ನೀರಿಗಾಗಿ ರೈತರ ಮುತ್ತಿಗೆ

7

ನೀರಿಗಾಗಿ ರೈತರ ಮುತ್ತಿಗೆ

Published:
Updated:

ನರಗುಂದ:  ಕಳೆದ  ಒಂದು ವಾರದಿಂದ ನವಿಲು ತೀರ್ಥ ಜಲಾಶಯದಿಂದ ಮಲಪ್ರಭೆ ಕಾಲುವೆಗಳಿಗೆ ನೀರು  ಹರಿಯುತ್ತಿದ್ದರೂ 12ನೇ ಬ್ಲಾಕ್‌ವ್ಯಾಪ್ತಿಯ ಕಾಲುವೆಗಳಿಗೆ ನೀರು ಹರಿ ಯುತ್ತಿಲ್ಲ.  ಈ ಭಾಗದ ರೈತರ ಜಮೀನುಗಳ ಬೆಳೆಗಳಿಗೆ ನೀರುಹರಿ ಯುವುದು  ಯಾವಾಗ ಎಂದು ಪಟ್ಟಣದ ಕಸಬಾ ಓಣಿಯ ರೈತರು ಸೋಮವಾರ ನೀರಾವರಿ  ಕಚೇರಿಗೆ ಮುತ್ತಿಗೆ  ಹಾಕಿ ಪ್ರತಿಭಟನೆ ವ್ಯಕ್ತ ಪಡಿಸಿದರು.ಆದರೆ, ರೈತರ ಅಹವಾಲು ಕೇಳಲು ಯಾರೊಬ್ಬ ಅಧಿಕಾರಿಯೂ ಕಚೇರಿ ಯಲ್ಲಿರಲಿಲ್ಲ. ಇದರಿಂದ ಮತ್ತಷ್ಟು ಆಕ್ರೋಶಗೊಂಡ ರೈತರು ಕಚೇರಿ ಯಲ್ಲಿದ್ದ ಖುರ್ಚಿ  ಹಾಗೂ ಟೇಬಲ್‌ಗಳನ್ನು ಹೊರಗೆ ತೂರಾಡಿ ಧ್ವಂಸಗೊಳಿಸಿ ತಮ್ಮ ಕೋಪವನ್ನು  ಹೊರಹಾಕಿದರು. ಧ್ಯಾಹ್ನ  1ಗಂಟೆಯಾದರೂ ಯಾರೊಬ್ಬ  ನೀರಾವರಿ ಅಧಿಕಾರಿಗಳು ಬರಲೇ ಇಲ್ಲ. ಇದರಿಂದ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗುವ ಲಕ್ಷಣಗಳು ಗೋಚರಿಸಿದ್ದರಿಂದ ಈ  ಸುದ್ದಿ ತಿಳಿದ  ಸಿಪಿಐ ಪ್ರಶಾಂತ ಸಿದ್ದನ ಗೌಡ್ರ  ಆಗಮಿಸಿ  ಪ್ರತಿಭಟನೆ ನಿಲ್ಲಿಸು ವಂತೆ ಮನವಿ ಮಾಡಿದರು. ಇದಕ್ಕೆ ಓಗೊಡದ  ರೈತರು ಅವರೊಂದಿಗೆ ವಾಗ್ವಾದಕ್ಕಿಳಿದರು. ಅಧಿಕಾರಿಗಳು  ಬರುವವರೆಗೂ  ಇಲ್ಲಿಂದ ಕದಲುವುದಿಲ್ಲ ಎಂದು  ಪಟ್ಟು ಹಿಡಿದರು.  ನಂತರ ಮಲಪ್ರಭಾ ನೀರು ಬಳಕೆದಾರರ ಸಹಕಾರಿ  ಸಂಘದ ಅಧ್ಯಕ್ಷ  ಎಂ.ಎಂ.ಮುಳ್ಳೂರು ಹಾಗೂ ಎಪಿಎಂಸಿ ಅಧ್ಯಕ್ಷ ಚಂದ್ರಗೌಡ ಪಾಟೀಲ  ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಬಗಹರಿಸುವುದಾಗಿ ಭರವಸೆ ನೀಡಿದರು.ಕಸಬಾ ಓಣಿಯ ರೈತರಾದ ಮಹದೇವಪ್ಪ  ಕುರಹಟ್ಟಿ, ಫಕಿರಗೌಡ ಅಣ್ಣಿಗೇರಿ,  ಯಲ್ಲಪ್ಪ ಗುಗ್ಗರಿ, ವಿರುಪಾಕ್ಷಪ್ಪ ಕುರಹಟ್ಟಿ, ಬಸಪ್ಪ ಸವದಿ, ಕೃಷ್ಣಪ್ಪ ಜಾವೂರು, ದೇವಪ್ಪ ಹಟ್ಟಿ, ಅಣ್ಣಪ್ಪ ಪರ್ವತಗೌಡರ, ಮುತ್ತಪ್ಪ ನಾಗನೂರು, ಭೀಮನಗೌಡ ಕೊಪ್ಪನಕೊಪ್ಪ, ಕಲ್ಲಪ್ಪ ಗುಗ್ಗರಿ, ಗುರಪ್ಪ ಸೊಪ್ಪಿನ, ಮಗುತಮಸಾಬ ಮನಿಗೇರಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry