ನೀರಿನ ಸಮಸ್ಯೆ ಪರಿಹರಿಸಿ

7

ನೀರಿನ ಸಮಸ್ಯೆ ಪರಿಹರಿಸಿ

Published:
Updated:

ಗಿರಿನಗರ ವಾರ್ಡ್ ಕತ್ರಿಗುಪ್ಪೆ ಜಲಮಂಡಳಿ ಕಚೇರಿಗೆ ಸೇರಿದ ಮಂಜುನಾಥ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿರುವ ಎಸ್.ಬಿ.ಎಂ. ಕಾಲೊನಿ 9, 10, 10ಎ, 11, 2ನೇ ಮತ್ತು 2ನೇ ‘ಎ’ ಮುಖ್ಯ ರಸ್ತೆಗಳಲ್ಲಿ ವಾಸ ಮಾಡುವ ನಾಗರೀಕರಿಗೆ ಕತ್ರಿಗುಪ್ಪೆ ಜಲಮಂಡಳಿ ಕಚೇರಿ ಕುಡಿಯುವ ನೀರನ್ನು ಸರಿಯಾಗಿ ಪೂರೈಸದೆ ವಿನಾ ಕಾರಣ ಇಲ್ಲಿನ ನಾಗರೀಕರಿಗೆ ಕೆಲವು ತಿಂಗಳಿಂದ ತೊಂದರೆ ಕೊಡುತ್ತಿದ್ದಾರೆ.ಈ ವಿಚಾರವಾಗಿ ಸಂಬಂಧಪಟ್ಟ ಬಿ.ಡಬ್ಲ್ಯು.ಎಸ್.ಎಸ್.ಬಿ. ಕಚೇರಿಯ ಎಂಜಿನಿಯರುಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಇದರ ಬಗ್ಗೆ ಇಲ್ಲಿನ ನಾಗರಿಕರು ಪ್ರಶ್ನಿಸಿದರೆ ಹಂಚಿಕಡ್ಡಿಯ ರೂಪದಲ್ಲಿ ಬಣ್ಣ ಮಿಶ್ರಿತ ನೀರು ಪೂರೈಸಿ ನಾವು ಪೂರೈಸುವ ಟ್ಯಾಂಕ್‌ನಲ್ಲಿ ನೀರಿಲ್ಲ ಎಂದು ಜಾರಿಕೊಳ್ಳುತ್ತಾರೆ. ಕೆ.ಆರ್.ಎಸ್.ನಲ್ಲಿ ನೀರು ತುಂಬಿ ತುಳುಕುತ್ತಿದ್ದರೂ ಮೇಲ್ಕಂಡ ಬಡಾವಣೆಯ ನಾಗರಿಕರಿಗೆ ಕುಡಿಯಲು ನೀರು ಬಿಡದೆ ವಿನಾ ಕಾರಣ ತೊಂದರೆ ನೀಡುತ್ತಿದ್ದಾರೆ.ಸಂಬಂಧಪಟ್ಟ ಅಧಿಕಾರಿಗಳು ಈ ಮೇಲ್ಕಂಡ ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ನೀರಿನ ಸೋರಿಕೆ ತಡೆಗಟ್ಟಲು ಮೇಲ್ಕಂಡ ರಸ್ತೆಯ ಹಳೆ ಪೈಪುಗಳನ್ನು ತೆಗೆದು ಹೊಸ ಪೈಪುಗಳನ್ನು ಅಳವಡಿಸಬೇಕಾಗಿ ಮನವಿ ಮಾಡಿಕೊಳ್ಳುತ್ತೇನೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry