ಮಂಗಳವಾರ, ಜೂನ್ 15, 2021
27 °C

ನೀರಿಗಾಗಿ ಗ್ರಾ.ಪಂ.ಗೆ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮೀನಗಡ: ಕುಡಿಯುವ ನೀರಿನ ತೊಂದರೆಯನ್ನು ನಿವಾರಿಸಬೇಕು ಎಂದು ಆಗ್ರಹಿಸಿ ಗುರುವಾರ ಸ್ಥಳೀಯ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಮಹಿಳೆಯರು ಮಕ್ಕಳೊಂದಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ವಾರ್ಡ ನಂ.7ರಲ್ಲಿನ ಮಹಿಳೆಯರು ಕೊಡ, ಕೊಳಚೆ ನೀರು ತುಂಬಿದ ಬಕೆಟ್ ಸಮೇತ, ಹಲಗೆ ಬಾರಿಸುತ್ತಾ ಪ್ರತಿಭಟ ನೆಯ ಮೂಲಕ ಗ್ರಾ.ಪಂ. ಕಾರ್ಯಾಲ ಯಕ್ಕೆ ಮುತ್ತಿಗೆ ಹಾಕಿ, ಗ್ರಾ.ಪಂ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಕಳೆದ ಹಲವು ದಿನಗಳಿಂದ ನಮ್ಮ ವಾರ್ಡ್‌ನಲ್ಲಿ ಕುಡಿಯುವ ನೀರಿನ ತೊಂದರೆಯಿದೆ ಅದನ್ನು ಸರಿಪಡಿಸ ಬೇಕು ಎಂದು ಸಂಬಂಧಿಸಿದ ಜನಪ್ರತಿ ನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡಿದಾಗ, ರಸ್ತೆಯ ಮಧ್ಯದಲ್ಲಿದ್ದ ಪೈಪ್‌ಲೈಲ್ ಅಗೆಯಲಾಗಿದೆ. ಪೈಪ್ ಒಡೆದು, ನೀರಿನ ಸರಬರಾಜಿನಲ್ಲಿ ತೊಂದರೆಯಾಗಿದ್ದು, ಇದನ್ನು ಸರಿಪಡಿ ಸಲು ಕಳೆದ ಒಂದು ವಾರವಾದರೂ ಆಗುತ್ತಿಲ್ಲ. ಇದರಿಂದ ವಾಹನ, ಪಾದಚಾರಿಗಳಿಗೆ, ಹಿರಿಯರಿಗೆ, ಮಕ್ಕಳಿಗೆ ಸಾಕಷ್ಟು ತೊಂದರೆಯಾಗಿದೆ ಎಂದು ದೂರಿದರು.ಒಂದು ವಾರದಿಂದ ಪೈಪ್‌ಲೈಲ್ ಗುಂಡಿ ತೆಗೆದ ಪರಿಣಾಮ ಕುಡಿಯುವ ನೀರಿನ ಪೈಪ್‌ನಲ್ಲಿ ಚರಂಡಿ ನೀರು ಬರುತ್ತದೆ. ಕುಡಿಯುವ ನೀರಿಗಾಗಿ ಸಾಕಷ್ಟು ತೊಂದರೆಯಾಗಿದೆ. ದೂರದ ಬೋರವೆಲ್‌ದಿಂದ ನೀರನ್ನು ತರಬೇಕಾ ಗದ ದುಃಸ್ಥಿತಿ ನಿರ್ಮಾಣವಾಗಿದೆ ಎಂದು ಮಹಿಳೆಯರು ತಮಗಾದ ತೊಂದರೆ ಹೇಳಿದರು.ಈ ಸಂದರ್ಭದಲ್ಲಿ ಹಲಗೆ ವಾದನ ಬಹಳಷ್ಟು ಜೋರಾದಾಗ ಪ್ರತಿಭಟನಾ ನಿರತ ಮಹಿಳೆಯರನ್ನು ಕರೆದ ಪಂಚಾ ಯಿತಿ ಅಭಿವೃದ್ಧಿ ಅಧಿಕಾರಿ ದೇಶ ಪಾಂಡೆ, ಸಮಸ್ಯೆಯನ್ನು ನಿವಾರಿಸುವ ಉದ್ದೇಶದಿಂದ ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಕಾಮಗಾರಿಗೆ ಬೇಕಾಗ ಅಗತ್ಯ ಪೈಪ್‌ಗಳು ಸಿಗುತ್ತಿಲ್ಲ. ಇನ್ನೆರಡು ದಿನಗಳಲ್ಲಿ ಈ ಕೆಲಸವನ್ನು ಪೂರ್ಣ ಗೊಳಿಸಲಾಗುವುದು. ಸಹಕರಿಸಬೇಕು ಎಂದು ಮನವಿ ಮಾಡಿದರು. ಆಗ ಮಹಿಳೆಯರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.ಗಿರಿಜಾ ಮಂಟಾ, ಯಮುನಾಬಾಯಿ ಲಾತೂರಕರ್, ಅಶೋಕ ಮಾಗಿ, ಪ್ರಕಾಶ ಮಾಗಿ, ವಿಠ್ಠಲ ಬೊಂಬ್ಲೇಕರ, ನೀಲಮ್ಮ ಸಜ್ಜನ, ದಾವಲವ್ವ ಬಾಂಗಿ, ಸರಸ್ವತಿ ಮಹೇಂದ್ರಕರ, ಈರಮ್ಮ ಮಾಗಿ, ಸಂಗೀತಾ ಮರದ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.