ಶುಕ್ರವಾರ, ಏಪ್ರಿಲ್ 23, 2021
27 °C

ನೀರಿನ ಸಮಸ್ಯೆ ನಿವಾರಣೆಗೆ ಮಹಿಳೆಯರ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕವಿತಾಳ: ಪಟ್ಟಣದ 1ನೇ ವಾರ್ಡ್‌ನಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು ಪರಿಹರಿಸುವಂತೆ ಬುಧವಾರ ಗ್ರಾಮ ಪಂಚಾಯಿತಿಗೆ ದಿಢೀರನೇ ಆಗಮಿಸಿದ ಮಹಿಳೆಯರು ಒತ್ತಾಯಿಸಿದರು.ಬೆಳಿಗ್ಗೆ ಧ್ವಜಾರೋಹಣ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಗ್ರಾಮ ಪಂಚಾಯಿತಿ ಕಾರ್ಯಲಯಕ್ಕೆ ಆಗಮಿಸಿದ ಮಹಿಳೆಯರ ಸಹಿತ ವಾರ್ಡ್‌ನ ನಿವಾಸಿಗಳು ಕುಡಿಯುವ ನೀರಿನ ಸಮಸ್ಯೆಯ ತೀವ್ರತೆ ಕುರಿತು ವಿವರಿಸಿದರು.ಕಳೆದ ಒಂದು ತಿಂಗಳಿಂದ ನೀರು ಸರಬರಾಜು ಸಂಪೂರ್ಣ ಸ್ಥಗಿತವಾಗಿದ್ದು ನೀರಿಗಾಗಿ ಪಕ್ಕದ ವಾರ್ಡ್‌ಗೆ ಅಲೆಯುವಂತಾಗಿದೆ ಎಂದು ಮಹಿಳೆಯರು ಆರೋಪಿಸಿದರು. 1ನೇ ವಾರ್ಡ್‌ಗೆ ನೀರು ಪೂರೈಸಲು ಖಾಸಗಿ ಕೊಳವೆಭಾವಿಯನ್ನು ಲೀಸ್ ಪಡೆಯಲಾಗಿದೆ ಮತ್ತು ದೋಬಿಘಾಟ್ ಕೊಳವೆಭಾವಿಯ ವಿದ್ಯುತ್ ಬಿಲ್ ಪಾವತಿಸಿ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಭಿವೃದ್ಧಿ ಅಧಿಕಾರಿ ಪಂಪನಗೌಡ ಸಮಜಾಯಿಷಿ ನೀಡಿದರು.ಪ್ರತಿದಿನ ಸರದಿ ಪ್ರಕಾರ ನೀರು ಸರಬರಾಜು ಮಾಡಲಾಗುವುದು ಮತ್ತು ನಿಯಂತ್ರಣ ವಾಲ್ವ್‌ಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು. ಶಿವಲಿಂಗಪ್ಪ ಸಜ್ಜನ, ಅಯ್ಯಣ್ಣ ಸಜ್ಜನ, ಪ್ರತಿಭಾ ಪುರುಷೋತ್ತಮ ಇಲ್ಲೂರು, ನರಸಮ್ಮ ಮತ್ತು ಕಿಷ್ಟಯ್ಯ ಹೊಟೇಲ್ ಇತರರು ಇದ್ದರು. ಗ್ರಾಮ ಪಂಚಾಯಿತಿ ಸದಸ್ಯ ದಿಲೀಪ್‌ಸಾಬ್ ಇದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.