಯಕ್ಷ ಚನ್ನಬಸವಯ್ಯ, ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ವಿಜಯಕುಮಾರ್, ವಾಲ್ಮೀಕಿ ಸಂಘದ ಜಯಸಿಂಹ, ಆಟೊ ಚಾಲಕರು ಮತ್ತು ಮಾಲೀಕರ ಸಂಘದ ಇಂದುಶೇಖರ್, ತಾಲ್ಲೂಕು ನವ ನಿರ್ಮಾಣ ವೇದಿಕೆ ಅಧ್ಯಕ್ಷ ಕೆ.ಎಸ್. ಸದಾಶಿವಯ್ಯ ಮತ್ತು ಕಾರ್ಯದರ್ಶಿ ಎಂ.ದಯಾನಂದಸ್ವಾಮಿ ಮತ್ತಿತರರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.ಹುಳಿಯಾರು: ತಾಲ್ಲೂಕು ರೈತ ಸಂಘ ಸೇರಿದಂತೆ ಪಟ್ಟಣದ ನಾನಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪರಮಶಿವಯ್ಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ರಾಜ್ಯ ರೈತ ಸಂಘದ ಸಂಚಾಲಕ ಕೆಂಕೆರೆ ಸತೀಶ್, ಮಲ್ಲಪ್ಪ, ಮಲ್ಲೀಕಣ್ಣ, ಪಾತ್ರೆ ಸತೀಶ್, ಹೂವಿನ ರಘು, ವಾಸವಿ ವಿದ್ಯಾ ಸಂಸ್ಥೆಯ ಬಿ.ವಿ.ಶ್ರೀನಿವಾಸ್, ಪೋಟೋ­ಗ್ರಾಫರ್ ಸಂಘದ ಸುದರ್ಶನ್, ವರ್ತಕರ ಸಂಘದ ನಟರಾಜು, ಡಾ.ಪರಮೇಶ್ವರಪ್ಪ ಇತರರು ಸಂತಾಪ ಸೂಚಿಸಿದ್ದಾರೆ.ತೋವಿನಕೆರೆ: ಗ್ರಾಮದ ನೀರಾವರಿ ಹೋರಾಟ­ಗಾರರು, ಹಳ್ಳಿಸಿರಿ ಬಳಗದವರು, ಸಿದ್ದಗಿರಿ ನಂಜುಂಡ­ಸ್ವಾಮಿ, ಯಲದಡ್ಲು ವೀರಣ್ಣ, ಬ್ರಹ್ಮಸಂದ್ರ ಪುಟ್ಟ­ರಾಜು, ನೀರಾವರಿ ತಜ್ಞ ಜಿ.ಎಸ್ ಪರಮಶಿವಯ್ಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.