ನೀರಿನಲ್ಲಿ ಕೊಚ್ಚಿ ಹೋಗಿ ಯುವಕ ಸಾವು

7

ನೀರಿನಲ್ಲಿ ಕೊಚ್ಚಿ ಹೋಗಿ ಯುವಕ ಸಾವು

Published:
Updated:

ಕನಕಪುರ: ತಾಲ್ಲೂಕಿನ ಸಂಗಮ್‌ನ ಬೊಮ್ಮಸಂದ್ರ ಪ್ರದೇಶದ ಕಾವೇರಿ ನದಿ ನೀರಿನಲ್ಲಿ ಯುವಕನೊಬ್ಬ ಕೊಚ್ಚಿಹೋಗಿ ಮೃತಪಟ್ಟಟ್ಟಿದ್ದಾನೆ.ೃತ ಯುವಕನನ್ನು ಬೆಂಗಳೂರಿನ ಕೋಣನಕುಂಟೆ ಕ್ರಾಸ್ ನಿವಾಸಿ ಜರ್ಮಿ ಡಿಸೋಜಾ ಎಂಬುವರ ಪುತ್ರ ರೊನಾಲ್ಡ್ ಡಿಸೋಜಾ (28) ಎಂದು ಗುರುತಿಸಲಾಗಿದೆ. ಈತ ಮೂಲತಃ ಚಿಕ್ಕಮಗಳೂರಿನವನಾಗಿದ್ದು ಬೆಂಗಳೂರಿನಲ್ಲಿ ಪೇಯಿಂಟಿಂಗ್ ಕಂಟ್ರ್ಯಾಕ್ಟರ್ ಆಗಿದ್ದ ಎಂದು ತಿಳಿದು ಬಂದಿದೆ.ಶುಕ್ರವಾರ ಬೆಳಿಗ್ಗೆ ಬೆಂಗಳೂರಿನ 6 ಮತ್ತ ತಾಲ್ಲೂಕಿನ ಐನೋರ ಗೊಲ್ಲಳ್ಳಿಯ ಇಬ್ಬರು ಸ್ನೇಹಿತರ ಜೊತೆಗೂಡಿ ಸಂಗಮ್‌ನ ಕಾವೇರಿ ನದಿ ತೀರಕ್ಕೆ ಪಿಕ್‌ನಿಕ್‌ಗೆ ಬಂದಿದ್ದ. ಬೊಮ್ಮಸಂದ್ರ ಪ್ರದೇಶದ ನದಿ ನೀರಿನಲ್ಲಿ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಆತ ಕಾಲು ಜಾರಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry