ಭಾನುವಾರ, ಜೂನ್ 13, 2021
25 °C

ನೀರಿನ ಜತೆ ಆಹಾರಕ್ಕೆ ಪ್ರಾಣಿಗಳ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನ ವನಕ್ಕೆ ಸೇರಿದ ಬೋಳೇ ಗೌಡನ ಕಟ್ಟೆ ಅರಣ್ಯ ಪ್ರದೇಶವು ಕಾಡು ಮೃಗಗಳ ಸ್ವಚ್ಛಂದ ವಿಹಾರದ ಪ್ರಮುಖ ತಾಣವಾಗಿದೆ.ಈ ಪ್ರದೇಶದಲ್ಲಿ ಕಾಡಾನೆ, ಜಿಂಕೆ, ಕಾಡೆಮ್ಮೆ, ನವಿಲು, ವಿಷ ಪೂರಿತ ಹಾವುಗಳು, ಸಾಂಬಾಟ್, ಹುಲಿ ಹಾಗೂ ಚಿರತೆಗಳು    ಕಾಣ ಸಿಗುತ್ತವೆ. ಈ ವಲಯದ ಸಮೀಪ ವಿರುವ ಕಾಡಂಚಿನ ಗ್ರಾಮಗಳಿಗೆ ಕಾಡುಮೃಗಗಳ ಉಪಟಳ ಹೆಚ್ಚಿರುವುದರಿಂದ ಕಾಡಾನೆಗಳ ನಿಯಂತ್ರಣ ಪ್ರಮುಖವಾಗಿದೆ.ಈ ಅರಣ್ಯ ಪ್ರದೇಶದ       ಒಳಭಾಗದಲ್ಲಿ ಅಲ್ಲಲ್ಲಿ ಕೆರೆಗಳಿದ್ದು ಬೇಸಿಗೆಯಲ್ಲಿ ಬತ್ತಿ ಹೋಗುವುದ ರಿಂದ ಕಾಡು ಮೃಗಗಳಿಗೆ ಕುಡಿ ಯುವ ನೀರಿನ ಸಮಸ್ಯೆ ತಲೆ ದೋರುತ್ತದೆ. ಇದಕ್ಕಾಗಿ  ಇಲಾಖೆ ಅರಣ್ಯ ಪ್ರದೇಶದ ಆಯಕಟ್ಟಿನ ಜಾಗಗಳಲ್ಲಿ ನೀರಿನ ಹೊಂಡ ಗಳನ್ನು ತೆಗೆಸಿದರೆ    ಅನು ಕೂಲವಾಗುತ್ತದೆ ಎನ್ನುವುದು ಪರಿಸರ ಪ್ರೇಮಿಗಳ ಆಶಯ.

 

ವನ್ಯಜೀವಿ ಮತ್ತು ಮಾನವನ ನಡುವಿನ ಸಂಘರ್ಷ ತಡೆಯಲು ಇಲಾಖೆ ಪ್ರಮುಖ ಹೆಜ್ಜೆ ಇಟ್ಟಿದ್ದು ಇದರ ಪರಿಣಾಮವಾಗಿ ಕಾಡಂಚಿನ ಗ್ರಾಮಗಳಲ್ಲಿ ಪರಿಸರ ಸಂರಕ್ಷಣಾ ಸಮಿತಿಗಳನ್ನು ರಚಿಸಿವೆ. ಈ ಭಾಗದ ರೈತರಿಗೂ ವನ್ಯಜೀವಿಗಳಿಗೂ ಅನೇಕ ಬಾರಿ ಸಂಘರ್ಷ ಏರ್ಪಟ್ಟ ಪರಿಣಾಮ ಅನೇಕ ಕಾಡಾನೆಗಳು ಮೃತಪಟ್ಟಿವೆ. ಇದನ್ನು ತಡೆಗಟ್ಟಲು ಸಿಬ್ಬಂದಿಗಳಿಗೆ ವಿವಿಧ ರೀತಿಯ ತರಬೇತಿ ನೀಡಲಾಗಿದೆ.ಕಾಡಾನೆಗಳು ಬೋಳೇಗೌಡನಕಟ್ಟೆ ಅರಣ್ಯ ಪ್ರದೇಶದಲ್ಲಿ ಹೆಚ್ಚಾಗಿರುವು ದರಿಂದ ತಮಿಳುನಾಡಿನ ಮುದುಮಲೈನಲ್ಲಿರುವಂತೆ ಇಲ್ಲಿಯೂ ಒಂದು ಆನೆ ಕ್ಯಾಂಪ್‌ನ್ನು ಪ್ರತ್ಯೇಕವಾಗಿ ಮಾಡಿದರೆ ಬಹಳ ಅನುಕೂಲವಾಗುತ್ತದೆ ಎನ್ನುವುದು ಸುತ್ತಮುತ್ತಲಿನ ಗ್ರಾಮಸ್ಥರ ಅನಿಸಿಕೆ.ಬೋಳೇಗೌಡನಕಟ್ಟೆ ಪ್ರದೇಶದಲ್ಲಿ ವನ್ಯಮೃಗಗಳು ಹೆಚ್ಚಾಗಿ ವಾಸ್ತವ್ಯ ಹೂಡುವು ದರಿಂದ ಮಾನವರ ಓಡಾಟಕ್ಕೆ ಅವಕಾಶ ಕಲ್ಪಿಸ ಬಾರದು. ಈಗಾಗಲೇ ಅರಣ್ಯ ಇಲಾಖೆ ಈ ಬಗ್ಗೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಈ ಅರಣ್ಯ ಪ್ರದೇಶದ ಒಳಕ್ಕೆ ಬರಬಾರದು ಮತ್ತು ಸೌದೆ ಹಾಗೂ ಇನ್ನಿತರ ಅರಣ್ಯ ಉತ್ಪನ್ನಗಳನ್ನು ಪಡೆಯಲು ಬರ ಬಾರದೆಂದು ಎಚ್ಚರಿಕೆ ುನ್ನು ನೀಡಿದೆ. ಆದರೂ ಅನೇಕ ವೇಳೆ ಸೌದೆ ತರಲು ಕಾಡಿನೊಳಕ್ಕೆ ಹೋಗುವವರ ಸಂಖ್ಯೆಯು ಹೆಚ್ದಿದೆ.ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳ ಬೇಕು ಎನ್ನುವುದು ಪರಿಸರವಾದಿ ಹಾಗೂ ವನ್ಯಜೀವಿ ಛಾಯ ಗ್ರಾಹಕ ಮಧು ಅವರ ಅನಿಸಿಕೆ.`ಈಗಾಗಲೇ ಸೋಲಾರ್ ವಿದ್ಯುತ್ ಬೇಲಿ ಮತ್ತು ಆನೆ ಕಂದಕಗಳನ್ನು ತೆರವುಗೊಳಿಸಲಾಗಿದೆ. ಹಲವು ಕ್ರಮ ಕೈಗೊಳ್ಳಲಾಗಿದೆ~ ಎಂದು ವಲಯ ಅರಣ್ಯಾಧಿಕಾರಿ ಸಂತೋಷ್‌ಕುಮಾರ್ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.