ಶುಕ್ರವಾರ, ಮೇ 7, 2021
19 °C

ನೀರಿನ ಸಮಸ್ಯೆ: ಡಿಸಿ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಡಗೋಡ: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಪಟ್ಟಣ ಪಂಚಾಯ್ತಿ ವತಿಯಿಂದ ನಂದೀಶ್ವರ ನಗರದಲ್ಲಿ ನಿರ್ಮಿಸಲಾಗಿರುವ  ನೀರಿನ ಸಣ್ಣ ತೊಟ್ಟಿಯನ್ನು ಜಿಲ್ಲಾಧಿಕಾರಿ ಇಮ್‌ಕೋಂಗ್ಲಾ ಜಮೀರ್ ಬುಧವಾರ ಪರಿಶೀಲಿಸಿದರು.ನೀರಿನ ತೊಟ್ಟಿಯಿಂದ ಸಮರ್ಪಕವಾಗಿ ನೀರು ಸರಬರಾಜು ಮಾಡುವಂತೆ ಸೂಚಿಸಿದ ಜಮೀರ್, ಸುತ್ತಲೂ ಸ್ವಚ್ಛಗೊಳಿಸುವಂತೆ ಹೇಳಿದರು. ನೀರಿನ ತೊಟ್ಟಿಗೆ ಅಳವಡಿಸಿರುವ ನಲ್ಲಿ ಚರಂಡಿಯತ್ತ ಮುಖ ಮಾಡಿರುವುದನ್ನು ಬದಲಾಯಿಸಿ ಇನ್ನೊಂದು ಬದಿಗೆ ಅಳವಡಿಸುವಂತೆ ಸೂಚಿಸಿದರು. ಚರಂಡಿಗಳನ್ನು ಸ್ವಚ್ಛಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.ನಂದೀಶ್ವರ ನಗರದಲ್ಲಿ ನಿರ್ಮಿಸಲಾಗಿರುವ ಕಾಂಕ್ರೀಟ್ ರಸ್ತೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ರಸ್ತೆಯ ಎರಡೂ ಬದಿಗೆ ಸಮತಟ್ಟು ನಿರ್ಮಿಸುವಂತೆ ಸೂಚಿಸಿದರು. ನಂತರ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಕುಡಿಯುವ ನೀರು ಸಂಗ್ರಹಣಾ ಘಟಕವನ್ನು ವೀಕ್ಷಿಸಿದರು. ಕುಡಿಯುವ ನೀರು ಘಟಕದ ಪೈಪ್‌ಗಳಲ್ಲಿ ನೀರು ಸೋರಿಕೆಯಾಗುತ್ತಿರುವುದನ್ನು ಕಂಡು, ಪೈಪಗಳನ್ನು ಬದಲಿಸಿ ನೀರು ಪೋಲಾಗದಂತೆ ಕ್ರಮ ಕೈಗೊಳ್ಳುವಂತೆ ನಿಲ್ದಾಣಾಧಿಕಾರಿಗೆ ಹೇಳಿದರು.ಬಸ್ ನಿಲ್ದಾಣದ ಹಿಂಬದಿಯಲ್ಲಿ ಸಣ್ಣಮಕ್ಕಳು ಮಲಮೂತ್ರ ವಿಸರ್ಜನೆ ಮಾಡುತ್ತಿರುವುದನ್ನು ಕಂಡ ಜಿಲ್ಲಾಧಿಕಾರಿಗಳು ಆವರಣದಲ್ಲಿ ಸ್ವಚ್ಛತೆಯನ್ನು ಕಾಪಾಡುವತ್ತ ಗಮನಹರಿಸಿ,  ಇಂತಹ ವ್ಯವಸ್ಥೆ ಮುಂದುವರಿಯದಂತೆ ಕ್ರಮ ಕೈಗೊಳ್ಳಿ ಎಂದರು.

ತಹಶೀಲ್ದಾರ ಬಿ.ಆರ್.ಪಾಟೀಲ, ಪ.ಪಂ. ಮುಖ್ಯಾಧಿಕಾರಿ ಗಿರೀಶ, ಇಂಜಿನಿಯರ ರಾಜೇಶ, ಸಿಬ್ಬಂದಿ ಚಂದ್ರು ಕುದಳೆ  ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.