ನೀರಿಗೆ ಅರವಟಿಗೆ ಸ್ಥಾಪನೆ

7

ನೀರಿಗೆ ಅರವಟಿಗೆ ಸ್ಥಾಪನೆ

Published:
Updated:
ನೀರಿಗೆ ಅರವಟಿಗೆ ಸ್ಥಾಪನೆ

ಗುರುಮಠಕಲ್: ಇಲ್ಲಿನ ಬಸ್ ನಿಲ್ದಾಣ ದಲ್ಲಿ ಬೇಸಿಗೆ ಪ್ರಯುಕ್ತ ಸಾರ್ವಜನಿಕರಿ ಗಾಗಿ ಕುಡಿಯುವ ನೀರಿನ ಅರವಟಿಗೆ ಯನ್ನು ಯುಗಾದಿ ಹಬ್ಬದಂದು ಸೋಮವಾರ ಪಟ್ಟಣದ ಆರ್ಯ ವೈಶ್ಯ ಯುವಜನ ಸಂಘದಿಂದ ಪ್ರಾರಂಭಿ ಸಲಾಯಿತು.ಪಟ್ಟಣದ ಬಸ್ ನಿಲ್ದಾಣದಲ್ಲಿ ಇರುವ ಕುಡಿಯುವ ನೀರಿನ ಟ್ಯಾಂಕ್ ಇದ್ದು ಇಲ್ಲದಂತಾಗಿದೆ.ಸ್ವಚ್ಚತೆ ಇಲ್ಲದ ಕಾರಣ ಪ್ರಯಾಣಿ ಕರು ಅದನ್ನು ಕೇವಲ ಕೈ ತೊಳೆಯಲು ಮಾತ್ರ ಉಪಯೋಗಿಸುತ್ತಾರೆ. ಬಿಸಿಲಿನ ಬೇಗೆಗೆ ಪ್ರಯಾಣಿಕರು ಕುಡಿ ಯುವ ನೀರಿಗಾಗಿ ಪರದಾಡುವಂತಾಗಿದೆ. ಇದನ್ನು ಗಮನಿಸಿದ ಆರ್ಯ ವೈಶ್ಯ ಯುವಜನ ಸಂಘ ಹೊಸ ವರ್ಷ ಯುಗಾದಿ ಹಬ್ಬದಂದು ಸಾರ್ವಜನಿಕರಿ ಗಾಗಿ ನೀರಿನ ಅರವಟಿಗೆ ರೂಪಿಸುವು ದರ ಮೂಲಕ ಸಾರ್ವಜನಿಕರಿಗೆ ಅನು ಕೂಲ ಮಾಡಿಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಸಂಘದ ಯುವ ಪದಾ ಧಿಕಾರಿಗಳು ಹಾಗೂ ಸಮಾಜ ಬಾಂಧ ವರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry