ಮಂಗಳವಾರ, ಮೇ 11, 2021
27 °C

ನೀರಿನ ಸಮಸ್ಯೆ: ಗ್ರಾಮಸ್ಥರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೌರಿಬಿದನೂರು: ತಾಲ್ಲೂಕಿನ ಕುಂದಿಹಳ್ಳಿ ಮತ್ತು ಜಾಲಹಳ್ಳಿ ಗ್ರಾಮಗಳಲ್ಲಿ ಮೂರು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆಯು ತೀವ್ರ ಸ್ವರೂಪದಲ್ಲಿ ತಲೆದೋರಿದ್ದು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.~ಮೂರು ತಿಂಗಳ ಹಿಂದೆ ನಮ್ಮ ಗ್ರಾಮಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದರು. ಎರಡು ಕೊಳವೆ ಬಾವಿಗಳನ್ನು ಸಹ ಕೊರೆಸಲಾಗಿತ್ತು. ಒಂದು ಕೊಳೆವೆ ಬಾವಿಯಲ್ಲಿ ನೀರೇ ಸಿಗಲಿಲ್ಲ, ಮತ್ತೊಂದನ್ನು 700 ಅಡಿಗಳವರೆಗೆ ಕೊರೆದರೂ ಒಂದು ಹನಿ ನೀರು ಲಭ್ಯವಾಗಿಲ್ಲ.

 

ಕೊಳವೆ ಬಾವಿಗಳಿಗೆ ಕಡಿಮೆ ಸಾಮರ್ಥ್ಯದ ಮೋಟಾರ್ ಅಳವಡಿಸಿರುವುದರಿಂದಲೇ ಇಷ್ಟೆಲ್ಲ ಸಮಸ್ಯೆ ನಿರ್ಮಾಣವಾಗಿದೆ~ ಎಂದು ಆಕ್ರೋಶದಿಂದ ಗ್ರಾಮಸ್ಥರು ~ಪ್ರಜಾವಾಣಿ~ ಜತೆ ಹಂಚಿಕೊಂಡರು.`ಸುಡುವ ಬಿಸಿಲಿನಲ್ಲಿ ಮಹಿಳೆಯರು ಸುಮಾರು 3 ಕಿ.ಮೀ.ವರೆಗೆ ನಡೆದುಕೊಂಡು ಹೋಗಿ ನೀರು ತರಬೇಕು. ಜಾನುವಾರುಗಳು ಪಡುತ್ತಿರುವ ಪಾಡು ಅಷ್ಟಿಷ್ಟಲ್ಲ. ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸಬೇಕಾದ ಸ್ಥಳೀಯ ಆಡಳಿತ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಮ್ಮ ಗ್ರಾಮಗಳಿಗೆ ಭೇಟಿ ನೀಡುವುದಿಲ್ಲ ~ ಎಂದು ರೈತ ನಾಗರಾಜ ತಿಳಿಸಿದರು.`ಬಸವ ಜಯಂತಿಯೊಳಗಾಗಿ  ನೀರಿನ ಸಮಸ್ಯೆ ಬಗೆಹರಿಸಬೇಕು. ಇದೇ ರೀತಿಯ ನಿರಾಸಕ್ತಿ, ನಿರ್ಲಕ್ಷ್ಯ ಧೋರಣೆ ಮುಂದುವರೆಸಿದರೆ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು~ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡ್ದ್ದಿದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.