ಮಂಗಳವಾರ, ನವೆಂಬರ್ 19, 2019
23 °C

`ನೀರಿಗಾಗಿ ಗ್ರಾಮಸ್ಥರ ಪ್ರತಿಭಟನೆ'

Published:
Updated:

ಚಿಕ್ಕಮಗಳೂರು: ತಾಲ್ಲೂಕಿನ ಸಗಣಿಪುರ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಒತ್ತಾಯಿಸಿ ಗ್ರಾಮಸ್ಥರು ಬುಧವಾರ ಖಾಲಿಕೊಡ ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಿದರು.ಗ್ರಾಮದಲ್ಲಿ ಮೆರವಣಿಗೆ ನಡೆಸಿದ ಮಹಿಳೆಯರು ರಸ್ತೆಯಲ್ಲಿ ಖಾಲಿ ಕೊಡ ಇಟ್ಟು ನೀರಿಗಾಗಿ ಆಗ್ರಹಿಸಿದರು.ಜೆಡಿಎಸ್ ಮುಖಂಡ ಎಸ್.ಎಲ್.ಬೋಜೇಗೌಡ ಮಾತನಾಡಿ, ಅಭಿವೃದ್ಧಿ ಹೆಸರಿನಲ್ಲಿ ಚುನಾವಣೆ ಪ್ರಚಾರದಲ್ಲಿ ತೊಡಗಿರುವ ಸಚಿವ ಸಿ.ಟಿ.ರವಿ ಅವರಿಗೆ ಹಳ್ಳಿಗಳಲ್ಲಿ ಗ್ರಾಮಸ್ಥರಿಗೆ ಕುಡಿಯುವ ನೀರು ಮತ್ತು ವಿದ್ಯುತ್ ಸಮಸ್ಯೆ ಪೂರೈಸಲು ಸಾಧ್ಯವಾಗಿಲ್ಲ. ವಸ್ತುಸ್ಥಿತಿ ಅರಿತು ಕೂಡಲೆ ನೀರು ಪೂರೈಸದಿದ್ದರೆ ಮತದಾರರು ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.800 ಕೋಟಿ ರೂಪಾಯಿ ಅಭಿವೃದ್ಧಿಯಾಗಿದೆ ಎನ್ನುವ ಸಚಿವರಿಗೆ ಕ್ಷೇತ್ರದಲ್ಲಿರುವ ಕುಡಿಯುವ ನೀರಿನ ಬವಣೆ ನೀಗಿಸಬೇಕಾದ ಆಲೋಚನೆ ಬಾರದಿರುವುದು ಜನರ ಬಗ್ಗೆ ಇರುವ ಕಳಕಳಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಟೀಕಿಸಿದರು.ಎಚ್.ಡಿ.ಕುಮಾರಸ್ವಾಮಿ ಅಭಿಮಾನಿಗಳ ಸಂಘದ ಜಿಲ್ಲಾ ಅಧ್ಯಕ್ಷ ಹೊಲದಗದ್ದೆ ಗಿರೀಶ್, ಪಕ್ಷದ ಮುಖಂಡರಾದ ಸೋಮೇಗೌಡ, ಗ್ರಾಮಸ್ಥರಾದ ಮಂಜುನಾಥ್, ಕೃಷ್ಣೇಗೌಡ, ಯತೀಶ್, ಲಕ್ಕಮ್ಮ, ರಂಗಮ್ಮ, ಗಂಗಮ್ಮ, ರವಿ, ಪಾಂಡು ಇನ್ನಿತರರು ಇದ್ದರು.

ಪ್ರತಿಕ್ರಿಯಿಸಿ (+)