ನೀರಿನ ಸಮಸ್ಯೆಗೆ ಪರಿಹಾರ

7

ನೀರಿನ ಸಮಸ್ಯೆಗೆ ಪರಿಹಾರ

Published:
Updated:

ಬಾಣಾವರ: ಅಂತರ್ಜಲ ಕುಸಿತದಿಂದ ನೀರಿನ ಸಮಸ್ಯೆ ಹೆಚ್ಚಿದ್ದು, ಪಟ್ಟಣದ ಜನರಿಗೆ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ತಿಳಿಸಿದರು.ಸೋಮವಾರ ಪಟ್ಟಣದ 2ನೇ ವಾರ್ಡ್‌ನಲ್ಲಿ ಕೊಳವೆಬಾವಿ ಕೊರೆಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ನೀರಿನ ಸಮಸ್ಯೆ ಪರಿಹಾರಕ್ಕಾಗಿ ಈಗಾಗಲೇ ಎರಡು ಕೊಳವೆಬಾವಿ ಕೊರೆಸಲಾಗಿದೆ. ಪಟ್ಟಣದ ಹಳೆಯ ಕೊಳವೆ ಬಾವಿಗಳ ಪುನಃಶ್ಚೇತನಕ್ಕೆ ಕ್ರಮ ಕೈಗೂಳ್ಳಲಾಗಿದೆ. ಬರ ಪರಿಹಾರ ಕಾಮಗಾರಿಗಳಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಒತ್ತು ನೀಡಿ ಪಟ್ಟಣದ ಜನರಿಗೆ ನೀರಿನ ಸಮಸ್ಯೆ ತಲೆದೋರದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಬಿಳಿಚೌಡಯ್ಯ, ಜಿಲ್ಲಾ ಪಂಚಾಯಿತ್ ಸದಸ್ಯೆ ರತ್ನಮ್ಮ ಗೋಪಾಲಸ್ವಾಮಿ, ತಾಲ್ಲೂಕು ಪಂಚಾಯಿತಿ ಸದಸ್ಯ ಲಕ್ಷ್ಮಣ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿ.ವಾಸಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಶ್ಯಾಮ್‌ಸುಂದರ್, ಆರೀಫ್ ಜಾನ್, ಬಿ.ಎಲ್. ವೆಂಕಟೇಶ್, ಪುಷ್ಪ ಪ್ರಕಾಶ್, ಇಂತಿಯಾಜ್, ವಿಶಾಲಕ್ಷಮ್ಮ, ಸಂಜಯ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹನುಮಪ್ಪ, ಕಾಚಿಘಟ್ಟ ಸುರೇಶ್, ಚಿಕ್ಕಾರಹಳ್ಳಿ ಬಸವರಾಜ್, ತಿಪ್ಪಾಗಟ್ಟ ಮಹಾಲಿಂಗಪ್ಪ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry