ನೀರಿಗಿಳಿಯುವ ಮುನ್ನ ಯೋಚಿಸಿ

7

ನೀರಿಗಿಳಿಯುವ ಮುನ್ನ ಯೋಚಿಸಿ

Published:
Updated:
ನೀರಿಗಿಳಿಯುವ ಮುನ್ನ ಯೋಚಿಸಿ

ಬೆಳಗಾವಿ: ಜೀವ ಬಹು ಅಮೂಲ್ಯ. ಹರಿಯುವ ನದಿ ನೀರಿನ ಮಧ್ಯಯೇ ಸೇತುವೆ ದಾಟುವ ಒಂದು ಕ್ಷಣದ ದುಡುಕಿನ ನಿರ್ಧಾರ ಜೀವಕ್ಕೆ ಎರವಾಗಬಹುದು. ಆದ್ದರಿಂದ ನೀರಿಗೆ ಇಳಿಯುವ ಮುನ್ನ ಒಂದು ಕ್ಷಣ ಯೋಚಿಸುವುದು ಒಳ್ಳೆಯದು.ಜಿಲ್ಲೆಯ ವಿವಿಧ ನದಿಗಳ ನೀರಿನ ಮಟ್ಟದಲ್ಲಿ ಹೆಚ್ಚಳವಾಗಿದೆ. ಹಲವಾರು ಸೇತುವೆಗಳು ನದಿ ನೀರಿನಲ್ಲಿ ಮುಳುಗಿವೆ. ಅದನ್ನು ದಾಟುವ ಹುಚ್ಚು ಸಾಹಸಕ್ಕೆ ಇಳಿದು ಈಗಾಗಲೇ ಜಿಲ್ಲೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.ಹುಕ್ಕೇರಿ ತಾಲ್ಲೂಕಿನ ಗೋಟೂರು ಸೇತುವೆಯನ್ನು ದ್ವಿಚಕ್ರ ವಾಹನ ದಾಟಲು ಹೋಗಿ ಇಬ್ಬರು ಸಾವನ್ನಪ್ಪಿದ್ದರೆ, ಕಾರದಗಾ ಸೇತುವೆ ದಾಟಲು ಹೋಗಿ ಅಂಚೆ ಇಲಾಖೆ ನೌಕರರೊಬ್ಬರು ನೀರಿನ ಸೆಳೆತಕ್ಕೆ ಸಿಕ್ಕು ಸಾವನ್ನಪ್ಪಿದ್ದಾರೆ.ಬುಧವಾರ ಬಾಗಲಕೋಟೆ ಜಿಲ್ಲೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಮಹಿಳೆಯೊಬ್ಬಳು ಕಾಲು ಜಾರಿ ಬಿದ್ದು ನೀರಿನ ಸೆಳೆ ತಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. ಪ್ರವಾಹ ಸಂದರ್ಭದಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಲೇ ಇವೆ.ಸೇತುವೆಯ ಮೇಲೆ ನೀರು ಹರಿಯುತ್ತಿದ್ದರೂ ಸಹ ಜನರು ಇಂತಹ ಹುಚ್ಚು ಸಾಹಸಕ್ಕೆ ಇಳಿಯುತ್ತಾರೆ. ಬೇಡ ಎನ್ನುವ ವರಿಗೆ ಇದೇನು ನಾವು ನೋಡದ ನದಿಯೇ ಎಂದು ಇಳಿದೇ ಬಿಡುತ್ತಾರೆ. ದಾಟಿದವರು ಪಾರಾಗುತ್ತಾರೆ. ದಾಟಲಾಗ ದವರು ನೀರ ಪಾಲಾಗುತ್ತಾರೆ.ಗ್ರಾಮಕ್ಕೆ ಹತ್ತಿರದ ಸೇತುವೆ ಮುಳುಗಡೆಯಾಗಿದ್ದರೂ ಪರ್ಯಾಯ ಮಾರ್ಗದ ಮೂಲಕ ಸಂಚಾರ ಸಂಪರ್ಕ ಮುಂದು ವರಿದಿದೆ. ಹತ್ತಾರು ಕಿ.ಮೀ. ಸುತ್ತು ಹಾಕಬೇಕು ಅಷ್ಟೇ. ಆದರೆ ಅದನ್ನು ತಪ್ಪಿಸಲು ಹೋಗಿ ಜೀವ ಕಳೆದುಕೊಳ್ಳುತ್ತಾರೆ.

ಸಂಪರ್ಕ ಕಡಿತವಾದ ಬಗೆಗೆ ಜಿಲ್ಲಾಡಳಿತ ಪ್ರಕಟ ಣೆಯ ಮೂಲಕ ತಿಳಿಸುತ್ತದೆ. ಅದರೆ ಆ ಮಾರ್ಗದ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸುವುದಿಲ್ಲ. ಜನರು ಸೇತುವೆಯನ್ನು ದಾಟದಂತೆ ತಡೆಯಲು ಸಿಬ್ಬಂದಿಯನ್ನೂ ನಿಯೋಜಿಸುವುದಿಲ್ಲ.ನದಿ ದಂಡೆಯ ಬಹುತೇಕ ಗ್ರಾಮಗಳಲ್ಲಿ ಬಟ್ಟೆಗ ಳನ್ನು ತೊಳೆ ಯುವುದು ನದಿಯಲ್ಲಿಯೇ. ಎಂದಿನಂತೆ ಈಗಲೂ ಸಹ ಸಾಕಷ್ಟು ಕಡೆಗಳಲ್ಲಿ ಉಕ್ಕಿ ಹರಿಯು ತ್ತಿರುವ ನದಿಯಲ್ಲಿಯೇ ಬಟ್ಟೆ ಒಗೆಯುವ ಕಾರ್ಯ ಮುಂದುವರಿಸಿದ್ದಾರೆ. ಮಳೆ ಆರ್ಭಟ ಹೆಚ್ಚು ಕಡಿಮೆ ಯಾಗುತ್ತಿರುವುದ ರಿಂದ ಒಂದು ದಿನ ಇಳಿದ ನೀರು, ಮರು ದಿನ ಹೆಚ್ಚಾಗುತ್ತದೆ. ಹೀಗಾಗಿ ನದಿಯ ವರ್ತನೆ ಅರ್ಥ ಮಾಡಿಕೊಳ್ಳುವುದು ಕಷ್ಟ. ಸ್ವಲ್ಪ ದಿನ ನದಿಯಿಂದ ದೂರವಿರುವುದೇ ಲೇಸು.ಇನ್ನು ಕೆಲವು ಕಡೆ ಆ ನದಿ ದಡದಲ್ಲಿರುವ ಹೊಲ ಗಳಿಗೆ ತೆರಳಿ ಮೇವು ತರುವ ಸಾಹಸಕ್ಕೆ ರೈತರು ಮುಂದಾಗುತ್ತಿದ್ದಾರೆ. ಇನ್ನೂ ಕೆಲವರು ಜಾನುವಾರು ಗಳನ್ನು ದಾಟಿಸುವ ಸಾಹಸಕ್ಕೆ ಮುಂದಾಗುತ್ತಿದ್ದಾರೆ.

ಒಂದು ಕ್ಷಣದ ದುಡುಕಿನ ನಿರ್ಧಾರದಿಂದಾಗಿ ನಿಮ್ಮನ್ನು ಅವಲಂಬಿಸಿಕೊಂಡಿರುವ ಕುಟುಂಬ ಬಹು ದೊಡ್ಡ ಬೆಲೆ ತೆರಬೇಕಾಗುತ್ತದೆ. ಆದ್ದರಿಂದ ನೀರಿಗೆ ಇಳಿಯುವ ಮುನ್ನ ಕುಟುಂಬದ ಬಗ್ಗೆ ಯೋಚಿ ಸುವುದು ಒಳ್ಳೆಯದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry