ನೀರಿಗೆ ಆಗ್ರಹಿಸಿ ಬಿಎಸ್ಸಾರ್ ಪಾದಯಾತ್ರೆ

7

ನೀರಿಗೆ ಆಗ್ರಹಿಸಿ ಬಿಎಸ್ಸಾರ್ ಪಾದಯಾತ್ರೆ

Published:
Updated:
ನೀರಿಗೆ ಆಗ್ರಹಿಸಿ ಬಿಎಸ್ಸಾರ್ ಪಾದಯಾತ್ರೆ

ಶಹಾಪುರ: ನಾರಾಯಣಪೂರ ಎಡದಂಡೆ ಕಾಲುವೆಗೆ ಏಪ್ರಿಲ್ ಅಂತ್ಯದವರೆಗೆ ನೀರು ಹರಿಸುವಂತೆ ಆಗ್ರಹಿಸಿ ಸೋಮವಾರ ಬಿಎಸ್ಸಾರ ಕಾಂಗ್ರೆಸ್ ಘಟಕದ ಕಾರ್ಯಕರ್ತರು ಪಟ್ಟಣದ ಬಸವೇಶ್ವರ ವೃತ್ತದಿಂದ ಭೀಮರಾಯನಗುಡಿ ಆಡಳಿತ ಕಚೇರಿಯವರೆಗೆ ಪಾದಯಾತ್ರೆಯ ಮೂಲಕ ಆಗಮಿಸಿ ಮುಖ್ಯ ಎಂಜಿನಿಯರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.ಜನಪ್ರತಿನಿಧಿ ಹಾಗೂ ನಿಗಮದ ಎಂಜಿನಿಯರ್ ಗೊಂದಲದ ಹೇಳಿಕೆ ನೀಡಿ  ರೈತರನ್ನು ದಾರಿತಪ್ಪಿಸಿದ್ದಾರೆ. ಜಲಾಶಯದಲ್ಲಿ ನೀರಿನ ಲಭ್ಯತೆಯಿದ್ದರು ಕೂಡಾ ನಾರಾಯಣಪೂರ ಎಡದಂಡೆ ಕಾಲುವೆಗೆ ಫೆ.20ವರೆಗೆ ನೀರು ಹರಿಸಲು ನಿರ್ಧರಿಸಿದ್ದು ಸರಿಯಲ್ಲ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಬರಬೇಕು. ಬೆಳೆದು ನಿಂತ ಪೈರಿಗೆ ಸೂಕ್ತ ಪರಿಹಾರ ಧನವನ್ನು ಒದಗಿಸಬೇಕೆಂದು ಬಿಎಸ್ಸಾರ ಕಾಂಗ್ರೆಸ್ ಮುಖಂಡ ವಿರುಪಾಕ್ಷಪ್ಪಗೌಡ ಸಿಂಧನೂರ ಆಗ್ರಹಿಸಿದರು.ರೈತರ ಜೀವನಾಡಿ ಕೃಷ್ಣೆಯ ನೀರಿನ ಕೊರತೆಯಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಸರ್ಕಾರ ಜಾಣ ಕಿವಡತನವನ್ನು ಪ್ರದರ್ಶಿಸುತ್ತಿದೆ. ಕೃಷ್ಣಾನದಿ ಪಾತ್ರದಲ್ಲಿ ದಿನಾಲು ರೈತರು ಬೀದಿಗಿಳಿದು ಕಾಲುವೆಗೆ ನೀರು ಹರಿಸುವಂತೆ  ಹೋರಾಟದ ಹಾದಿ ತುಳಿಯುತ್ತಿದ್ದಾರೆ. ಜಿಲ್ಲೆ ಶಾಸಕರು ತಮ್ಮ ಜವಬ್ದಾರಿ ಮರೆತಿದ್ದಾರೆ. ನಿಜವಾಗಿ ರೈತರ ಕಾಳಜಿ ಇದ್ದರೆ ಮೊದಲು ಸದನದಲ್ಲಿ ಪ್ರಸ್ತಾಪ ಮಾಡಲಿ. ರೈತರಿಗೆ ಸಮರ್ಪಕವಾಗಿ ನೀರು ಬರುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರು ಹೈರಾಣಗೊಳ್ಳುತ್ತಿದ್ದಾರೆಂದು ಬಿಎಸ್ಸಾರ ಕಾಂಗ್ರೆಸ್ ಜಿಲ್ಲಾ ಸಂಚಾಲಕ ಆರ್.ಚನ್ನಬಸು ವನದುರ್ಗ ಹಾಗೂ ಶಂಕ್ರಣ್ಣ ವಣಿಕ್ಯಾಳ ಗುಡುಗಿದರು.ಕಾವೇರಿ ನೀರಿನ ಚರ್ಚೆನ್ನು ಕೃಷ್ಣೆಯ ತಟದಲ್ಲಿ ಕುಳಿತು ಜನಪ್ರತಿನಿಧಿಗಳು ನಡೆಸುತ್ತಿದ್ದಾರೆ. ಸಭೆ ಸಮಾರಂಭದಲ್ಲಿ ನೀರು ಹರಿಸುವ ಪ್ರಸ್ತಾಪ ಮಾಡುತ್ತಾರೆ ಸದನದ ಒಳಗೆ ನಿಂತು ಏಕೆ ಪ್ರಶ್ನಿಸುತ್ತಿಲ್ಲವೆಂದು ಪ್ರತಿಭಟನೆಯಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದರು.ರಾಜಾ ಕೃಷ್ಣಪ್ಪ ನಾಯಕ, ಅಶೋಕ ಲಿಂಬಾವಳಿ, ನಂದಕುಮಾರ ಮಾಲಿಪಾಟೀಲ್,ಹನುಮೇಗೌಡ ಬಿರಣಕಲ್, ಚಂದ್ರಶೇಖರ ಯಾಳಗಿ, ಲಿಂಗಣ್ಣ ಸಾಹು, ಸಾಯಿನಾಥ ಕಂಟೆಮನಿ, ಬಸವರಾಜ ಕೊಂಕಲ್ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry