ನೀರಿನಲ್ಲಿ ಸಿಲುಕಿದ ಬಸ್‌: ಪ್ರಯಾಣಿಕರು ಪಾರು

7

ನೀರಿನಲ್ಲಿ ಸಿಲುಕಿದ ಬಸ್‌: ಪ್ರಯಾಣಿಕರು ಪಾರು

Published:
Updated:
ನೀರಿನಲ್ಲಿ ಸಿಲುಕಿದ ಬಸ್‌: ಪ್ರಯಾಣಿಕರು ಪಾರು

ಚಿತ್ತಾಪುರ: ತಾಲ್ಲೂಕಿನ ಮರಗೋಳ ನಾಲಾದಲ್ಲಿ ಬಳಿ ಮಂಗಳವಾರ ಸಂಜೆ ಸುಮಾರು 35 ಪ್ರಯಾಣಿಕರಿದ್ದ ಬಸ್‌ ಸಿಲುಕಿ ಹಾಕಿಕೊಂಡ ಪರಿಣಾಮ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.ತಾಲ್ಲೂಕಿನಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿರುವ ಪರಿಣಾಮ ನಾಲಾ ನೀರು ರಸ್ತೆಗೆ ನುಗ್ಗಿ ಬಂದಿತ್ತು. ಸಂಜೆ ಗುಲ್ಬರ್ಗದಿಂದ ಚಿತ್ತಾಪುರಕ್ಕೆ ಹೋಗುತ್ತಿದ್ದ ಬಸ್‌ ಈ ನೀರಿನಲ್ಲಿ ಸಿಲುಕಿ ಹಾಕಿಕೊಂಡಿದೆ. ಈ ವೇಳೆ ನೀರಿನ ಮಟ್ಟವೂ ಏರಿಕೆಯಾಗಿದೆ. ಆದರೆ ತಕ್ಷಣ ಸ್ಪಂದಿಸಿದ ಸ್ಥಳೀಯರು, ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಪಾರು ಮಾಡಿದ್ದಾರೆ. ಅಲ್ಲದೇ ತಾಲ್ಲೂಕಿನಿಂದ ಸೇಡಂ, ಮಳಖೇಡ, ಗುಲ್ಬರ್ಗಕ್ಕೆ ಹೋಗುವ ಮಾರ್ಗದ ಸಂಪಕರ್ವೂ ಕಡಿತಗೊಂಡಿದೆ. ದಿಗ್ಗಾಂವ ಬಳಿಯ ನಾಲಾ ತುಂಬಿ ಹರಿದಿದೆ. ನಾಗಾವಿ ಬಳಿಯ ಹಳ್ಳ ತುಂಬಿದ್ದು, ಐದಾರು ಮನೆಗಳಿಗೆ ನೀರು ನುಗ್ಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry