ಶುಕ್ರವಾರ, ಜೂನ್ 18, 2021
20 °C

ನೀರಿನ ದರ ಏರಿಕೆಗೆ ಸರ್ಕಾರದ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಸರ್ಕಾರ ಸದ್ಯದಲ್ಲಿಯೇ ನಗರದಲ್ಲಿ ನೀರಿನ ದರ ಏರಿಸುವ ಚಿಂತನೆ ನಡೆಸಿದೆ. ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ಸರ್ಕಾರ ನಿರ್ಧಾರ ಕೈಗೊಳ್ಳುವ ಸಂಭವವಿದೆ.ಒಂದು ಕ್ಯುಬಿಕ್ ಮೀಟರ್ ಅಂದರೆ, ಒಂದು ಸಾವಿರ ಲೀಟರ್ ನೀರಿನ ದರವನ್ನು 1 ರೂ. ಹೆಚ್ಚಿಸಲು ಸರ್ಕಾರ ಉದ್ದೇಶಿಸಿದೆ. ಅಲ್ಲದೆ, ವಾಣಿಜ್ಯ ಬಳಕೆಯ ನೀರಿನ ದರವನ್ನು ಕೂಡ ಏರಿಸಲು ಸರ್ಕಾರ ಚಿಂತಿಸಿದೆ. ಬಿಡಬ್ಲ್ಯು ಎಸ್‌ಎಸ್‌ಬಿ ಸಲ್ಲಿಸಿದ್ದ ಪ್ರಸ್ತಾವದ ಮೇರೆಗೆ ರಾಜ್ಯ ಸರ್ಕಾರ ನೀರಿನ ದರ ಏರಿಸಲು ಉದ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ.ನಗರದಲ್ಲಿ ಕುಡಿಯುವ ನೀರಿನ ಸರಬರಾಜು ಹಾಗೂ ನಿರ್ವಹಣೆಗೆ ವರ್ಷದಿಂದ ವರ್ಷಕ್ಕೆ ಹೆಚ್ಚು ವೆಚ್ಚ ತಗಲುತ್ತಿದೆ. ಅಲ್ಲದೆ, ನೀರಿನ ಪಂಪಿಂಗ್, ವಿದ್ಯುತ್ ಬಳಕೆಗಾಗಿ `ಬೆಸ್ಕಾಂ~ಗೆ ಕೋಟ್ಯಂತರ ರೂಪಾಯಿ ಬಿಲ್ ಪಾವತಿಸುತ್ತಿದೆ. ಜತೆಗೆ, ಪಾಲಿಕೆ ವ್ಯಾಪ್ತಿಗೆ ಹೊಸ ಸೇರ್ಪಡೆಯಾದ ನಗರಸಭೆ ಹಾಗೂ ಪುರಸಭೆ ವ್ಯಾಪ್ತಿಯ ವಾರ್ಡ್‌ಗಳಿಗೂ ನೀರು ಪೂರೈಸುವ ಜವಾಬ್ದಾರಿ ಜಲಮಂಡಳಿ ಮೇಲಿದೆ. ಇನ್ನು ಕಾವೇರಿ 4ನೇ ಹಂತದ ಯೋಜನೆ ಪೂರ್ಣಗೊಳಿಸಲು ಕೂಡ ಜಲಮಂಡಳಿಗೆ ಸಂಪನ್ಮೂಲ ಕ್ರೋಡೀಕರಣದ ಅವಶ್ಯಕತೆಯಿದೆ. ಈ ಹಿನ್ನೆಲೆಯಲ್ಲಿ ಜಲಮಂಡಳಿಯು ನೀರಿನ ದರ ಏರಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.