ಭಾನುವಾರ, ಏಪ್ರಿಲ್ 18, 2021
33 °C

ನೀರಿನ ಸದ್ಬಳಕೆ ಮೊಂಟೆಕ್ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): `ಕೈಗಾರಿಕೆ ಬಳಕೆ ನೀರಿಗೆ ಸೂಕ್ತ ದರ ನಿಗದಿಪಡಿಸಬೇಕು~ ಎಂದು ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಹೇಳಿದ್ದಾರೆ.

`ನೀರಿನ ಸದ್ಬಳಕೆ ದೃಷ್ಟಿಯಿಂದ ದರ ನಿಗದಿಪಡಿಸುವುದು ಅವಶ್ಯಕ~ ಎಂದು ಅವರು ಬುಧವಾರ ಇಲ್ಲಿ ನಡೆದ ಭಾರತೀಯ  ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ(ಫಿಕ್ಕಿ) ಸಭೆಯಲ್ಲಿ  ಅಭಿಪ್ರಾಯಪಟ್ಟರು.

ಮುಂದಿನ 10ರಿಂದ 20 ವರ್ಷಗಳಲ್ಲಿ ದೇಶ ಸುಸ್ಥಿರ ಪ್ರಗತಿ ದಾಖಲಿಸಬೇಕಾದರೆ ನೀರಿನ ಅಪವ್ಯಯ ತಪ್ಪಿಸಬೇಕು. ಈ ನಿಟ್ಟಿನಲ್ಲಿ 12ನೇ ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ (2012-17) ನೀರಿನ ಸದ್ಬಳಕೆಯಾಗಿಯೇ ಹಲವು ಯೋಜನೆ ರೂಪಿಸಲಾಗಿದೆ. ಕೇಂದ್ರವೂ ಈ ನಿಟ್ಟಿನಲ್ಲಿ ಸ್ವಲ್ಪ ಪ್ರಯತ್ನ ನಡೆಸಬೇಕು. ಕೈಗಾರಿಕೆಗಾಗಿ ದೊಡ್ಡ ಪ್ರಮಾಣದಲ್ಲಿ ನೀರು ಬಳಕೆಯಾಗುತ್ತಿದೆ. ನೀರಿನ ಶುಲ್ಕ ಹೆಚ್ಚಿಸಿದರೆ, ಕೈಗಾರಿಕೆಗಳು ತಮ್ಮಿಂದ ತಾವೇ ನೀರಿನ ಮರುಬಳಕೆಗೆ  ಮುಂದಾಗುತ್ತವೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.