ನೀರಿನ ವಿಷಯಕ್ಕೆ ಜಗಳ:ಮಹಿಳೆ ಆತ್ಮಹತ್ಯೆ

7

ನೀರಿನ ವಿಷಯಕ್ಕೆ ಜಗಳ:ಮಹಿಳೆ ಆತ್ಮಹತ್ಯೆ

Published:
Updated:

ಬೆಂಗಳೂರು: ನಲ್ಲಿಯಲ್ಲಿ ನೀರು ಹಿಡಿ­ದು­ಕೊಳ್ಳುವ ವಿಷಯವಾಗಿ ನೆರೆಹೊರೆ­ಯವರೊಂದಿಗೆ ಜಗಳ­ವಾಗಿ­ದ್ದ­ರಿಂದ ಬೇಸರಗೊಂಡ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಡು­ಗೊಂಡನಹಳ್ಳಿ ಸಮೀಪದ ಎ.ಕೆ.­ಕಾಲೊನಿ­­ಯಲ್ಲಿ ಸೋಮವಾರ ನಡೆದಿದೆ.ಎ.ಕೆ.ಕಾಲೊನಿ ನಿವಾಸಿ ಸುಬ್ರಮಣಿ ಎಂಬುವರ ಪತ್ನಿ ಸುನಿತಾ (38) ಆತ್ಮಹತ್ಯೆ ಮಾಡಿಕೊಂಡವರು.ಬೀದಿ ನಲ್ಲಿಯಲ್ಲಿ ನೀರು ಹಿಡಿದು­ಕೊಳ್ಳುವ ವಿಷಯವಾಗಿ ಸುನಿತಾ ಮತ್ತು ಅವರ ಅಕ್ಕಪಕ್ಕದ ಮನೆಯವರ ನಡುವೆ ರಾತ್ರಿ ವಾಗ್ವಾದ ನಡೆದು ಜಗಳವಾಗಿದೆ. ಈ ವೇಳೆ ನೆರೆಹೊರೆಯವರು ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ. ಇದರಿಂದ ಬೇಸರಗೊಂಡ ಅವರು ಮನೆಗೆ ಬಂದು ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನಾ ಸಂದರ್ಭದಲ್ಲಿ ಸುನಿತಾ ಅವರ ಪತಿ ಮತ್ತು ಮಕ್ಕಳು ಮನೆಯಲ್ಲಿ ಇರಲಿಲ್ಲ. ಘಟನೆ ಸಂಬಂಧ ಹಲ್ಲೆ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಅಕ್ಕಪಕ್ಕದ ಮನೆ­ಯವರ ವಿರುದ್ಧ ಪ್ರಕರಣ ದಾಖಲಿ­ಸಿ­ಕೊಳ್ಳಲಾಗಿದೆ ಎಂದು ಕಾಡುಗೊಂಡನ­ಹಳ್ಳಿ ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry