ಭಾನುವಾರ, ಜೂನ್ 13, 2021
21 °C
ಮೊದಲ ಸಭೆಯಲ್ಲೇ ಈ ಬಗ್ಗೆ ನಿರ್ಧಾರ

ನೀರಿನ ಹೆಚ್ಚುವರಿ ಕಂದಾಯ ಇಳಿಸುವ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ನಗರಪಾಲಿಕೆಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ನೀರಿನ ಕಂದಾಯವನ್ನು ಅವೈಜ್ಞಾನಿಕವಾಗಿ ಮೂರುಪಟ್ಟು ಹೆಚ್ಚಿಸಿದೆ (ರೂ. 650ರಿಂದ ರೂ.2100ಕ್ಕೆ). ಈ ಹೆಚ್ಚುವರಿ ಕಂದಾಯ ವಸೂಲಿ ಆದೇಶ ರದ್ದು ಪಡಿಸಲಾಗುವುದು ಎಂದು ಪಾಲಿಕೆಯ ನೂತನ ಸದಸ್ಯ ಶಿವನಳ್ಳಿ ರಮೇಶ್‌ ಭರವಸೆ ನೀಡಿದರು.ಮೇಯರ್ ಚುನಾವಣೆ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ನಂತರ ನಡೆಯುವ ಪಾಲಿಕೆಯ ಮೊದಲ ಸಭೆಯಲ್ಲಿಯೇ ಈ ಬಗ್ಗೆ ನಿರ್ಧಾರ ಕೈಗೊಂಡು, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಶಿವಶಂಕರಪ್ಪ ಹಾಗೂ ಶಾಸಕ ಎಸ್‌.ಎಸ್‌. ಮಲ್ಲಿಕಾರ್ಜುನ ಅವರು ನೀರಿನ ಕಂದಾಯ ಇಳಿಕೆಯ ಪರವಾಗಿದ್ದಾರೆ.ಮುಂದಿನ ದಿನಗಳಲ್ಲಿ ಕಡಿಮೆ ತೆರಿಗೆ ವಿಧಿಸಿ ಶುದ್ಧ ಕುಡಿಯುವ ನೀರು ನೀಡುವ ಕೆಲಸ ಮಾಡಲಾಗುವುದು ಎಂದು ಹೇಳಿದರು. ಈಗಾಗಲೇ ಹೆಚ್ಚುವರಿ ಕಂದಾಯ ಕಟ್ಟಿರುವವರಿಗೆ, ಮುಂದಿನ ಕಂದಾಯ ಸ್ವೀಕಾರದ ಅವಧಿಯಲ್ಲಿ ಹಣವನ್ನು ಹೊಂದಾಣಿಕೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ಭ್ರಷ್ಟಾಚಾರರಹಿತ ಹಾಗೂ ನಾಗರಿಕ ಸ್ನೇಹಿ ಆಡಳಿತ ಕೊಡಲಾಗುವುದು. ಜನರ ಆಶೋತ್ತರ ಈಡೇರಿಸಿ, ಜನಮೆಚ್ಚುವ ಕೆಲಸ ಮಾಡುತ್ತೇವೆ ಎಂದರು.‘ನಗರದಲ್ಲಿ 25ರಿಂದ 26 ಸಾವಿರ ಮನೆಗಳನ್ನು ಕಂದಾಯ ನಿವೇಶನದಲ್ಲಿ ನಿರ್ಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಕ್ರಮ ಸಕ್ರಮಕ್ಕೆ ಕ್ರಮ ಕೈಗೊಳ್ಳಲಾಗುವುದು. ದೂಳು ಮುಕ್ತ ನಗರ ರೂಪಿಸುವುದು ನಮ್ಮೆಲ್ಲರ ಗುರಿ’ ಎಂದರು.ಮೇಯರ್‌ ರೇಣುಕಾಬಾಯಿ, ಉಪ ಮೇಯರ್‌ ಅಬ್ದುಲ್‌ ಲತೀಫ್‌, ಸದಸ್ಯರಾದ ದಿನೇಶ್‌ ಕೆ.ಶೆಟ್ಟಿ, ಚಮನ್‌ಸಾಬ್‌ ಮೊದಲಾದವರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.